ನವದೆಹಲಿ: ಇತ್ತಿಚಿಗೆ ಆರ್ಥಶಾಸ್ತ್ರದಲ್ಲಿ ನೊಬೆಲ್ ಪುರಸ್ಕಾರ ಪಡೆದಿರುವ ಅಭಿಜಿತ್ ಬ್ಯಾನರ್ಜೀ ಎಡಪಂಥೀಯ ವಿಚಾರದಾರೆಯನ್ನು ಹೊಂದಿದ್ದಾರೆ ಅವುಗಳನ್ನು ಒಪ್ಪುವುದಿಲ್ಲ ಎಂದು ಕೇಂದ್ರ ಸಚಿವ ಪಿಯುಶ್ ಗೋಯಲ್ ಹೇಳಿದ್ದಾರೆ.
ವಿಧಾನಸಭಾ ಚುನಾವಣಾ ಪ್ರಚಾರದ ಭಾಗವಾಗಿ ಶುಕ್ರವಾರದಂದು ಪಿಯುಶ್ ಗೋಯೆಲ್ ಪುಣೆಗೆ ಭೇಟಿ ನೀಡಿ ವ್ಯಾಪಾರಿಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ನೊಬೆಲ್ ಪುರಸ್ಕೃತ ಆರ್ಥಿಕ ತಜ್ಞ ಅಭಿಜಿತ್ ಬ್ಯಾನರ್ಜೀ ಅವರ ಭಾರತದ ಆರ್ಥಿಕ ಪ್ರಗತಿ ಕುರಿತ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ 'ಬ್ಯಾನರ್ಜಿ ಅವರು ಸಂಪೂರ್ಣವಾಗಿ ಎಡಪಂಥೀಯ ವಿಚಾರದಾರೆಯನ್ನು ಹೊಂದಿದ್ದಾರೆ, 2019 ರ ಲೋಕಸಭಾ ಚುನಾವಣೆಯಲ್ಲಿ ದೇಶದ ಜನರು ತಿರಸ್ಕರಿಸಿದ ಕಾಂಗ್ರೆಸ್ ನ ನ್ಯಾಯ ಯೋಜನೆಯ ಪ್ರಸ್ತಾಪವನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು.
#WATCH Piyush Goyal:Abhijit Banerjee ji ko nobel prize mila main unko badhai deta hun.Lekin unki samajh ke bare me to aap sab jaante hain.Unki jo thinking hai,wo totally left leaning hai.Unhone NYAY ke bade gungaan gaye the,Bharat ki janta ne totally reject kar diya unki soch ko pic.twitter.com/v7OO49ie5E
— ANI (@ANI) October 18, 2019
ಇದೇ ವೇಳೆ ಅವರು ಮಹಾರಾಷ್ಟ್ರದಲ್ಲಿ ಬಿಜೆಪಿ-ಸೇನಾ ಮೈತ್ರಿಕೂಟವು 288 ರಾಜ್ಯ ವಿಧಾನಸಭೆಯಲ್ಲಿ 220 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಹೊಂದಿದೆ ಎಂದು ಹೇಳಿದರು. ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಅಭಿಜಿತ್ ಬ್ಯಾನರ್ಜಿ ಸರ್ಕಾರ ಆರ್ಥಿಕತೆಯನ್ನು ನಿಭಾಯಿಸುವ ವಿಚಾರದಲ್ಲಿ ಎಡವಿರುವ ಬಗ್ಗೆ ಗಮನ ಸೆಳೆದಿರುವ ಬಗ್ಗೆ ಕೇಳಿದಾಗ ಇದಕ್ಕೆ ಗೋಯಲ್ ಅವರ ಹೇಳಿಕೆಗಳನ್ನು ಅಲ್ಲಗಳೆದರು.
ಇದೇ ವೇಳೆ ಗೋಯಲ್ ಅವರು ಒಬ್ಬ ಭಾರತೀಯನಿಗೆ ನೊಬೆಲ್ ಪ್ರಶಸ್ತಿ ಸಿಕ್ಕಿದೆ ಎಂದು ನಾನು ಹೆಮ್ಮೆಪಡುತ್ತೇನೆ, ಆದರೆ ನಾನು ಅವರ ಆಲೋಚನೆಗಳನ್ನು ಒಪ್ಪಿಕೊಳ್ಳುವುದು ಅನಿವಾರ್ಯವಲ್ಲ. ವಿಶೇಷವಾಗಿ ಈ ದೇಶದ ಜನರು ಅವರ ಸಲಹೆಯನ್ನು ತಿರಸ್ಕರಿಸಿದಾಗ, ನನಗೆ ಅವರ ವಿಚಾರಗಳನ್ನು ಸ್ವೀಕರಿಸುವ ಅಗತ್ಯವಿಲ್ಲ' ಎಂದು ಹೇಳಿದರು.