Alert...! Income Tax ಡಿಪಾರ್ಟ್ಮೆಂಟ್ ನೀಡಿರುವ ಈ ಎಚ್ಚರಿಕೆಯನ್ನು ನಿರ್ಲಕ್ಷಿಸಬೇಡಿ

ಆದಾಯ ತೆರಿಗೆ ಇಲಾಖೆ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ರಿಟರ್ನ್ ಭರವಸೆ ನೀಡುವ ಫಿಶಿಂಗ್ ಇ-ಮೇಲ್ ಕುರಿತು ಎಚ್ಚರಿಕೆಯೊಂದನ್ನು ನೀಡಿದೆ 

Last Updated : May 3, 2020, 09:38 PM IST
Alert...! Income Tax ಡಿಪಾರ್ಟ್ಮೆಂಟ್ ನೀಡಿರುವ ಈ ಎಚ್ಚರಿಕೆಯನ್ನು ನಿರ್ಲಕ್ಷಿಸಬೇಡಿ title=

ನವದೆಹಲಿ: ಆದಾಯ ತೆರಿಗೆ ಇಲಾಖೆ 'ಫಿಶಿಂಗ್' ಇ-ಮೇಲ್'ಗಳನ್ನು ಕಳುಹಿಸುವ ಮೂಲಕ ಆದಾಯ ತೆರಿಗೆ ಮರುಪಾವತಿಯ ಭರವಸೆ ನೀಡುವವರಿಂದ ಎಚ್ಚರಿಕೆ ವಹಿಸುವಂತೆ ತೆರಿಗೆ ಪಾವತಿದಾರರಿಗೆ ಎಚ್ಚರಿಕೆ ನೀಡಿದೆ. ಈ ಕುರಿತು ಭಾನುವಾರ ಟ್ವೀಟ್ ಮಾಡುವ ಮೂಲಕ ತೆರಿಗೆ ಪಾವತಿದಾರರಿಗೆ ಎಚ್ಚರಿಕೆ ನೀಡಿರುವ ಇಲಾಖೆ, ರಿಫಂಡ್ ಭರವಸೆ ನೀಡುವ ಯಾವುದೇ ಲಿಂಕ್ ಮೇಲೆ ಕ್ಲಿಕ್ಕಿಸದಂತೆ ಸೂಚಿಸಿದೆ. ಇಂತಹ ಇ-ಮೇಲ್ ಗಳನ್ನು ಆದಾಯ ತೆರಿಗೆ ಇಲಾಖೆ ಕಳುಹಿಸುವುದಿಲ್ಲ ಎಂದು ಹೇಳಿದೆ.

ಅಷ್ಟೇ ಅಲ್ಲ ತೆರಿಗೆ ಪಾವತಿದಾರರಿಗೆ ಇ-ಮೇಲ್ ಕಳುಹಿಸುವ ಮೂಲಕ ಆದಾಯ ತೆರಿಗೆ ಇಲಾಖೆ ವೈಯಕ್ತಿಕ ಮಾಹಿತಿ ಅಥವಾ ವಿವರ ಕೇಳುವುದಿಲ್ಲ, ಪಿನ್ ವಿವರ, ಪಾಸ್ವರ್ಡ್ ಅಥವಾ ಕ್ರೆಡಿಟ್ ಕಾರ್ಡ್, ಬ್ಯಾಂಕ್ ಮತ್ತು ಇತರೆ ಹಣಕಾಸು ಖಾತೆಗಳಿಗೆ ಸಂಬಂಧಿಸಿದ ಮಾಹಿತಿಯನ್ನೂ ಸಹ ಇಲಾಖೆ ಕೇಳುವುದಿಲ್ಲ ಎಂದು ಸೂಚಿಸಿದೆ.

ಇಂತಹ ಇ-ಮೇಲ್ ಗಳು ಬಂದರೆ ವಹಿಸಬೇಕಾದ ಕಾಳಜಿ ಏನು?
ಆದಾಯ ತೆರಿಗೆ ಇಲಾಖೆಯ ಪ್ರಕಾರ, ಒಂದು ವೇಳೆ ಆದಾಯ ತೆರಿಗೆ ಇಲಾಖೆ ಪಾವತಿದಾರರಿಗೆ ಈ ರೀತಿಯ ಇ-ಮೇಲ್ ಗಳು ಬಂದರೆ

  • ಅವುಗಳಿಗೆ ಯಾವುದೇ ರಿಪ್ಲೈ ಮಾಡಬೇಡಿ
  • ಮೇಲ್ ನಲ್ಲಿ ಬಂದಿರುವ ಅಟ್ಯಾಚ್ಮೆಂಟ್ ಓಪನ್ ಮಾಡಬೇಡಿ, ಇದರಲ್ಲಿ ಮೆಲಿಶಿಯಸ್ ಕೋಡ್ ಇರುವ ಸಾಧ್ಯತೆ ಇರುತ್ತದೆ. ಈ ಕೋಡ್ ನಿಮ್ಮ ಕಂಪ್ಯೂಟರ್ ಇನ್ಫೆಕ್ಟ್ ಆಗುವ ಸಾಧ್ಯತೆ ಇದೆ.
  • ಮೇಲ್ ನಲ್ಲಿ ಯಾವುದೇ ಲಿಂಕ್ ನೀಡಲಾಗಿದ್ದರೆ ಅದರ ಮೇಲೆ ಕ್ಲಿಕ್ಕಿಸಬೇಡಿ. ಒಂದು ವೇಳೆ ಟ್ಯಾಪ್ ಮಾಡಿದರೂ ಕೂಡ ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಇತ್ಯಾದಿಗಳ ಮಾಹಿತಿ ಬಳಸಬೇಡಿ.
  • ಕೆಲ ಫಿಸ್ಸ್ಹಿಂಗ್ ಇ-ಮೇಲ್ ಗಳಲ್ಲಿ ನೀಡಲಾಗಿರುವ ಸಾಫ್ಟ್ ವೇರ್ ನಿಮ್ಮ ಕಂಪ್ಯೂಟರ್ ಗೆ ಹಾನಿಯುಂಟು ಮಾಡಬಹುದು. ಅಷ್ಟೇ ಅಲ್ಲ ಇಂಟರ್ನೆಟ್ ಮೇಲೆ ನಿಮ್ಮ ಚಟುವಟಿಕೆಗಳ ಮಾಹಿತಿ ಕೂಡ ಕಲೆಹಾಕುವ ಸಾಧ್ಯತೆ ಇರುತ್ತದೆ. ಹೀಗಾಗಿ ಆಂಟಿ ವೈರಸ್ ಸಾಫ್ಟ್ ವೇರ್, ಆಂಟಿ ಸ್ಪೈವೇರ್ ಹಾಗೂ ಫೈರ್ ವಾಲ್ ಗಳ ಬಳಕೆ ಮಾಡಿ ಅವುಗಳನ್ನು ನಿರಂತರವಾಗಿ ಅಪ್ಡೇಟ್ ಮಾಡಿ.

Trending News