ಕೆಲವೆಡೆ ಭಾರೀ ಮಳೆ, ಇನ್ನು ಕೆಲವೆಡೆ ಸಾಧಾರಣ ! ಹವಾಮಾನದ ಬಗ್ಗೆ ಅಪ್ಡೇಟ್ ನೀಡಿದ ಹವಾಮಾನ ಇಲಾಖೆ

All India Rain Forecast: ಇದು ಕೇವಲ ರಾಜ್ಯದ ಸ್ಥಿತಿಯಲ್ಲಿ ದೇಶದ ಬಹುತೇಕ ರಾಜ್ಯಗಳಲ್ಲಿ ಇದೆ ಸ್ಥಿತಿ ಇದೆ. ಮಳೆ ಮತ್ತು ರಾಜ್ಯದ ಹವಾಮಾನದ ಬಗ್ಗೆ ಹವಾಮಾನ ಇಲಾಖೆ ಏನು ಹೇಳುತ್ತದೆ ? 

Written by - Ranjitha R K | Last Updated : Aug 31, 2023, 11:35 AM IST
  • ಬಾರಿ ವರುಣ ಕಣ್ಣು ಮುಚ್ಚಾಲೆ ಮುಂದುವರೆದಿದೆ.
  • ನಿರೀಕ್ಷಿಸಿದ ಮಟ್ಟದಲ್ಲಿ ಈ ಬಾರಿ ಸುರಿಯಲಿಲ್ಲ.
  • ಕೆಲವಡೆ ಭಾರೀ ಮಳೆಯಾಗಿದ್ದರೆ ಇನ್ನು ಕೆಲವೆಡೆ ಸಾಧಾರಣ ಮಳೆ
ಕೆಲವೆಡೆ ಭಾರೀ ಮಳೆ, ಇನ್ನು ಕೆಲವೆಡೆ ಸಾಧಾರಣ !  ಹವಾಮಾನದ ಬಗ್ಗೆ ಅಪ್ಡೇಟ್ ನೀಡಿದ ಹವಾಮಾನ ಇಲಾಖೆ  title=

All India Rain Forecast : ಈ ಬಾರಿ ವರುಣ ಕಣ್ಣು ಮುಚ್ಚಾಲೆ ಮುಂದುವರೆದಿದೆ. ಆರಂಭದಲ್ಲಿ ಬಿಡುವು ಕೊಡದೆ ಸುರಿದ ಮಳೆ ಮತ್ತೆ ನಿರೀಕ್ಷಿಸಿದ ಮಟ್ಟದಲ್ಲಿ ಸುರಿಯಲಿಲ್ಲ. ಮಳೆಗಾಗಿ ರಾಜ್ಯದ ರೈತರು ಎದುರು ನೋಡುತ್ತಿದ್ದಾರೆ. ಹೀಗೆ ಮುಂದುವರಿದರೆ ಕುಡಿಯುವ ನೀರಿಗಾಗಿ ಹಾತೊರೆಯುವ ಸ್ಥಿತಿ ನಿರ್ಮಾಣವಾಗಲಿದೆ. ಅನ್ನದಾತ  ಆಗಸದತ್ತ ದೃಷ್ಟಿ ನೆಟ್ಟು ಕೂತಿದ್ದಾನೆ. ಇದು ಕೇವಲ ರಾಜ್ಯದ ಸ್ಥಿತಿಯಲ್ಲಿ ದೇಶದ ಬಹುತೇಕ ರಾಜ್ಯಗಳಲ್ಲಿ ಇದೆ ಸ್ಥಿತಿ ಇದೆ. ಮಳೆ ಮತ್ತು ರಾಜ್ಯದ ಹವಾಮಾನದ ಬಗ್ಗೆ ಹವಾಮಾನ ಇಲಾಖೆ ಏನು ಹೇಳುತ್ತದೆ ? 

ಈ ರಾಜ್ಯಗಳಲ್ಲಿ ಮಳೆ : 
ಕಳೆದ 24 ಗಂಟೆಗಳಲ್ಲಿ, ಪಶ್ಚಿಮ ಬಂಗಾಳ ಮತ್ತು ಕೇರಳದ ಕೆಲವಡೆ  ಭಾರೀ ಮಳೆಯಾಗಿದ್ದರೆ ಇನ್ನು ಕೆಲವೆಡೆ ಸಾಧಾರಣ ಮಳೆಯಾಗಲಿದೆ.   ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ, ದಕ್ಷಿಣ ಛತ್ತೀಸ್‌ಗಢ, ಪೂರ್ವ ಮಧ್ಯಪ್ರದೇಶ ಮತ್ತು ಪಶ್ಚಿಮ ಹಿಮಾಲಯದ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಮಳೆಯಾಗಿದೆ. ಲಕ್ಷದ್ವೀಪ, ಈಶಾನ್ಯ ಭಾರತ ಮತ್ತು ಸಿಕ್ಕಿಂನಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ.

ಇದನ್ನೂ ಓದಿ : 'ಭಾರತೀಯ ಜ್ಞಾನ ವ್ಯವಸ್ಥೆಯಲ್ಲಿ ಕೋರ್ಸ್‌ಗಳ ಅಭಿವೃದ್ಧಿಗೆ 17 ಕೇಂದ್ರಗಳನ್ನು ಆಯ್ಕೆ ಮಾಡಿದ ಕೇಂದ್ರ ಸರ್ಕಾರ

ಇಂದು ಈ ರೀತಿ ಇರುತ್ತದೆ ಹವಾಮಾನ : 
ಏಜೆನ್ಸಿ ಪ್ರಕಾರ, ಇಂದು ದೇಶದ ಒಡಿಶಾ, ತೆಲಂಗಾಣ ಮತ್ತು ಪಶ್ಚಿಮ ಹಿಮಾಲಯದಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಲಕ್ಷದ್ವೀಪ, ಆಂಧ್ರಪ್ರದೇಶ, ದಕ್ಷಿಣ ಛತ್ತೀಸ್‌ಗಢ, ಪೂರ್ವ ಮಧ್ಯಪ್ರದೇಶದ ಕೆಲವು ಭಾಗಗಳು, ಈಶಾನ್ಯ ಭಾರತ ಮತ್ತು ಸಿಕ್ಕಿಂನಲ್ಲಿಯೂ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕೇರಳ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಗಾಲಿದೆ. ಕರ್ನಾಟಕ ಮತ್ತು ತಮಿಳುನಾಡಿನ 1 ಅಥವಾ 2 ಸ್ಥಳಗಳಲ್ಲಿ ಭಾರೀ ಮಳೆಯಾಗಿದೆ. 

ನಿಧಾನಗತಿಯ ಮಾನ್ಸೂನ್‌ನಿಂದಾಗಿ ಪಂಜಾಬ್ ಮತ್ತು ಹರಿಯಾಣದಲ್ಲಿ ಒಣಹವೆಯಿದೆ. ಆಗಸ್ಟ್‌ನಲ್ಲಿ ಈ ಎರಡೂ ರಾಜ್ಯಗಳಲ್ಲಿ ಮುಂಗಾರು ಕೈ ಹಿಡಿದಿಲ್ಲ. ಆಗಸ್ಟ್ ತಿಂಗಳ ಆರಂಭದಲ್ಲಿ ಶೇ.34ರಷ್ಟು ಅಧಿಕ ಮಳೆಯಾಗಿದ್ದರೆ, ತಿಂಗಳಾಂತ್ಯಕ್ಕೆ ಶೇ.1ಕ್ಕೆ ಇಳಿಕೆಯಾಗಿದೆ. ಹರಿಯಾಣದಲ್ಲಿ 52 ಶೇಕಡಾ ಹೆಚ್ಚುವರಿ ಮಳೆಯೊಂದಿಗೆ ತಿಂಗಳು ಪ್ರಾರಂಭವಾದರೆ, ಕೊನೆಯಲ್ಲಿ ಶೇಕಡಾ 9 ಕ್ಕೆ ಇಳಿದಿದೆ.

ಇದನ್ನೂ ಓದಿ : ಇಂಡಿಯಾ ಮೈತ್ರಿಕೂಟ ಪ್ರಧಾನಿ ಹುದ್ದೆಗೆ ಹಲವು ಆಯ್ಕೆಗಳನ್ನು ಹೊಂದಿದ್ದರೆ, ಬಿಜೆಪಿಗೆ ಒಂದೇ ಆಯ್ಕೆ ಇದೆ : ಉದ್ಧವ್ ಠಾಕ್ರೆ

ಒಂದು ವಾರದಿಂದ ಮಳೆಯ ನಿರೀಕ್ಷೆಯಿಲ್ಲ : 
ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ, ಸದ್ಯದಲ್ಲಿಯೇ  ಮಳೆಯಾಗುವ ಯಾವ ಲಕ್ಷಣವೂ ಇಲ್ಲ. ಕನಿಷ್ಠ ಮುಂದಿನ ಒಂದು ವಾರದವರೆಗೆ ಇದೇ ರೀತಿಯ ಶುಷ್ಕ ವಾತಾವರಣ ಮುಂದುವರಿಯುವ ನಿರೀಕ್ಷೆಯಿದೆ. ವೆಸ್ಟರ್ನ್ ಡಿಸ್ಟರ್ಬನ್ಸ್ ಇಲ್ಲದಿರುವುದರಿಂದ ಮತ್ತು ಮಾನ್ಸೂನ್ ಟ್ರಫ್ ಉತ್ತರದಿಂದ ಬಹಳ ದೂರ ಇರುವುದರಿಂದ ಎರಡೂ ರಾಜ್ಯಗಳಲ್ಲಿ ಮಳೆಯ ನಿರೀಕ್ಷೆ ಇಲ್ಲ ಎನ್ನಲಾಗುತ್ತಿದೆ. ಮಾನ್ಸೂನ್ ಟ್ರಫ್ ಪ್ರಸ್ತುತ ಹಿಮಾಲಯದ ತಪ್ಪಲಿನಲ್ಲಿ ಹರಿಯುತ್ತಿದೆ. ಇದು ಮುಂದಿನ 3ರಿಂದ 4 ದಿನಗಳ ಕಾಲ ಬೆಟ್ಟದ ತಪ್ಪಲಿನಲ್ಲಿ ಮುಂದುವರಿಯಲಿದೆ. ಇದರ ನಂತರ, ದಕ್ಷಿಣದ ಕಡೆಗೆ ಚಲಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News