ರಾಜ್ಯಸಭೆಗೆ ಆಯ್ಕೆಯಾದ ಅಮಿತ್ ಶಾ

    

Last Updated : Dec 15, 2017, 12:51 PM IST
ರಾಜ್ಯಸಭೆಗೆ ಆಯ್ಕೆಯಾದ ಅಮಿತ್ ಶಾ title=
ಫೋಟೋ:ಪಿಟಿಐ

ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಮೋದಿಯ ಪರಮಾಪ್ತ ಅಮಿತಾ ಶಾ ಶುಕ್ರವಾರದಂದು ರಾಜ್ಯಸಭೆ ಆಯ್ಕೆಯಾಗಿದ್ದಾರೆ. ಪಕ್ಷದ ಮುಖ್ಯಸ್ಥರಾಗಿ ಲೋಕಸಭಾ ಚುನಾವಣೆ ಮತ್ತು ಹಲವಾರು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯನ್ನು ಗೆಲ್ಲುವುದಕ್ಕೆ ನೆರವಾಗಿರುವ ಶಾ ಅವರ ನಾಯಕತ್ವವನ್ನು ಪರಿಗಣಿಸಿ, ಈಗ ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ. 

ಅಮಿತ್ ಶಾ ರವರಿಗೆ ರಾಜ್ಯಸಭೆಯಲ್ಲಿ ಮುಂದಿನ ಸಾಲಿನಲ್ಲಿ ಪ್ರಧಾನಮಂತ್ರಿಗಳ ಪಕ್ಕ ಕುಳಿತು ಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಇದಕ್ಕೂ ಮುಂಚೆ ಸದ್ಯ ಉಪರಾಷ್ಟ್ರಪತಿಗಳಾಗಿರುವ ವೆಂಕಯ್ಯನಾಯ್ಡು ಈ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದರು. ಶಾ ಅಗಷ್ಟ ತಿಂಗಳಲ್ಲಿ ಗುಜರಾತಿನಿಂದ ರಾಜ್ಯಸಭಾಗೆ ಆಯ್ಕೆಯಾಗಿದ್ದರು. ಆದರೆ ಈಗ ಅಧಿವೇಶನ  ಪ್ರಾರಂಭವಾಗುತ್ತಿರುವುದರಿಂದ ಇದೆ ಮೊದಲ ಬಾರಿಗೆ ಅವರು ಅಧಿವೇಶನಕ್ಕೆ ಹಾಜರಾಗುತ್ತಿದ್ದಾರೆ ಆದರ ಪ್ರಯುಕ್ತ ಬಿಜೆಪಿ ಸದಸ್ಯರು ಶಾ ರವರನ್ನು ಗುರುವಾರದಂದು ಸನ್ಮಾನಿಸಿದರು.

ಇದೆ ಸಂಧರ್ಭದಲ್ಲಿ  ಮೋದಿಯವರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ವಿಚಾರದ ಬಗ್ಗೆ ಪತ್ರಕರ್ತರು ಅಮಿತ್ ಶಾ ರನ್ನು ವಿಚಾರಿಸಿದಾಗ ಇದಕ್ಕೆ ಉತ್ತರಿಸಿದ ಶಾ ಪಕ್ಷದ ಸಂಘಟನೆಯಲ್ಲಿ ನಾನು ಸಂತುಷ್ಟನಾಗಿದ್ದೇನೆ ಯಾವುದೇ ಕಾರಣಕ್ಕೂ ನಾನು ಸಂಪುಟ ಸೇರುವುದಿಲ್ಲ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ರಾಜ್ಯಸಭೆಯಲ್ಲಿ ಬಿಜೆಪಿಯ ಪ್ರಭಾವ ಕಡಿಮೆ ಇರುವುದರಿಂದ ಶಾ ರವರ ಮೇಲ್ಮನೆಯಲ್ಲಿನ ಉಪಸ್ಥಿತಿ ಪಕ್ಷಕ್ಕೆ ಬಲ ನೀಡಲಿದೆ ಎಂದು ಊಹಿಸಲಾಗುತ್ತಿದೆ. 

Trending News