ಬಾಲಿವುಡ್ ನಟಿ ಉರ್ಮಿಳಾ ಮಾತೋಂಡ್ಕರ್ ರನ್ನು ವಿಧಾನ ಪರಿಷತ್ ಗೆ ಶಿಫಾರಸು ಮಾಡುವ ಸಾಧ್ಯತೆ

ಬಾಲಿವುಡ್ ನಟಿ ಉರ್ಮಿಲಾ ಮಾತೋಂಡ್ಕರ್ ಅವರನ್ನು ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ರಾಜ್ಯ ವಿಧಾನ ಪರಿಷತ್ತಿಗೆ ಶಿಫಾರಸು ಮಾಡಬಹುದು. ಇದರ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿರ್ಧರಿಸಲಿದ್ದಾರೆ ಎಂದು ಶಿವಸೇನೆ ಮುಖಂಡ ಸಂಜಯ್ ರೌತ್ ಶುಕ್ರವಾರ ಹೇಳಿದ್ದಾರೆ.

Last Updated : Oct 31, 2020, 11:50 AM IST
 ಬಾಲಿವುಡ್ ನಟಿ ಉರ್ಮಿಳಾ ಮಾತೋಂಡ್ಕರ್ ರನ್ನು ವಿಧಾನ ಪರಿಷತ್ ಗೆ ಶಿಫಾರಸು ಮಾಡುವ ಸಾಧ್ಯತೆ title=
Photo Courtesy: Facebook

ನವದೆಹಲಿ: ಬಾಲಿವುಡ್ ನಟಿ ಉರ್ಮಿಲಾ ಮಾತೋಂಡ್ಕರ್ ಅವರನ್ನು ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ರಾಜ್ಯ ವಿಧಾನ ಪರಿಷತ್ತಿಗೆ ಶಿಫಾರಸು ಮಾಡಬಹುದು. ಇದರ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿರ್ಧರಿಸಲಿದ್ದಾರೆ ಎಂದು ಶಿವಸೇನೆ ಮುಖಂಡ ಸಂಜಯ್ ರೌತ್ ಶುಕ್ರವಾರ ಹೇಳಿದ್ದಾರೆ.

ರಾಜ್ಯ ಸರ್ಕಾರದ ಶಿಫಾರಸಿನ ಮೇರೆಗೆ ರಾಜ್ಯ ವಿಧಾನಸಭೆಯ ಮೇಲ್ಮನೆಗೆ ರಾಜ್ಯಪಾಲರು ನಾಮನಿರ್ದೇಶನ ಮಾಡಿದ 12 ಅಭ್ಯರ್ಥಿಗಳ ಪೈಕಿ ಉರ್ಮಿಳಾ ಮಾತೋಂಡ್ಕರ್ ಅವರ ಹೆಸರು ಸೇರುವ ಸಾಧ್ಯತೆ ಇದೆ.

'ಉರ್ಮಿಳಾ ಮಾತೋಂಡ್ಕರ್ ಅವರನ್ನು ಸರ್ಕಾರವು ಪರಿಷತ್ತಿಗೆ ನಾಮನಿರ್ದೇಶನ ಮಾಡುತ್ತದೆ ಎಂಬ ಊಹಾಪೋಹಗಳ ಬಗ್ಗೆಯೂ ನಾನು ಕೇಳಿದ್ದೇನೆ. ಇದು ರಾಜ್ಯ ಸಚಿವ ಸಂಪುಟದ ಅಧಿಕಾರವಾಗಿದೆ, ಇದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ನೀಡಿದೆ" ಎಂದು ರಾಜ್ಯಸಭಾ ಸದಸ್ಯ ಸಂಜಯ್ ರೌತ್ ಹೇಳಿದ್ದಾರೆ.

ಕಂಗನಾ ಸಾಫ್ಟ್ ಪೋರ್ನ್ ಸ್ಟಾರ್ ಹೇಳಿಕೆ ನಂತರ ನಟಿ ಊರ್ಮಿಳಾ ಮಾತೊಂಡ್ಕರ್ ಟ್ವೀಟ್

46 ವರ್ಷದ ಉರ್ಮಿಲಾ ಮಾತೋಂಡ್ಕರ್ ಅವರು ಕಳೆದ ವರ್ಷ ಮುಂಬೈ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. ನಂತರ, ಪಕ್ಷದ ಮುಖಂಡರುಗಳು ಆಂತರಿಕ ಬಣಗಳ ಮೂಲಕ ತಮ್ಮ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಕಾಂಗ್ರೆಸ್ ತೊರೆದರು.ಉರ್ಮಿಳಾ ಮಾತೋಂಡ್ಕರ್ ಇತ್ತೀಚೆಗೆ ನಟಿ ಕಂಗನಾ ರನೌತ್ ಅವರು ಮುಂಬೈ ಕುರಿತಾಗಿ ನೀಡಿದ ಹೇಳಿಕೆ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಡ್ರಗ್ಸ್ ನ ಮೂಲವಾದ ಹಿಮಾಚಲದಿಂದಲೇ ಕಂಗನಾ ಹೋರಾಟ ಪ್ರಾರಂಭಿಸಲಿ- ಉರ್ಮಿಳಾ ಮಾತೋಂಡ್ಕರ್

ಸಾಹಿತ್ಯ, ಕಲೆ, ವಿಜ್ಞಾನ, ಸಹಕಾರಿ ಆಂದೋಲನ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳಿಂದ 12 ಸದಸ್ಯರನ್ನು ಶಾಸಕಾಂಗ ಮಂಡಳಿಗೆ ನಾಮನಿರ್ದೇಶನ ಮಾಡಲು ರಾಜ್ಯಪಾಲರು ಸಂವಿಧಾನದಿಂದ ಆದೇಶಿಸಿದ್ದಾರೆ.ಹೆಸರುಗಳನ್ನು ಚರ್ಚಿಸಲು ಮಹಾರಾಷ್ಟ್ರ ಸಚಿವ ಸಂಪುಟ ಗುರುವಾರ ಸಭೆ ಸೇರಿತು. ಆಡಳಿತಾರೂಢ ಒಕ್ಕೂಟದ ಮೂರು ಪಕ್ಷಗಳಾದ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ತಲಾ ನಾಲ್ಕು ಸದಸ್ಯರನ್ನು ಕಣಕ್ಕಿಳಿಸಲಿವೆ.

ಪಿಟಿಐ ಪ್ರಕಾರ, ಮರಾಠಿ ನಟ ಮತ್ತು ಶಿವಸೇನಾ ನಾಯಕ ಆದೇಶ್ ಬಂಡೇಕರ್, ಗಾಯಕ ಆನಂದ್ ಶಿಂಧೆ, ಎನ್‌ಸಿಪಿ ನಾಯಕ ಏಕನಾಥ್ ಖಡ್ಸೆ (ಅವರು ಇತ್ತೀಚೆಗೆ ಬಿಜೆಪಿಯನ್ನು ತೊರೆದರು) ಅವರ ಹೆಸರನ್ನು ಸಹ ಪರಿಗಣಿಸಲಾಗುತ್ತಿದೆ.

Trending News