ನವದೆಹಲಿ: ಭಾರತದಲ್ಲಿ 59 ಚೀನೀ ಆ್ಯಪ್‌ಗಳ (Chinese apps) ನಿಷೇಧದ ಬಳಿಕ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಚೀನೀ ಕಂಪನಿಗಳಿಗೆ ಸೂಚಿಸಿರುವ ಸರ್ಕಾರ ಒಂದೊಮ್ಮೆ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಲಡಾಖ್ ಹಿಂಸಾಚಾರದ ಹಿನ್ನೆಲೆಯಲ್ಲಿ ಜೂನ್ 29 ರಂದು ದೇಶದ ಭದ್ರತೆಗೆ ಧಕ್ಕೆ ತರುತ್ತಿವೆ ಎಂದು ಹೇಳಿ ಟಿಕ್‌ಟಾಕ್ (TikTok), ಕ್ಯಾಮ್‌ಸ್ಕಾನರ್ ಮತ್ತು ಯುಸಿ ಬ್ರೌಸರ್ ಸೇರಿದಂತೆ 59 ಚೀನೀ ಆ್ಯಪ್‌ಗಳನ್ನು ಸರ್ಕಾರ ನಿಷೇಧಿಸಿತು.
ಚೀನಿ ಆ್ಯಪ್‌ಗಳ ಬ್ಯಾನ್ ಬೆನ್ನಲ್ಲೇ ಈ ಭಾರತೀಯ ಆ್ಯಪ್‌ಗೆ ಡಿಮ್ಯಾಂಡಪ್ಪೋ... ಡಿಮ್ಯಾಂಡ್...!
ಐಟಿ ಸಚಿವಾಲಯವು ಈ ಎಲ್ಲ ಕಂಪನಿಗಳಿಗೆ ಪತ್ರವೊಂದನ್ನು ಬರೆದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ನಿರ್ಬಂಧಿತ ಅಪ್ಲಿಕೇಶನ್‌ಗಳ ಲಭ್ಯತೆ ಮತ್ತು ಕಾರ್ಯಾಚರಣೆಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಮುಂದುವರಿಸುವುದು ಕಾನೂನುಬಾಹಿರವಲ್ಲ, ಆದರೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಇತರ ಅನ್ವಯವಾಗುವ ಕಾನೂನುಗಳು ಇದರ ಅಡಿಯಲ್ಲಿ ಅಪರಾಧವೂ ಆಗಿದ್ದು ಇಂತಹ ನಡವಳಿಕೆಗಳ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಬಹುದಾಗಿದೆ.
ನಿಷೇಧಿತ ಪಟ್ಟಿಯಲ್ಲಿ ಸೇರಿಸಲಾಗಿರುವ ಯಾವುದೇ ಅಪ್ಲಿಕೇಶನ್‌ಗಳು ಭಾರತದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ವಿಧಾನದಲ್ಲಿ ಬಳಕೆಗೆ ಲಭ್ಯವಾಗಿದ್ದರೆ ಅದು ಸರ್ಕಾರದ ಆದೇಶಗಳ ಉಲ್ಲಂಘನೆಯಾಗಿದೆ ಎಂದು ಸರ್ಕಾರ ಚೀನಾದ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. ಸಚಿವಾಲಯದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಈ ಎಲ್ಲ ಕಂಪನಿಗಳಿಗೆ ಸೂಚಿಸಲಾಗಿದೆ.
ಭಾರತದಲ್ಲಿ 59 ಚೀನೀ ಅಪ್ಲಿಕೇಶನ್ ನಿಷೇಧ: ಚೀನೀಯರು ಹೆಚ್ಚು ಚಿಂತಿತರಾಗಿರುವುದೇಕೆ?
ಕಂಪನಿಗಳಿಗೆ ಕಳುಹಿಸಿದ ಪತ್ರದಲ್ಲಿ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಈ ನಿರ್ಬಂಧವನ್ನು ವಿಧಿಸಲಾಗಿದೆ ಎಂದು ಸಚಿವಾಲಯ ಉಲ್ಲೇಖಿಸಿದೆ ಮತ್ತು ಸಂಬಂಧಪಟ್ಟ ಕಂಪನಿಗಳು ಕಟ್ಟುನಿಟ್ಟಿನ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದೆ. ವಿಶೇಷವೆಂದರೆ ಲಡಾಖ್ ಹಿಂಸಾಚಾರದ ನಂತರ ಸರ್ಕಾರವು ಕೈಗೊಂಡ ಪ್ರಮುಖ ಕ್ರಮವೊಂದರಲ್ಲಿ 59 ಚೀನೀ ಆ್ಯಪ್‌ಗಳನ್ನು ನಿಷೇಧಿಸಿತು. ದೂರುಗಳನ್ನು ಉಲ್ಲೇಖಿಸಿ ಈ ಅಪ್ಲಿಕೇಶನ್‌ಗಳು ದೇಶದ ಭದ್ರತೆಗೆ ಅಪಾಯಕಾರಿ ಮತ್ತು ಬಳಕೆದಾರರ ಖಾಸಗಿ ಡೇಟಾವನ್ನು ಕದಿಯುತ್ತಿವೆ ಎಂದು ಸರ್ಕಾರ ಹೇಳಿದೆ.
TikTok ಮತ್ತು Helo ಅಪ್ಲಿಕೇಶನ್ ಬಗ್ಗೆ ಗೂಗಲ್, ಆಪಲ್ ಸಹ ಕೈಗೊಂಡಿದೆ ಈ ಮಹತ್ವದ ನಿರ್ಧಾರ
ಈ ನಿರ್ಬಂಧವು WeChat ಮತ್ತು Bigo Live ಗೆ ಸಹ ಅನ್ವಯಿಸುತ್ತದೆ. ಸರ್ಕಾರ ನಿಷೇಧಿಸಿರುವ ಅಪ್ಲಿಕೇಶನ್‌ಗಳಲ್ಲಿ Helo, ಲೈಕ್, ಕ್ಯಾಮ್‌ಸ್ಕಾನರ್, ವಿಗೊ ವಿಡಿಯೋ, ಎಂಐ ವಿಡಿಯೋ ಕಾಲ್, ಶಿಯೋಮಿ, ಕ್ಲಾಷ್ ಆಫ್ ಕಿಂಗ್ಸ್ ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಕ್ಲಬ್ ಫ್ಯಾಕ್ಟರಿ ಮತ್ತು ಶೀನ್ ಸೇರಿವೆ.