Amarinder Singh Resignation: ಔಪಚಾರಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಹೊಸ ಪಕ್ಷ ಘೋಷಿಸಿದ ಕ್ಯಾಪ್ಟನ್ ಅಮರಿಂದರ್ ಸಿಂಗ್

Punjab election 2022: ಕ್ಯಾಪ್ಟನ್ ಅಮರಿಂದರ್ ಸಿಂಗ್ ಇಂದು ಔಪಚಾರಿಕವಾಗಿ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆಯನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಳುಹಿಸಿದ್ದಾರೆ.

Written by - Nitin Tabib | Last Updated : Nov 2, 2021, 06:44 PM IST
  • ಕಾಂಗ್ರೆಸ್ ಪಕ್ಷಕ್ಕೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಔಪಚಾರಿಕ ರಾಜೀನಾಮೆ.
  • ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರವಾನಿಸಿದ ಕ್ಯಾಪ್ಟನ್
  • ಜೊತೆಗೆ ಪಂಜಾಬ್ ಲೋಕ ಕಾಂಗ್ರೆಸ್ ಹೆಸರಿನ ಹೊಸ ಪಕ್ಷವನ್ನು ಕೂಡ ಘೋಷಿಸಿದ ಅಮರಿಂದರ್ ಸಿಂಗ್.
Amarinder Singh Resignation: ಔಪಚಾರಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಹೊಸ ಪಕ್ಷ ಘೋಷಿಸಿದ ಕ್ಯಾಪ್ಟನ್ ಅಮರಿಂದರ್ ಸಿಂಗ್  title=
Amarinder Singh Resignation (File Picture)

Punjab election 2022: ಪಂಜಾಬ್ ಮಾಜಿ ಸಿಎಂ (Former Punjab CM) ಕ್ಯಾಪ್ಟನ್ ಅಮರಿಂದರ್ ಸಿಂಗ್ (Captain Amarinder Singh) ಅವರು ಇಂದು ಔಪಚಾರಿಕವಾಗಿ ಕಾಂಗ್ರೆಸ್‌ಗೆ (INC) ರಾಜೀನಾಮೆ ನೀಡಿದ್ದಾರೆ. ಏಳು ಪುಟಗಳ ರಾಜೀನಾಮೆ ಪತ್ರವನ್ನು ಅವರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರಿಗೆ ಕಳುಹಿಸಿದ್ದಾರೆ. ಇದರೊಂದಿಗೆ ಅವರು ತಮ್ಮ ಹೊಸ ಪಕ್ಷದ ಘೋಷಣೆಯನ್ನು ಕೂಡ ಮಾಡಿದ್ದಾರೆ.  ಕ್ಯಾಪ್ಟನ್ ಅವರು ತಮ್ಮ ಹೊಸ ಪಕ್ಷಕ್ಕೆ  'ಪಂಜಾಬ್ ಲೋಕ ಕಾಂಗ್ರೆಸ್' ಎಂದು ಹೆಸರನ್ನಿಟ್ಟಿದ್ದಾರೆ. 

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navajot Singh Sidhu) ಅವರೊಂದಿಗಿನ ಜಟಾಪಟಿಯಾ ಮಧ್ಯೆ ಸೆಪ್ಟೆಂಬರ್ 18 ರಂದು ಕ್ಯಾಪ್ಟನ್ ಅಮರಿಂದರ್ ಸಿಂಗ್  ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಕಾಂಗ್ರೆಸ್ (Congress) ತಮ್ಮನ್ನು ಅವಮಾನಿಸಿದೆ ಎಂದು ಆರೋಪಿಸಿ, ಶೀಘ್ರದಲ್ಲೇ ಪಕ್ಷ ತ್ಯಜಿಸುವೆ ಎಂದು ಹೇಳಿದ್ದರು. ಮುಂದಿನ ಕಾರ್ಯತಂತ್ರದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ, ಸ್ನೇಹಿತರು ಮತ್ತು ಆಪ್ತರೊಂದಿಗೆ ಚರ್ಚಿಸಿದ ನಂತರ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು. ಇದಾದ ಬಳಿಕ ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಅವರು ಘೋಷಿಸಿದ್ದರು. 

ಇದನ್ನೂ ಓದಿ-Amarinder Singh : ಹೊಸ ರಾಜಕೀಯ ಪಕ್ಷ ಆರಂಭದ ಬಗ್ಗೆ ಮಹತ್ವದ ಮಾಹಿತಿ ನೀಡಿದೆ ಅಮರಿಂದರ್ ಸಿಂಗ್!

ಮಾಜಿ ಮುಖ್ಯಮಂತ್ರಿ ಅಕ್ಟೋಬರ್ 30 ರಂದು, "ನಾನು ಶೀಘ್ರದಲ್ಲೇ ನನ್ನದೇ ಆದ ಪಕ್ಷವನ್ನು ರಚಿಸುತ್ತೇನೆ ಮತ್ತು ರೈತರ ಸಮಸ್ಯೆ ಇತ್ಯರ್ಥವಾದ ನಂತರ, ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ, 2022 ಕ್ಕೆ ಬಿಜೆಪಿ, ಶಿರೋಮಣಿ ಅಕಾಲಿದಳದಿಂದ ವಿಭಜನೆಗೊಂಡ  ಇತರ ಬಣಗಳ ಜೊತೆಗೆ ಸೇರಿಕೊಂಡು ಸ್ಥಾನ ಹಂಚಿಕೆಯ ಕುರಿತು ಚರ್ಚಿಸುತ್ತೇನೆ" ಎಂದು ಹೇಳಿದ್ದರು.

ಇದನ್ನೂ ಓದಿ-ಐಎಸ್‌ಐ ಜೊತೆ ಅಮರೀಂದರ್ ಸಿಂಗ್ ಸ್ನೇಹಿತೆಯ ನಂಟನ್ನು ಪರಿಶೀಲಿಸಲಾಗುವುದು: ಪಂಜಾಬ್ ಸಚಿವ

ಸಿಂಗ್, "ನಾನು ಪಂಜಾಬ್ ಮತ್ತು ರಾಜ್ಯದ ರೈತರ ಹಿತಾಸಕ್ತಿಗಾಗಿ ಬಲವಾದ ಸಾಮೂಹಿಕ ಶಕ್ತಿಯನ್ನು ಬಯಸುತ್ತೇನೆ" ಎಂದು ಹೇಳಿದ್ದರು. ಈ ಕಾನೂನುಗಳನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜಾರಿಗೆ ತರಲಾಗಿದ್ದು, ಇದನ್ನು ಹಿಂಪಡೆಯಬೇಕೆಂದು ಪ್ರತಿಭಟನಾನಿರತ ರೈತರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ-ಅಮರೀಂದರ್ ಸಿಂಗ್ ಕೇಂದ್ರದ ಮೂರು ಕೃಷಿ ಕಾನೂನುಗಳ ಶಿಲ್ಪಿ-ನವಜೋತ್ ಸಿಂಗ್ ಸಿಧು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News