Shah Rukh Khan : ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆಯಲ್ಲಿ ಮಿಂಚಿದ ಶಾರುಖ್‌..! ವಿಡಿಯೋ ವೈರಲ್‌

Shah Rukh Khan in Modi oath ceremoney : ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ದೇಶದ ಪ್ರಧಾನಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ನಮೋ ಪ್ರಮಾಣ ವಚನ ಸಮಾರಂಭವು ರಾಷ್ಟ್ರಪತಿ ಭವನದ ಅಂಗಳದಲ್ಲಿ ನಡೆಯುತ್ತಿದೆ. ಈ ವಿಶೇಷ ಕ್ಷಣದಲ್ಲಿ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಭಾಗವಹಿಸಿದ್ದರು.

Written by - Krishna N K | Last Updated : Jun 9, 2024, 08:03 PM IST
    • ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೋದಿ
    • ಈ ವಿಶೇಷ ಕ್ಷಣದಲ್ಲಿ ಬಾಲಿವುಡ್‌ ನಟ ನಟಿಯರು ಭಾಗವಹಿಸಿದ್ದರು.
    • ಬಾಲಿವುಡ್ ಕಿಂಗ್ ಶಾರುಖ್ ಖಾನ್ ಕೂಡ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ್ದಾರೆ.
Shah Rukh Khan : ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆಯಲ್ಲಿ ಮಿಂಚಿದ ಶಾರುಖ್‌..! ವಿಡಿಯೋ ವೈರಲ್‌ title=

PM Narendra modi Oath ceremoney : ನರೇಂದ್ರ ಮೋದಿ ಅವರು ಇಂದು ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಭವ್ಯ ಕಾರ್ಯಕ್ರಮದಲ್ಲಿ ಹಲವು ನಾಯಕರು ಮತ್ತು ನಟರು ಸಹ ಭಾಗವಹಿಸಿದ್ದಾರೆ. ಈ ವಿಶೇಷ ಕ್ಷಣದ ಭಾಗವಾಗಲು ಬಾಲಿವುಡ್ ಕಿಂಗ್ ಶಾರುಖ್ ಖಾನ್ ಕೂಡ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ್ದಾರೆ. 

ಪಂಡಿತ್ ಜವಾಹರಲಾಲ್ ನೆಹರು ನಂತರ, ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ದೇಶದ ಪ್ರಧಾನಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ನಮೋ ಪ್ರಮಾಣ ವಚನ ಸಮಾರಂಭವು ರಾಷ್ಟ್ರಪತಿ ಭವನದ ಅಂಗಳದಲ್ಲಿ ನಡೆಯುತ್ತಿದೆ. ದೇಶದ ರಾಜಕಾರಣಿಗಳಿಂದ ಹಿಡಿದು ನಟ ನಟಿಯರವರೆಗೂ ಎಲ್ಲರೂ ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಬಾಲಿವುಡ್ ಕಿಂಗ್ ಶಾರುಖ್ ಖಾನ್, ಅಕ್ಷಯ್‌ ಕುಮಾರ್‌ ಈ ವಿಶೇಷ ಕ್ಷಣಗಳಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: ಪ್ರಮಾಣ ವಚನ ಬಳಿಕ ಪ್ರಧಾನಿ ಮೋದಿಗೆ ಮೃಷ್ಟಾನ್ನ ಭೋಜನ...! ಮೆನು ಕೇಳಿದ್ರೆ ಶಾಕ್‌ ಆಗ್ತೀರಾ..

ಈ ಸಮಾರಂಭದ ಹಲವು ಫೋಟೋಗಳು ಮತ್ತು ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿವೆ. ಇದರಲ್ಲಿ ಅನೇಕ ನಾಯಕರು ಮತ್ತು ಬಾಲಿವುಡ್ ಸೆಲೆಬ್ರಿಟಿಗಳನ್ನು ಕಾಣಬಹುದು. ಶಾರುಖ್ ಖಾನ್ ಕಪ್ಪು ಉಡುಪು ತೊಟ್ಟು ರಾಯಲ್ ಆಗಿ ಕಾರ್ಯಕ್ರಮಕ್ಕೆ ಬಂದಿದ್ದರು. 

ಇನ್ನು ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಅಕ್ಷಯ್ ಕುಮಾರ್ ಅವರನ್ನು ಭೇಟಿಯಾಗಿ ಉಭಯ ಕುಶಲೋಪರಿ ವಿಚಾರಿಸಿದರು. ಮಥುರಾ ಲೋಕಸಭಾ ಕ್ಷೇತ್ರದಿಂದ ಜಯಗಳಿಸಿದ ಬಿಜೆಪಿಯ ನೂತನ ಸಂಸದೆ ಹೇಮಾ ಮಾಲಿನಿ ಕೂಡ ಈ ವಿಶೇಷ ಸಂದರ್ಭಕ್ಕೆ ಆಗಮಿಸಿದ್ದರು. ಕಿಂಗ್ ಖಾನ್ ಹೊರತಾಗಿ, ನಟಿ ಮತ್ತು ಮಂಡಿಯಿಂದ ಬಿಜೆಪಿ ಸಂಸದ ಕಂಗನಾ ರನೌತ್, ಅಕ್ಷಯ್ ಕುಮಾರ್, ಅನುಪಮ್ ಖೇರ್, ರಜನಿಕಾಂತ್ ಮತ್ತು ಅನಿಲ್ ಕಪೂರ್ ಮುಂತಾದ ತಾರೆಗಳು ಹಾಜರಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News