ಕರೋನಾ ಲಸಿಕೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ: AIIMS ನಿರ್ದೇಶಕರು ಹೇಳಿದ್ದಿಷ್ಟು

ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಅವರ ಪ್ರಕಾರ ಸಾಮಾನ್ಯ ಜನರು ಲಸಿಕೆಗಾಗಿ ಒಂದು ವರ್ಷ ಕಾಯಬೇಕಾಗುತ್ತದೆ.

Last Updated : Nov 9, 2020, 07:20 AM IST
  • ದೇಶದಲ್ಲಿ ಕರೋನಾವೈರಸ್ ವಿರುದ್ಧದ ಯುದ್ಧವು ಕಳೆದ 9 ತಿಂಗಳುಗಳಿಂದ ಮುಂದುವರೆದಿದ್ದು ಜನರು ಲಸಿಕೆಗಾಗಿ ಕಾಯುತ್ತಿದ್ದಾರೆ.
  • ಸಾಮಾನ್ಯ ಜನರು 2022 ರವರೆಗೆ ಲಸಿಕೆಗಾಗಿ ಕಾಯಬೇಕಾಗುತ್ತದೆ ಎಂದು ಏಮ್ಸ್ ನಿರ್ದೇಶಕರು ಹೇಳಿದರು
ಕರೋನಾ ಲಸಿಕೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ: AIIMS ನಿರ್ದೇಶಕರು ಹೇಳಿದ್ದಿಷ್ಟು title=

ನವದೆಹಲಿ: ದೇಶದಲ್ಲಿ ಕಳೆದ 9 ತಿಂಗಳಿನಿಂದ ಕರೋನಾವೈರಸ್ ಮಹಾಮಾರಿ ವಿರುದ್ದ ಹೋರಾಡುತ್ತಿರುವ ದೇಶದ ಜನತೆ ಕರೋನಾ ಲಸಿಕೆ (Corona Vaccine) ಯಾವಾಗ ಮಾರುಕಟ್ಟೆಗೆ ಬರುವುದೋ ಎಂದು ಕಾಯುತ್ತಿದ್ದಾರೆ. ಆದರೆ ಜನ ಸಾಮಾನ್ಯರು ಕೋವಿಡ್-19 (Covid 19) ಲಸಿಕೆ ಪಡೆಯಲು 2022ರವರೆಗೆ ಕಾಯಬೇಕಾಗಬಹುದು. ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಅವರ ಪ್ರಕಾರ ಸಾಮಾನ್ಯ ಜನರು ಲಸಿಕೆಗಾಗಿ ಒಂದು ವರ್ಷ ಕಾಯಬೇಕಾಗುತ್ತದೆ.

ಈ ಕಾರಣದಿಂದಾಗಿ ಲಸಿಕೆ ಸಾಮಾನ್ಯ ಜನರನ್ನು ತಲುಪಲು ಸಮಯ ತೆಗೆದುಕೊಳ್ಳುತ್ತದೆ:-
ಡಾ. ರಂದೀಪ್ ಗುಲೇರಿಯಾ ಅವರು ಭಾರತದಲ್ಲಿ ಕರೋನಾ ವೈರಸ್ ನಿರ್ವಹಣೆಗಾಗಿ ರಚಿಸಲಾದ 'ರಾಷ್ಟ್ರೀಯ ಕಾರ್ಯಪಡೆಯ' ಸದಸ್ಯರಾಗಿದ್ದಾರೆ. ಅವರು ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಮ್ಮ ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇದೆ. ಆದರೆ ಲಸಿಕೆ ವಿತರಣೆಗೆ ಸಮಯ ಬೇಕು. ಅಂತಹ ಪರಿಸ್ಥಿತಿಯಲ್ಲಿ ಸೀಮಿತ ಲಸಿಕೆಯನ್ನು ಸಮಯಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡುವುದು ನಿಜಕ್ಕೂ ಸವಾಲಿನ ಸನ್ನಿವೇಶವಾಗಿದೆ ಎಂದಿದ್ದಾರೆ.

ಮೋದಿ ಸರ್ಕಾರದ ಭರ್ಜರಿ ತಯಾರಿ: ನಿಮ್ಮೂರ ಅಂಗನವಾಡಿ, ಶಾಲೆ, ಪಂಚಾಯ್ತಿಯಲ್ಲೂ ಸಿಗಲಿದೆ ಕರೋನಾ ಲಸಿಕೆ

ಲಸಿಕೆ ಬಂದಾಗ ಎದುರಿಸಬೇಕಾದ ಸವಾಲುಗಳಿವು:-
ಲಸಿಕೆ ವಿತರಣೆಯ ಬಗ್ಗೆ ನಾವು ಗರಿಷ್ಠ ಗಮನ ಹರಿಸಬೇಕಾಗಿದೆ. ಇದರಿಂದ ಅದು ದೇಶದ ಪ್ರತಿಯೊಂದು ಭಾಗವನ್ನು ತಲುಪುತ್ತದೆ ಎಂದು ಅಭಿಪ್ರಾಯಪಟ್ಟಿರುವ ಡಾ. ಗುಲೇರಿಯಾ, ಕೋಲ್ಡ್ ಚೈನ್ ಅನ್ನು ಕಾಪಾಡಿಕೊಳ್ಳುವುದು, ಸಾಕಷ್ಟು ಸಿರಿಂಜುಗಳು, ಸಾಕಷ್ಟು ಸೂಜಿಗಳು ಮತ್ತು ದೇಶದ ದೂರದ ಪ್ರದೇಶಗಳಿಗೆ ಸುಲಭವಾಗಿ ತಲುಪುವಂತೆ ಮಾಡುವುದು ದೊಡ್ಡ ಸವಾಲಾಗಿದೆ ಎಂದರು.

ಅದೇ ಸಮಯದಲ್ಲಿ ಲಸಿಕೆಯ ಸ್ಥಿತಿಯನ್ನು ಕಂಡುಹಿಡಿಯುವುದು ಎರಡನೇ ದೊಡ್ಡ ಸವಾಲಾಗಿದೆ, ನಂತರದಲ್ಲಿ ಬರುವ ಲಸಿಕೆಗಳು ಮೊದಲ ಲಸಿಕೆಗಿಂತ ಹೆಚ್ಚು ಪರಿಣಾಮಕಾರಿಯಾಗಬಹುದು. ಆದ್ದರಿಂದ ನಂತರ ನಾವು ಎರಡನೇ ಲಸಿಕೆ ಪಡೆದರೆ ಮತ್ತು ಅದು ಮೊದಲನೆಯದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದ್ದರೆ ನಾವು ಅದನ್ನು ಹೇಗೆ ಬಳಸುತ್ತೇವೆ? ಕೋರ್ಸ್ ತಿದ್ದುಪಡಿಯನ್ನು ನಾವು ಹೇಗೆ ಮಾಡುವುದು? ಲಸಿಕೆ ಯಾರಿಗೆ ಬೇಕು ಮತ್ತು ಲಸಿಕೆ ಬಿ ಯಾರಿಗೆ ಬೇಕು ಎಂದು ನಿರ್ಧರಿಸುವುದು ಹೇಗೆ? ಈ ರೀತಿಯಾಗಿ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದವರು ಕರೋನಾ ಲಸಿಕೆ ಬಂದಾಗ ಎದುರಿಸಬೇಕಾದ ಸವಾಲುಗಳ ಬಗ್ಗೆ ವಿವರಿಸಿದ್ದಾರೆ. 

ಮಹಾಮಾರಿ ಕರೋನಾಗೆ ಆಯುರ್ವೇದ ಮದ್ದು

ಕರೋನಾ ಕೇವಲ ಲಸಿಕೆಗಳೊಂದಿಗೆ ಕೊನೆಗೊಳ್ಳುವುದಿಲ್ಲ :-
ಇದಲ್ಲದೆ ಲಸಿಕೆ ನೀಡುವುದರಿಂದ ಕೊರೊನೊವೈರಸ್ (Coronavirus) ಸೋಂಕನ್ನು ನಿವಾರಿಸಲಾಗುವುದಿಲ್ಲ ಎಂಬ ಆಘಾತಕಾರಿ ಅಂಶದ ಬಗ್ಗೆಯೂ ಡಾ. ರಂದೀಪ್ ಗುಲೇರಿಯಾ ಮಾಹಿತಿ ಹಂಚಿಕೊಂಡಿದ್ದಾರೆ. ವ್ಯಾಕ್ಸಿನೇಷನ್ ಮಾಡಿದ ನಂತರವೂ ನಾವು ಸಾಮಾಜಿಕ ದೂರ, ಮಾಸ್ಕ್ ಧರಿಸುವುದು, ಕೈ ಸ್ವಚ್ಛಗೊಳಿಸುವಿಕೆ ಮುಂತಾದ ಕರೋನದ ನಿಯಮಗಳನ್ನು ಅನುಸರಿಸಬೇಕು. ಈ ಪ್ರಯತ್ನಗಳ ನಂತರ ಈ ಸಾಂಕ್ರಾಮಿಕವನ್ನು ನಿವಾರಿಸಬಹುದು. ಇಲ್ಲದಿದ್ದರೆ ಎಂದಿಗೂ ಕರೋನಾ  ಮುಗಿಯದ ಪರಿಸ್ಥಿತಿ ಕೂಡ ಉದ್ಭವಿಸಬಹುದು ಎಂದವರು ಎಚ್ಚರಿಕೆ ನೀಡಿದ್ದಾರೆ.

Trending News