Accident ಸಂಭವಿಸುತ್ತಲೇ Ambulenceಗೆ ಮಾಹಿತಿ ಸಿಗಲಿದೆ, Hi-Tech ಸಿಸ್ಟಂ ಸಿದ್ಧತೆಯಲ್ಲಿ ಕೇಂದ್ರ ಸರ್ಕಾರ

Accident On Highway: ರಸ್ತೆಗಳ ಮೇಲೆ ಅಪಘಾತ ಸಂಭವಿಸುತ್ತಲೇ ಇದೀಗ ರಿಯಲ್ ಟೈಮ್ ಇನ್ಫರ್ಮೇಷನ್ ಸಿಗಲಿದೆ. ಶೀಘ್ರದಲ್ಲಿಯೇ ರಸ್ತೆ ದುರ್ಘಟನೆಗೆ ಒಳಗಾದವರಿಗೆ ಕ್ಯಾಶ್ ಲೆಸ್ ಟ್ರೀಟ್ಮೆಂಟ್ ವ್ಯವಸ್ಥೆ ಆರಂಭಗೊಳ್ಳಲಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದ ಜೊತೆಗೇ ಮಾತುಕತೆ ನಡೆಸಲಾಗುತ್ತಿದೆ  ಎಂದು ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವರು ಮಾಹಿತಿ ನೀಡಿದ್ದಾರೆ.

Written by - Nitin Tabib | Last Updated : Feb 7, 2021, 06:34 PM IST
  • ರಸ್ತೆಗಳ ಮೇಲೆ ಅಪಘಾತ ಸಂಭವಿಸುತ್ತಲೇ ಇದೀಗ ರಿಯಲ್ ಟೈಮ್ ಇನ್ಫರ್ಮೇಷನ್ ಸಿಗಲಿದೆ.
  • ಶೀಘ್ರದಲ್ಲಿಯೇ ರಸ್ತೆ ದುರ್ಘಟನೆಗೆ ಒಳಗಾದವರಿಗೆ ಕ್ಯಾಶ್ ಲೆಸ್ ಟ್ರೀಟ್ಮೆಂಟ್ ವ್ಯವಸ್ಥೆ ಆರಂಭಗೊಳ್ಳಲಿದೆ.
  • ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದ ಜೊತೆಗೇ ಮಾತುಕತೆ ನಡೆಸಲಾಗುತ್ತಿದೆ ಎಂದು ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವರು ಮಾಹಿತಿ ನೀಡಿದ್ದಾರೆ.
Accident ಸಂಭವಿಸುತ್ತಲೇ  Ambulenceಗೆ ಮಾಹಿತಿ ಸಿಗಲಿದೆ, Hi-Tech ಸಿಸ್ಟಂ ಸಿದ್ಧತೆಯಲ್ಲಿ ಕೇಂದ್ರ ಸರ್ಕಾರ title=
Accident On Highway (File Photo)

ನವದೆಹಲಿ: Accident On Highway - ರಸ್ತೆ ಅಪಘಾತ ಸಂಭವಿಸಿದ ಕೂಡಲೇ ಗಾಯಗೊಂಡವರಿಗೆ ತಕ್ಷಣ  ಚಿಕಿತ್ಸೆ ನೀಡಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಹತ್ವದ ಯೋಜನೆಯನ್ನು ರೂಪಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದ ನಂತರ ಪೊಲೀಸರು ಮತ್ತು ಆಂಬ್ಯುಲೆನ್ಸ್‌ಗೆ ತಕ್ಷಣ ಮಾಹಿತಿ ನೀಡುವಂತೆ  ತಂತ್ರಜ್ಞಾನವನ್ನು ರೂಪಿಸಲಾಗುತ್ತಿದೆ.

ಈ ವ್ಯವಸ್ಥೆಯಲ್ಲಿ ಆಂಬ್ಯುಲೆನ್ಸ್‌ನಲ್ಲಿ (Ambulence) ಜಿಪಿಎಸ್ ವ್ಯವಸ್ಥೆ (GPS System) ಅಳವಡಿಸಲಾಗುತ್ತಿದೆ. ರಸ್ತೆ ಅಪಘಾತಗಳನ್ನು ತಡೆಗಟ್ಟಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪ್ರಸ್ತುತ ಹಲವಾರು ಹೊಸ ಯೋಜನೆಗಳನ್ನು ರೂಪಿಸುತ್ತಿದೆ. ರಸ್ತೆ ಅಪಘಾತಗಳನ್ನು (Accident) ತಡೆಗಟ್ಟಲು ದೇಶಾದ್ಯಂತದ ಇರುವ ಎಂಜಿನಿಯರಿಂಗ್ ಸಂಸ್ಥೆಗಳೊಂದಿಗೆ ಎನ್ಐಟಿ (NIT)ಮತ್ತು ಐಐಟಿ(IIT) ಗಳೊಂದಿಗೆ ಸಚಿವಾಲಯ ಕಾರ್ಯನಿರ್ವಹಿಸುತ್ತಿದೆ.

ಈ ಮೆಕ್ಯಾನಿಸಂನಿಂದ ಗಾಯಗೊಂಡವರಿಗೆ ತಕ್ಷಣ ಸಿಗಲಿದೆ  ಚಿಕಿತ್ಸೆ
ರಸ್ತೆ ಸುರಕ್ಷತೆಗಾಗಿ ತುರ್ತು ಪ್ರತಿಕ್ರಿಯೆ ನೀಡುವ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಗಿರಿಧರ್ ಅರ್ಮಾನ್ ತಿಳಿಸಿದ್ದಾರೆ. ಆಂಬ್ಯುಲೆನ್ಸ್, ಆಸ್ಪತ್ರೆ ಮತ್ತು ಪೊಲೀಸ್ (Police) ನಿಯಂತ್ರಣ ಕೊಠಡಿಗೆ ಒಟ್ಟಿಗೆ ಸೇರುವ ಮೂಲಕ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣ ಚಿಕಿತ್ಸೆ ಸಿಗುತ್ತದೆ. ಇದು ರಕ್ಷಣಾ ಕಾರ್ಯಾಚರಣೆಗೆ ಸಹಕಾರಿಯಾಗಲಿದೆ.

ಅಪಘಾತ ಸಂಭವಿಸಿದ ತಕ್ಷಣ ರಿಯಲ್ ಟೈಮ್ ಆಧಾರದ ಮೇಲೆ ಮಾಹಿತಿ ಲಭ್ಯವಾಗುತ್ತದೆ ಎಂದು ಗಿರಿಧರ್ ಅರ್ಮಾನ್ ಹೇಳಿದ್ದಾರೆ. ರಸ್ತೆ ಅಪಘಾತಕ್ಕೆ ಒಳಗಾದವರಿಗೆ ಶೀಘ್ರದಲ್ಲೇ ನಗದುರಹಿತ ಚಿಕಿತ್ಸಾ ಯೋಜನೆ ಪ್ರಾರಂಭವಾಗಲಿದೆ. ಈ ಕುರಿತು  ಆರೋಗ್ಯ ಸಚಿವಾಲಯದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನೂತನ ನಿಯಮಗಳಿಂದ ರಸ್ತೆ ಅಪಘಾತಗಳಲ್ಲಿ ಇಳಿಕೆಯಾಗಿದೆ
ಮೋಟಾರು ವಾಹನ ಕಾಯ್ದೆಯ ನಿಯಮಗಳ ತಿದ್ದುಪಡಿಯನ್ನು 2019 ರ ಸೆಪ್ಟೆಂಬರ್‌ನಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತಂದ ನಂತರ ದೇಶಾದ್ಯಂತ ರಸ್ತೆ ಅಪಘಾತಗಳು ಕಡಿಮೆಯಾಗಿವೆ. 2019 ರ ಅಂಕಿಅಂಶಗಳ ಪ್ರಕಾರ, ದೇಶಾದ್ಯಂತ 449,002 ರಸ್ತೆ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 151,113 ಜನರು ಸಾವನ್ನಪ್ಪಿದ್ದಾರೆ. ಆದರೆ, ಕಳೆದ ವರ್ಷ, ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿಯಲ್ಲಿಲ್ಲದಿದ್ದಾಗ, ಶೇಕಡಾ 3.86 ರಷ್ಟು ಹೆಚ್ಚಿನ ರಸ್ತೆ ಅಪಘಾತಗಳು ಸಂಭವಿಸಿವೆ.

ಸಂಚಾರಿ ನಿಯಮಗಳನ್ನು ಪಾಲಿಸದಿದ್ದರೆ ದೊಡ್ಡ ಪ್ರಮಾಣದ ದಂಡ ಹಾಗೂ ಇತರೆ ವ್ಯವಸ್ಥೆಗಳ ಹಿನ್ನೆಲೆ ವಾಹನ ಚಲಾಯಿಸುವವರು ಎಚ್ಚರಿಕೆಯಿಂದ ವಾಹನ ಚಲಾಯಿರುತ್ತಿದ್ದಾರೆ. ಇದರಿಂದ ಅಪಘಾತಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಇಂದಿಗೂ ಕೂಡ ಭಾರತ ಅತಿ ಹೆಚ್ಚು ರಸ್ತೆ ಅಪಘಾತಗಳಾಗುವ ದೇಶಗಳಲ್ಲಿ ಶಾಮೀಲಾಗಿದೆ.

ಇದನ್ನು ಓದಿ- ಶೀಘ್ರದಲ್ಲಿಯೇ ದೇಶಾದ್ಯಂತ One Nation, One Ombudsman ಯೋಜನೆ ಜಾರಿ: RBI

ದೇಶದಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಸಲುವಾಗಿ, ಸಚಿವಾಲಯವು ವಿಶ್ವ ಬ್ಯಾಂಕಿನ ಸಹಾಯದಿಂದ ಸಮಗ್ರ ರಸ್ತೆ ಅಪಘಾತ ಯೋಜನೆ ರೂಪಿಸುತ್ತಿದೆ. ಇದಕ್ಕಾಗಿ  ಕಪ್ಪು ಕಲೆಗಳನ್ನು ಸಹ ಗುರುತಿಸಲಾಗುತ್ತಿದೆ, ಅಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ವಾಹನ ಉತ್ಪಾದನಾ ಕಂಪನಿಗಳಿಗೆ ಅಂತಾರಾಷ್ಟ್ರೀಯ ಮಾನದಂಡಗಳ ಸುರಕ್ಷತಾ ಮಾನದಂಡಗಳನ್ನು ಅನುಸರಿಸಲು ನಿರ್ದೇಶಿಸಲಾಗಿದೆ. ರಸ್ತೆ ಅಪಘಾತಗಳನ್ನು ತಡೆಯಲು ರಸ್ತೆಗಳ ವಿನ್ಯಾಸದ ಬಗ್ಗೆಯೂ ಪರಿಗಣಿಸಲಾಗುತ್ತಿದೆ.

ಇದನ್ನು ಓದಿ- Loan ಪಡೆಯುವವರಿಗೆ ನೆಮ್ಮದಿಯ ಸುದ್ದಿ ಪ್ರಕಟಿಸಿದ RBI, Repo Rate ನಲ್ಲಿ ಯಥಾಸ್ಥಿತಿ ಕಾಯ್ದ ಕೇಂದ್ರೀಯ ಬ್ಯಾಂಕ್

ನಗದು ರಹಿತ ಚಿಕಿತ್ಸಾ ಯೋಜನೆಯು ಸಂತ್ರಸ್ತ ಕುಟುಂಬಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಸಚಿವಾಲಯದ (Mininistry Of Road Transport And Highways) ಅಧಿಕಾರಿಗಳು ತಿಳಿಸಿದ್ದಾರೆ. ಈ ಯೋಜನೆಯನ್ನು ಸುಪ್ರೀಂಕೋರ್ಟ್‌ನ ಇಚ್ಛೆಯಂತೆಯೇ ಜಾರಿಗೆ ತರಲಾಗುತ್ತಿದೆ . ಯೋಜನೆ ಪ್ರಾರಂಭಿಸಿದ ನಂತರ ರಸ್ತೆ ಅಪಘಾತಕ್ಕೆ ಒಳಗಾದವರಿಗೆ ಎರಡೂವರೆ ಲಕ್ಷದವರೆಗೆ ಚಿಕಿತ್ಸೆ ಉಚಿತ ಎಂದು ಮೂಲಗಳು ತಿಳಿಸಿವೆ.

ಇದನ್ನು ಓದಿ-Simple Way To Double Investment ಹಣ ಡಬಲ್ ಮಾಡುವ ಸುಲಭ ವಿಧಾನ ಇಲ್ಲಿದೆ, ಹೂಡಿಕೆಯ ಮೇಲೆ ಸರ್ಕಾರದ ಗ್ಯಾರಂಟಿ ಕೂಡ ಇದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News