ಯುಸಿಸಿಗೆ ಮುಸ್ಲಿಂ ಬೋರ್ಡ್ ವಿರೋಧ : ಧಾರ್ಮಿಕ ಮೂಲಭೂತ ಹಕ್ಕು ಪ್ರಜಾಪ್ರಭುತ್ವದ ಭಾಗ - AIMPLB

ಏಕರೂಪ ನಾಗರಿಕ ಸಂಹಿತೆಯನ್ನು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ  ಬೋರ್ಡ್ ವಿರೋಧಿಸಿದೆ. ಪ್ರಸ್ತಾವಿತ ಕಾನೂನಿಗೆ  ಮುಸ್ಲಿಂ ಮಂಡಳಿಯು ಆಕ್ಷೇಪಣೆ  ವ್ಯಕ್ತಪಡಿಸಿದೆ. 

Written by - Ranjitha R K | Last Updated : Jul 6, 2023, 09:46 AM IST
  • ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಬಗ್ಗೆ ಚರ್ಚೆ
  • ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವಿರೋಧ
  • ಯುಸಿಸಿಯಿಂದ ಧಾರ್ಮಿಕ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ
ಯುಸಿಸಿಗೆ ಮುಸ್ಲಿಂ ಬೋರ್ಡ್ ವಿರೋಧ : ಧಾರ್ಮಿಕ ಮೂಲಭೂತ ಹಕ್ಕು ಪ್ರಜಾಪ್ರಭುತ್ವದ ಭಾಗ -  AIMPLB  title=

ನವದೆಹಲಿ : ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ  ಬೋರ್ಡ್  (ಎಐಎಂಪಿಎಲ್‌ಬಿ) ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಿದೆ. ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ, ಸಾರ್ವಜನಿಕರ ಅಭಿಪ್ರಾಯ ಪಡೆದು ಪ್ರತಿಕ್ರಿಯೆ ನೀಡುವಂತೆ  ಕಾನೂನು ಆಯೋಗದ ಕಾರ್ಯದರ್ಶಿ  AIMPLBಗೆ ಸೂಚಿಸಿತ್ತು. ಇದಾದ ನಂತರ  ಏಕರೂಪ ನಾಗರಿಕ ಸಂಹಿತೆಯ  ಡ್ರಾಫ್ಟ್ ಅನ್ನು  AIMPLB ಸಿದ್ದಪಡಿಸಿ,  ಆ ಕರಡನ್ನು ಕಾನೂನು ಆಯೋಗಕ್ಕೆ  ಹಸ್ತಾಂತರಿಸಿದೆ. 

ಈ ಕರಡಿನಲ್ಲಿ ಪ್ರಸ್ತಾವಿತ ಕಾನೂನಿಗೆ  ಮುಸ್ಲಿಂ ಮಂಡಳಿಯು ಆಕ್ಷೇಪಣೆ  ವ್ಯಕ್ತಪಡಿಸಿದೆ. ಇದು ಅವರ ಧಾರ್ಮಿಕ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ಮುಸ್ಲಿಂ ಸಮುದಾಯ ಅಭಿಪ್ರಾಯಪಟ್ಟಿರುವುದಾಗಿ ಹೇಳಿದೆ. ಈ ಕರಡನ್ನು ಬುಧವಾರ ಅಂದರೆ ಜುಲೈ 5 ರಂದು ಮಂಡಳಿಯ ವರ್ಚುವಲ್ ಸಭೆಯಲ್ಲಿ ಚರ್ಚೆಗಾಗಿ ಪ್ರಸ್ತುತಪಡಿಸಲಾಗಿತ್ತು. 

ಇದನ್ನೂ ಓದಿ : ಆದಿವಾಸಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಮನೆ ನೆಲಸಮ ಮಾಡಿದ ʼಬುಲ್ಡೋಜರ್ʼ..!

ಯುಸಿಸಿಯಿಂದ ಧಾರ್ಮಿಕ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ  : 
ಇದು ದೇಶದ ವಿವಿಧ ಧಾರ್ಮಿಕ ಸಂಸ್ಕೃತಿಗಳಿಗೆ ವಿರುದ್ಧವಾಗಿದೆ ಎಂದು ಎಐಎಂಪಿಎಲ್‌ಬಿ ಸಭೆಯಲ್ಲಿ ಹೇಳಿದೆ.  ಲಿಂಗ ನ್ಯಾಯ, ಜಾತ್ಯತೀತತೆ, ರಾಷ್ಟ್ರೀಯ ಏಕೀಕರಣ ಹೀಗೆ ಎಲ್ಲಾ ಪದ್ಧತಿಗಳ ಮೇಲೆ ಏಕರೂಪ ನಾಗರಿಕ ಸಂಹಿತೆ ಬೀರುವ ಪರಿಣಾಮಗಳ ಬಗ್ಗೆ ಮಂಡಳಿಯು ಆಕ್ಷೇಪ ವ್ಯಕ್ತಪಡಿಸಿದೆ.   ಸಂವಿಧಾನದ 25, 26 ಮತ್ತು 29 ನೇ ವಿಧಿಯ ಬಗ್ಗೆಯೂ ಮಂಡಳಿಯು ಆಕ್ಷೇಪ ವ್ಯಕ್ತಪಡಿಸಿದೆ. ಧಾರ್ಮಿಕ ಮೂಲಭೂತ ಹಕ್ಕುಗಳು ನಮ್ಮ ದೇಶದ ಪ್ರಜಾಸತ್ತಾತ್ಮಕ ರಚನೆಯಾಗಿದೆ ಎಂದು ಮಂಡಳಿ ಹೇಳಿದೆ.  

ಇದೆ ವೇಳೆ, ಯುಸಿಸಿಗೆ ಸಂಬಂಧಿಸಿದಂತೆ ನೀಡಲಾದ ನೋಟಿಸ್‌ನಲ್ಲಿ ಹಲವು ವಿಷಯಗಳು ಸ್ಪಷ್ಟವಾಗಿಲ್ಲ ಎಂದು ಮಂಡಳಿ ಹೇಳಿದೆ. ಯುಸಿಸಿಯಲ್ಲಿ ತಮ್ಮ ಆಕ್ಷೇಪಣೆಗಳನ್ನು ನೋಂದಾಯಿಸಲು ಕಾನೂನು ಆಯೋಗವು ಜುಲೈ 14 ರ ವರೆಗೆ ಸಮಯವನ್ನು ನೀಡಿದೆ. 

ಇದನ್ನೂ ಓದಿ : ಭಾರತದ ಈ ಹೆಜ್ಜೆಗೆ ಚೀನಾಗೆ ಖುಷಿಯೋ ಖುಷಿ: ಪಬ್ಲಿಕ್’ನಲ್ಲಿಯೇ ಹಾಡಿ ಹೊಗಳಿದ್ದೇಕೆ?

ಮತ್ತೊಂದೆಡೆ, ಯುಸಿಸಿಯನ್ನು ರಾಜಕೀಯ ಮತ್ತು ಪ್ರಚಾರದ ಸಾಧನ ಎಂದು ಮುಸ್ಲಿಂ ಬೋರ್ಡ್ ಆಪಾದಿಸಿದೆ. ಅಲ್ಲದೆ, ಯುಸಿಸಿ ಅಗತ್ಯ ಅಥವ  ಅಪೇಕ್ಷೆ ಇಲ್ಲ ಎನ್ನುವುದನ್ನು ಕಾನೂನು ಆಯೋಗ ಈಗಾಗಲೇ ಹೇಳಿದೆ ಎಂದು ಒತ್ತಿ ಹೇಳಿದೆ. ಆದರೂ ಇಷ್ಟು ಕಡಿಮೆ ಸಮಯದಲ್ಲಿ ಒಂದರ ಹಿಂದೆ ಒಂದರಂತೆ  ಆಯೋಗಗಳು ಸಾರ್ವಜನಿಕ ಅಭಿಪ್ರಾಯವನ್ನು ಪಡೆಯುತ್ತಿರುವುದು ಆಶ್ಚರ್ಯಕರವಾಗಿದೆ. 

ನಮ್ಮ ದೇಶದ ಪ್ರಮುಖ ದಾಖಲೆಯೇ ಭಾರತದ ಸಂವಿಧಾನವಾಗಿದೆ ಎಂದು ಮುಸ್ಲಿಂ ಬೋರ್ಡ್ ಹೇಳಿದೆ. ಸಂವಿಧಾನದಲ್ಲಿ ವಿವಿಧ ಸಮುದಾಯಗಳಿಗೆ ವಿವಿಧ ಹಕ್ಕುಗಳನ್ನು ನೀಡಲಾಗಿದೆ. ವಿವಿಧ ಧರ್ಮಗಳಿಗೆ ಬೇರೆ ಬೇರೆ ರೀತಿಯ ಸ್ಥಾನಗಳನ್ನು ನೀಡಲಾಗಿದೆ ಎಂದು ಬೋರ್ಡ್ ಹೇಳಿದೆ. 

ಇದನ್ನೂ ಓದಿ : "ನನ್ನ ಸಿದ್ಧಾಂತಕ್ಕೆ ದ್ರೋಹ ಮಾಡಿದವರು ನನ್ನ ಫೋಟೋವನ್ನು ಬಳಸುವಂತಿಲ್ಲ"-ಶರದ್ ಪವಾರ್ 

21ನೇ ಕಾನೂನು ಆಯೋಗ ಸಿದ್ಧಪಡಿಸಿರುವ ಸಮಾಲೋಚನಾ ವರದಿಯನ್ನು ಪ್ರಕಟಿಸಿದ ಬಳಿಕ ಸರಕಾರ ಸಂಪೂರ್ಣ ಮೌನವಾಗಿದೆ ಎಂದು ಎಐಎಂಪಿಎಲ್‌ಬಿ  ಹೇಳಿದೆ. ಸರ್ಕಾರ ಅದನ್ನು ಒಪ್ಪಿಕೊಂಡಿದೆಯೇ? ಅಥವಾ 21 ನೇ ಕಾನೂನು ಆಯೋಗದ ಸಂಶೋಧನೆಗಳನ್ನು ವಿವರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದನ್ನು ಕೂಡಾ ಸರ್ಕಾರ  ಸ್ಪಷ್ಟಪಡಿಸಿಲ್ಲ ಎಂದು ಹೇಳಿದೆ. ಇನ್ನು ಸರ್ಕಾರವು 21 ನೇ ಕಾನೂನು ಆಯೋಗವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದರೆ, ಅದಕ್ಕೆ ಕಾರಣವನ್ನು ಕೂಡಾ ಬಹಿರಂಗಪಡಿಸಿಲ್ಲ ಎಂದು ಮಂಡಳಿ ಹೇಳಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News