India-China: ಚೀನಾಕ್ಕೆ ಪಾಠ ಕಲಿಸಲು ಹಸಿಮಾರಾ ಏರ್‌ಬೇಸ್‌ನಲ್ಲಿ ರಫೇಲ್ ನಿಯೋಜಿಸಿದ ಭಾರತ

ಕುತಂತ್ರಿ ಚೀನಾಕ್ಕೆ ಬುದ್ದಿ ಕಲಿಸುವ ನಿಟ್ಟಿನಲ್ಲಿ ಭಾರತವು ಪಶ್ಚಿಮ ಬಂಗಾಳದ ಹಸಿಮಾರ ವಾಯುನೆಲೆಯಲ್ಲಿ (Hasimara Airbase) ಯುದ್ಧ ವಿಮಾನ ರಫೇಲ್ ಅನ್ನು ನಿಯೋಜಿಸಿದೆ. ಸರ್ಕಾರದ ಈ ಕ್ರಮದಿಂದ, ದೇಶದ ಪೂರ್ವ ಗಡಿಯಲ್ಲಿ ಬಲವಾದ ಮೇಲ್ವಿಚಾರಣೆ ನಡೆಯಲಿದೆ ಮತ್ತು ಇಲ್ಲಿಂದ ಚೀನಾದ ಮೇಲೆ ನಿಗಾ ಇಡಬಹುದಾಗಿದೆ.  

Written by - Yashaswini V | Last Updated : Jul 29, 2021, 09:49 AM IST
  • ಪಶ್ಚಿಮ ಬಂಗಾಳದ ಹಸಿಮರ ವಾಯುನೆಲೆಯಲ್ಲಿ ರಫೇಲ್ ನಿಯೋಜಿಸಿದ ಭಾರತೀಯ ವಾಯುಪಡೆ
  • ಪಶ್ಚಿಮ ಬಂಗಾಳದ ಹಸಿಮಾರ ವಾಯುನೆಲೆ ಈ ಹಿಂದೆ ಮಿಗ್ 27 ಸ್ಕ್ವಾಡ್ರನ್ ಹೊಂದಿತ್ತು
  • ಇದೀಗ ರಫೇಲ್ ಜೆಟ್‌ಗಳನ್ನು ಸೇರಿಸುವುದರೊಂದಿಗೆ, ದೇಶದ ಪೂರ್ವ ಗಡಿಯಲ್ಲಿ ಬಲವಾದ ಮೇಲ್ವಿಚಾರಣೆ ನಡೆಯಲಿದೆ
India-China: ಚೀನಾಕ್ಕೆ ಪಾಠ ಕಲಿಸಲು ಹಸಿಮಾರಾ ಏರ್‌ಬೇಸ್‌ನಲ್ಲಿ ರಫೇಲ್ ನಿಯೋಜಿಸಿದ ಭಾರತ  title=
ಚೀನಾದ ಹುಟ್ಟಡಗಿಸಲು ದಿಟ್ಟ ಹೆಜ್ಜೆಯಿಟ್ಟ ಭಾರತ (Image courtesy: Twitter)

ನವದೆಹಲಿ: ಗಡಿಯ ಸುತ್ತ ಚೀನಾದ ಹೆಚ್ಚುತ್ತಿರುವ ಚಟುವಟಿಕೆಗಳ ದೃಷ್ಟಿಯಿಂದ ಭಾರತ ಕೂಡ ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ಭಾರತೀಯ ವಾಯುಪಡೆ (ಐಎಫ್‌ಎ) ಬುಧವಾರ ಪೂರ್ವ ಏರ್ ಕಮಾಂಡ್ (ಇಎಸಿ) ಅಡಿಯಲ್ಲಿ ಹಸಿಮಾರಾ ವಾಯುನೆಲೆಯಲ್ಲಿ  (Hasimara Airbase) ರಫೇಲ್ (Rafale) ಅನ್ನು ನಿಯೋಜಿಸಿದೆ. ಫೈಟರ್ ಜೆಟ್ ರಫೇಲ್ ಅನ್ನು 101 ಸ್ಕ್ವಾಡ್ರನ್‌ನಲ್ಲಿ ಸೇರಿಸಲಾಗಿದೆ.  ಭೂತಾನ್‌ನ ಸಾಮೀಪ್ಯದಿಂದಾಗಿ ಹಸಿಮರ ಏರ್‌ಬೇಸ್ ಭಾರತೀಯ ವಾಯುಪಡೆಯ ಕಾರ್ಯಾಚರಣೆಗಳಿಗೆ ಒಂದು ಕಾರ್ಯತಂತ್ರದ ನೆಲೆಯಾಗಿದ್ದು, ಪಶ್ಚಿಮ ಬಂಗಾಳದ ಹಸಿಮಾರ ವಾಯುನೆಲೆ ಈ ಹಿಂದೆ ಮಿಗ್ 27 ಸ್ಕ್ವಾಡ್ರನ್ ಹೊಂದಿತ್ತು.

ಏರ್ ಚೀಫ್ ಮಾರ್ಷಲ್ ಉಪಸ್ಥಿತರಿದ್ದರು:
ವಾಯುಪಡೆಯ ಪೂರ್ವ ಕಮಾಂಡ್‌ನ 101 ಸ್ಕ್ವಾಡ್ರನ್‌ನಲ್ಲಿ ರಫೇಲ್ ಜೆಟ್‌ಗಳನ್ನು (Rafale Jets) ಸೇರಿಸುವುದರೊಂದಿಗೆ, ದೇಶದ ಪೂರ್ವ ಗಡಿಯಲ್ಲಿ ಬಲವಾದ ಮೇಲ್ವಿಚಾರಣೆ ನಡೆಯಲಿದೆ ಮತ್ತು ಇಲ್ಲಿಂದ ಚೀನಾದ ಮೇಲೆ ನಿಕಟ ಕಾವಲು ಇಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್. ಭಡೌರಿಯಾ (Air Chief Marshal RKS Bhadauria)  ಪೂರ್ವ ವಲಯದಲ್ಲಿ ವಾಯುಪಡೆಯ ಸಾಮರ್ಥ್ಯವನ್ನು ಬಲಪಡಿಸುವ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಹಸೀಮರಾದಲ್ಲಿ ರಫೇಲ್ ಅನ್ನು ಸೇರಿಸುವ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಲಾಗಿದೆ. ದೇಶದ ಪೂರ್ವ ಗಡಿಯಲ್ಲಿ ವಾಯುಪಡೆಯ ಬಲವನ್ನು ಹೆಚ್ಚಿಸುವಲ್ಲಿ ರಫೇಲ್ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ- Aero India : ಭವಿಷ್ಯದ ಅತಿದೊಡ್ಡ ಆಯುಧದ ಫಸ್ಟ್ ಝಲಕ್ ಅನಾವರಣಗೊಳಿಸಿದ HAL

ರಫೇಲ್ ಹೊಂದಿದ ಎರಡನೇ ಸ್ಕ್ವಾಡ್ರನ್:
101 ಸ್ಕ್ವಾಡ್ರನ್ ರಫೇಲ್ ವಿಮಾನಗಳನ್ನು (Rafale Jets) ಹೊಂದಿದ ಎರಡನೇ ಐಎಎಫ್ ಸ್ಕ್ವಾಡ್ರನ್ ಆಗಿದೆ. ಇದು ಮೇ 1, 1949 ರಂದು ಪಾಲಂನಲ್ಲಿ ರೂಪುಗೊಂಡಿತು ಮತ್ತು ಹಾರ್ವರ್ಡ್, ಸ್ಪಿಟ್‌ಫೈರ್, ವ್ಯಾಂಪೈರ್, ಸುಖೋಯ್ -7 ಮತ್ತು ಮಿಗ್ -21 ಎಂ ನಂತಹ ವಿಮಾನಗಳನ್ನು ನಿರ್ವಹಿಸಿದೆ. ಈ ಸ್ಕ್ವಾಡ್ರನ್ 1965 ಮತ್ತು 1971 ರ ಇಂಡೋ-ಪಾಕಿಸ್ತಾನಿ ಯುದ್ಧದಲ್ಲೂ ಭಾಗವಹಿಸಿತು. ಜುಲೈ 29, 2020 ರಂದು ಐದು ರಫೆಲ್ ವಿಮಾನಗಳ ಮೊದಲ ಬ್ಯಾಚ್ ಇಳಿದ ನಂತರ, ಅಂಬಾಲಾದಲ್ಲಿ ಮೊದಲ ಸ್ಕ್ವಾಡ್ರನ್ ರಚನೆಯಾಯಿತು. ಈ ವಿಮಾನಗಳನ್ನು ಸೆಪ್ಟೆಂಬರ್ 10 ರಂದು ಅಂಬಾಲಾ ವಾಯುನೆಲೆಯಲ್ಲಿ 17 ಗೋಲ್ಡನ್ ಏರೋ ಸ್ಕ್ವಾಡ್ರನ್‌ಗೆ ಸೇರಿಸಲಾಯಿತು.

ಇದನ್ನೂ ಓದಿ- ಅತ್ಯಂತ ಶಕ್ತಿಶಾಲಿ ಫೈಟರ್ ಜೆಟ್ ರಫಲ್ ಬಗೆಗಿನ 10 ಪ್ರಮುಖ ವೈಶಿಷ್ಟ್ಯಗಳಿವು

36 ಫೈಟರ್ ಜೆಟ್‌ಗಳು ಸಹಿ ಹಾಕಿವೆ:
ಸುಮಾರು 58,000 ಕೋಟಿ ರೂ.ಗಳ ವೆಚ್ಚದಲ್ಲಿ 36 ರಫೇಲ್ ಫೈಟರ್ ಜೆಟ್‌ಗಳನ್ನು ಖರೀದಿಸಲು ಭಾರತ 2016 ರ ಸೆಪ್ಟೆಂಬರ್‌ನಲ್ಲಿ ಫ್ರಾನ್ಸ್‌ನೊಂದಿಗೆ ಅಂತರ್ ಸರ್ಕಾರಿ ಒಪ್ಪಂದಕ್ಕೆ ಸಹಿ ಹಾಕಿತ್ತು. ರಫೇಲ್ 4.5 ತಲೆಮಾರಿನ ವಿಮಾನವಾಗಿದ್ದು, ಇತ್ತೀಚಿನ ಶಸ್ತ್ರಾಸ್ತ್ರಗಳು, ಉತ್ತಮ ಸಂವೇದಕಗಳು ಮತ್ತು ಸಂಪೂರ್ಣ ಸಂಯೋಜಿತ ವಾಸ್ತುಶಿಲ್ಪವನ್ನು ಹೊಂದಿದೆ. ಇದು ಒಂದು ಸಮಯದಲ್ಲಿ ಕನಿಷ್ಠ ನಾಲ್ಕು ಕಾರ್ಯಗಳನ್ನು ನಿರ್ವಹಿಸಬಲ್ಲದು. ರಫೆಲ್ ವಿಮಾನವು ಅವಳಿ-ಎಂಜಿನ್ ಮಲ್ಟಿ-ರೋಲ್ ಫೈಟರ್ ವಿಮಾನವಾಗಿದ್ದು, ಪರಮಾಣು ಆಯುಧಗಳನ್ನು ಬಳಸುವ ಸಾಮರ್ಥ್ಯ ಹೊಂದಿದೆ. ಫ್ರೆಂಚ್ ಕಂಪನಿ ಡಸಾಲ್ಟ್ ಏವಿಯೇಷನ್ ​​ಈ ವಿಮಾನವನ್ನು ತಯಾರಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News