ನವದೆಹಲಿ: ತಮ್ಮ ವಿಭಿನ್ನ ಮಾತಿನ ಬಾಣದಿಂದಲೇ ಗಮನ ಸೆಳೆದಿರುವ ಸಿಧು, ಈಗ ತಪ್ಪಾಗಿ ಹಾಕುವ ಮತ, ಭವಿಷ್ಯದಲ್ಲಿ ನಿಮ್ಮ ಮಗುವನ್ನು ಚಹಾ,ಪಕೋಡ ಮಾರಾಟಗಾರನಾಗಿ ಅಥವಾ ಚೌಕಿದಾರನಾಗಿ ಮಾಡುತ್ತೆ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಎಚ್ಚರಿಕೆ ನೀಡಿದ್ದಾರೆ.
एक गलत वोट आपके बच्चों को चायवाला, पकौड़ेवाला या चौकीदार बना सकता है|
Better prevent and prepare, rather then repent and repair...
— Navjot Singh Sidhu (@sherryontopp) April 29, 2019
ಈ ಕುರಿತಾಗಿ ಟ್ವೀಟ್ ಮಾಡಿರುವ ಸಿಧು " ನಿಮ್ಮ ತಪ್ಪಾದ ಒಂದು ಮುಂದೆ ನಿಮ್ಮ ಚಹಾ,ಪಕೋಡ ಮಾರಾಟಗಾರನಾಗಿ ಅಥವಾ ಚೌಕಿದಾರನಾಗಿ ಮಾಡುತ್ತೆ, ಆದ್ದರಿಂದ ದುರಸ್ತಿ ಅಥವಾ ಪಶ್ಚಾತ್ತಾಪ ಪಡುವ ಬದಲಾಗಿ ಅದನ್ನು ತಡೆಗಟ್ಟುವಲ್ಲಿ ಸಿದ್ದರಾಗಿರಿ" ಎಂದು ತಿಳಿಸಿದ್ದಾರೆ.ಈ ಹಿಂದೆ ಪ್ರಧಾನಿ ತಮ್ಮ ಚಾಯ್ ವಾಲಾ, ಚೌಕಿದಾರ್ ಎಂದು ಹೇಳಿಕೊಂಡಿದ್ದರು. ಅಲ್ಲದೆ ಪಕೋಡ ಮಾರುವುದು ಕೂಡ ಉದ್ಯೋಗದ ಭಾಗವೆಂದು ಹೇಳಿದ್ದರು.ಈ ಹಿನ್ನಲೆಯಲ್ಲಿ ಈಗ ಪ್ರಧಾನಿ ಮೋದಿಯನ್ನು ಸಿಧು ವ್ಯಂಗ್ಯವಾಡಿದ್ದಾರೆ.
ಇತ್ತೀಚಿಗೆ ನವಜೋತ್ ಸಿಂಗ್ ಸಿಧು ಮುಸ್ಲಿಮ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳಲು ಬಿಹಾರದ ರ್ಯಾಲಿವೊಂದರಲ್ಲಿ ಹೇಳಿದ್ದರು.ಈ ಹೇಳಿಕೆಗೆ ಚುನಾವಣಾ ಆಯೋಗ ತೀವ್ರ ಆಕ್ಷೇಪ ವ್ಯಕ್ತಪಡಿಸಿ 72 ಗಂಟೆಗಳ ಕಾಲ ಅವರಿಗೆ ನಿಷೇಧವನ್ನು ಹೇರಿತ್ತು.