ಚಾಕ್ ತಿನ್ನಲು ಪ್ರೋತ್ಸಾಹಿಸುತ್ತಿರುವ Amazon, ಈಟಿಂಗ್ ಡಿಸ್ಆರ್ಡರ್ ಹೆಚ್ಚಿಸುವ ಉತ್ಪನ್ನಗಳು ಸೈಟ್ ನಲ್ಲಿ ಲಭ್ಯ

ಕೆಲವರಿಗೆ ಚಾಕ್ ಅಥವಾ  ಸೀಮೆಸುಣ್ಣ ತಿನ್ನುವ ಕೆಟ್ಟ ಅಭ್ಯಾಸವಿರುತ್ತದೆ. ಇದರಿಂದ ಈಟಿಂಗ್ ಡಿಸ್ಆರ್ಡರ್ ಕಾಯಿಲೆ ಬರುತ್ತದೆ. ಆದರೆ, ಅಮೆಜಾನ್ ಇದನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ.

Written by - Ranjitha R K | Last Updated : Apr 2, 2021, 09:35 AM IST
  • ಚಾಕ್ ಮತ್ತು ಪೆನ್ಸಿಲ್ ಗಳನ್ನು ಆಹಾರ ಎಂದು ಮಾರಾಟ
  • ಜನರ ವಿರೋಧದ ಈ ಉತ್ಪನ್ನಗಳ ಮಾರಾಟ
  • ಚಾಕ್ ಸೇವನೆಯಿಂದ ಈಟಿಂಗ್ ಡಿಸ್ಆರ್ಡರ್ ಆತಂಕ
ಚಾಕ್ ತಿನ್ನಲು ಪ್ರೋತ್ಸಾಹಿಸುತ್ತಿರುವ Amazon, ಈಟಿಂಗ್ ಡಿಸ್ಆರ್ಡರ್ ಹೆಚ್ಚಿಸುವ ಉತ್ಪನ್ನಗಳು ಸೈಟ್ ನಲ್ಲಿ ಲಭ್ಯ  title=
ಚಾಕ್ ಸೇವನೆಯಿಂದ ಈಟಿಂಗ್ ಡಿಸ್ಆರ್ಡರ್ ಆತಂಕ (file photo)

ನವದೆಹಲಿ: ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್ ನಲ್ಲಿ (Amazon), ಯಾವ ವಸ್ತುಗಳು ಬೇಕಾದರೂ ಸಿಗುತ್ತವೆ. ಆದರೆ ಆರೋಗ್ಯಕ್ಕೆ (Health) ಹಾನಿಕಾರಕವಾಗಿರುವ ವಸ್ತುಗಳು ಕೂಡಾ ಈ ಸೈಟ್ ನಲ್ಲಿ ಲಭ್ಯವಾಗುತ್ತಿರುವುದು ಆತಂಕದ ವಿಚಾರ. ಉದಾಹರಣೆಗೆ, ಅಮೆಜಾನ್‌ನಲ್ಲಿ ಚಾಕ್ (chalk) ಅಥವಾ ಸ್ಲೇಟ್ ಪೆನ್ಸಿಲ್ ಅನ್ನು ತಿನ್ನಲು ಪ್ರೋತ್ಸಾಹಿಸಲಾಗುತ್ತಿದೆ. ಅಂದರೆ, ಅಮೆಜಾನ್‌ನಲ್ಲಿ ಮಾರಾಟ ಮಾಡುತ್ತಿರುವ ಚಾಕ್ ಅಥವಾ ಸ್ಲೇಟ್ ಪೆನ್ಸಿಲ್‌ಗಳನ್ನು ತಿನ್ನಲು ಕೂಡಾ ಯೋಗ್ಯ ಎನ್ನುವುದಾಗಿ ಬಿಂಬಿಸಲಾಗಿದೆ. ಈ ವಸ್ತುಗಳು ವ್ಯಕ್ತಿಯಲ್ಲಿ ಈಟಿಂಗ್ ಡಿಸ್ಆರ್ಡರ್ ಅನ್ನು ಹೆಚ್ಚಿಸುತ್ತದೆ.  

ಲಾಭಕ್ಕಾಗಿ ಹೀಗೆ ಮಾಡಲಾಗುತ್ತಿದೆಯೇ ? 
ಕೆಲವರಿಗೆ ಚಾಕ್ (Chalk) ಅಥವಾ  ಸೀಮೆಸುಣ್ಣ ತಿನ್ನುವ ಕೆಟ್ಟ ಅಭ್ಯಾಸವಿರುತ್ತದೆ. ಇದರಿಂದ ಈಟಿಂಗ್ ಡಿಸ್ಆರ್ಡರ್ (Eating disorder) ಕಾಯಿಲೆ ಬರುತ್ತದೆ. ಆದರೆ, ಅಮೆಜಾನ್ (Amazon) ಇದನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಈ ಉತ್ಪನ್ನದ ಡಿಸ್ಕ್ರಿ ಪ್ಶನ್ ನಲ್ಲಿ study or eating natural white limestone slate pencils natural chalk ಎಂದು ಬರೆಯಲಾಗಿದೆ.  ಈ ಬಾಕ್ಸ್ 100 ಚಾಕ್ ಪೆನ್ಸಿಲ್‌ಗಳನ್ನು ಒಳಗೊಂಡಿದೆ. ಈ ಪೆನ್ಸಿಲ್ (Pencil) ರುಚಿಕರವಾಗಿರುತ್ತದೆ ಮತ್ತು ಬೋರ್ಡ್‌ನಲ್ಲಿ ಅಂದವಾಗಿ ಬರೆಯಲೂಬಹುದು ಎಂದು ಹೇಳಲಾಗಿದೆ.
 

ಇದನ್ನೂ ಓದಿ :  ಹಣ ಇಲ್ಲವೇ? ಚಿಂತೆಬಿಡಿ Amazon, Paytm, Mobikwik ನೀಡುತ್ತಿವೆ ಉತ್ತಮ ಕೊಡುಗೆ

ಗ್ರಾಹಕರಿದ ತೀವ್ರ ವಿರೋಧ : 
ಮತ್ತೊಂದು ಲಿಸ್ಟಿಂಗ್ ಪ್ರಕಾರ , '‘SSKR  ಸ್ಲೇಟ್ ಪೆನ್ಸಿಲ್ ಕಿಡ್ಸ್ ನ್ಯಾಚುರಲ್ ಲೈಮ್ ಸ್ಟೋನ್ ಚಾಕ್ ಪೆನ್ಸಿಲ್ ಫಾರ್ ರೈಟಿಂಗ್ ಅಂಡ್ ಈಟಿಂಗ್' ಎಂದರೆ ಪೆನ್ಸಿಲ್ ಅನ್ನು ತಿನ್ನಬಹುದು ಎನ್ನುವಂತೆ ಬರೆಯಲಾಗಿದೆ. ಇದೀಗ ಇದರ ವಿರುದ್ಧ ಗ್ರಾಹಕರು ವಿರೋಧ ವ್ಯಕ್ತಪಡಿಸಿದ್ದಾರೆ.  ಈ ಉತ್ಪನ್ನದ (Product) ವಿವರಣೆ ತಪ್ಪಾಗಿದೆ. ಇದನ್ನು ತಿನ್ನುವುದಕ್ಕೆ ಸಾಧ್ಯವಿಲ್ಲ. ಆಕಸ್ಮಾತಾಗಿ ಮಗು ತಿಂದರೆ,  ಹೊಟ್ಟೆ ನೋವಿನ (Stomach ache) ಸಮಸ್ಯೆ ಕಾಣಿಸಿಕೊಳ್ಳಲಿದೆ ಎಂದು ಗ್ರಾಹಕರು ಕಾಮೆಂಟ್  ಮಾಡಿದ್ದಾರೆ. ಅಲ್ಲದೆ, ಈ ವಿವರಣೆಯನ್ನು ತೆಗೆದು ಹಾಕುವಂತೆ ಕೋರಿದ್ದಾರೆ. 

ಪಿಕಾ ಎಂದರೇನು?
 ನಿಯಮಿತವಾಗಿ ಸೀಮೆಸುಣ್ಣವನ್ನು ತಿನ್ನುತ್ತಿದ್ದರೆ ಪಿಕಾ (Pica) ಎಂಬ ಕಾಯಿಲೆಗೆ ತುತ್ತಾಗುವ ಆತಂಕವಿರುತ್ತದೆ. ಪಿಕಾ ಅನ್ನುವುದು ಈಟಿಂಗ್ ಡಿಸ್ಆರ್ಡರ್ ಆಗಿದ್ದು, ಈ ಕಾಯಿಲೆ ಇರುವವರು, ಆಹಾರ ಎಂದು ಪರಿಗಣಿಸದ ವಸ್ತುಗಳನ್ನೇ ತಿನ್ನಲು ಇಷ್ಟ ಪಡುತ್ತಾರೆ. ಅಂದರೆ, ಈ ಕಾಯಿಲೆ ಇರುವವರು ಕಾಗದ, ಸಾಬೂನು, ಉಣ್ಣೆ, ಬಣ್ಣ, ಕೂದಲು (Hair)ಇಂಥಹ ವಸ್ತುಗಳನ್ನೇ ತಿನ್ನಲು ಬಯಸುತ್ತಾರೆ. 

ಇದನ್ನೂ ಓದಿ :  TV ಖರೀದಿಸುವವರಿಗೊಂದು ಗುಡ್ ನ್ಯೂಸ್ : TCL TV ಮೇಲೆ 57 ಶೇ ರಿಯಾಯಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News