'ಉತ್ತರ ಭಾರತೀಯರಲ್ಲಿ ಉದ್ಯೋಗಕ್ಕೆ ಕೌಶಲ್ಯದ ಕೊರತೆಯಿದೆ' ಎಂದಿದ್ದ ಸಚಿವ ಗಂಗ್ವಾರ್ ವಿವಾದದ ಬಳಿಕ ಹೇಳಿದ್ದೇನು?

ನಾನು ಬೇರೊಂದು ಸಂದರ್ಭವನ್ನು ಗಮನದಲ್ಲಿಟ್ಟುಕೊಂದು ಆ ಹೇಳಿಕೆಯನ್ನು ನೀಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಜನರ ಕೌಶಲ್ಯವನ್ನು ಹೆಚ್ಚಿಸಲು ಮಾಡುತ್ತಿರುವ ಪ್ರಯತ್ನಗಳ ಮೇಲೆ ನನ್ನ ಹೇಳಿಕೆ ಕೇಂದ್ರೀಕರಿಸಿದೆ ಎಂದು ಸಚಿವರು ಹೇಳಿದ್ದಾರೆ.

Last Updated : Sep 16, 2019, 11:26 AM IST
'ಉತ್ತರ ಭಾರತೀಯರಲ್ಲಿ ಉದ್ಯೋಗಕ್ಕೆ ಕೌಶಲ್ಯದ ಕೊರತೆಯಿದೆ' ಎಂದಿದ್ದ ಸಚಿವ ಗಂಗ್ವಾರ್ ವಿವಾದದ ಬಳಿಕ ಹೇಳಿದ್ದೇನು? title=

ನವದೆಹಲಿ: 'ಉತ್ತರ ಭಾರತೀಯರಲ್ಲಿ ಕೌಶಲ್ಯದ ಕೊರತೆಯಿದೆ' ಎಂಬ ಹೇಳಿಕೆ ಬಳಿಕ ಭಾರೀ ವಿವಾದ ಸೃಷ್ಟಿಯಾದ ಬಳಿಕ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ನಾನು ಬೇರೊಂದು ಸಂದರ್ಭವನ್ನು ಗಮನದಲ್ಲಿಟ್ಟುಕೊಂದು ಆ ಹೇಳಿಕೆಯನ್ನು ನೀಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಜನರ ಕೌಶಲ್ಯವನ್ನು ಹೆಚ್ಚಿಸಲು ಮಾಡುತ್ತಿರುವ ಪ್ರಯತ್ನಗಳ ಮೇಲೆ ನನ್ನ ಹೇಳಿಕೆ ಕೇಂದ್ರೀಕರಿಸಿದೆ ಎಂದು ಸಚಿವರು ಹೇಳಿದ್ದಾರೆ.

"ನಾನು ಹೇಳಿದ್ದು ವಿಭಿನ್ನ ಸನ್ನಿವೇಶಗಳನ್ನು ಹೊಂದಿದ್ದು, ಕೌಶಲ್ಯದ ಕೊರತೆಯಿದೆ ಮತ್ತು ಸರ್ಕಾರವು ಕೌಶಲ್ಯ ಅಭಿವೃದ್ಧಿ ಸಚಿವಾಲಯವನ್ನು ತೆರೆದಿದೆ, ಇದರಿಂದಾಗಿ ಮಕ್ಕಳಿಗೆ ಕೆಲಸದ ಅವಶ್ಯಕತೆಗೆ ಅನುಗುಣವಾಗಿ ತರಬೇತಿ ನೀಡಬಹುದು" ಎಂದು ಸಚಿವರು ಹೇಳಿದರು.

ಉದ್ಯೋಗಾವಕಾಶಗಳು ಸಾಕಷ್ಟಿವೆ, ಆದರೆ ಉತ್ತರ ಭಾರತೀಯರಲ್ಲಿ ಸಾಮರ್ಥ್ಯದ ಕೊರತೆಯಿದೆ!

ಮೋದಿ ಸರ್ಕಾರದ ಎರಡನೇ ಅಧಿಕಾರಾವಧಿಯ ಮೊದಲ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಬರೇಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಗಂಗ್ವಾರ್, ಉದ್ಯೋಗಾವಕಾಶಗಳು ಸಾಕಷ್ಟು ಲಭ್ಯವಿದೆ. ಆದರೆ, ಉತ್ತರ ಭಾರತೀಯರಲ್ಲಿ ಕೌಶಲ್ಯದ ಕೊರತೆ ಇದೆ ಎಂದು ಹೇಳಿದ್ದರು. ಈ ಹೇಳಿಕೆಯ ಬಳಿಕ, ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಸೇತಿದಂತೆ ಅನೇಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

Trending News