ಸಿಜೆಐ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ'ಸುಪ್ರೀಂ' ಕ್ಲೀನ್ ಚಿಟ್ ಖಂಡಿಸಿ ಪ್ರತಿಭಟನೆ

ಸುಪ್ರೀಂಕೋರ್ಟ್ ನ ಆಂತರಿಕ ಸಮಿತಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ವಿಚಾರವಾಗಿ ಸೋಮವಾರಂದು ಸುಪ್ರೀಂ ಕ್ಲೀನ್ ಚಿನ್ ನೀಡಿತ್ತು. ಈಗ ಸುಪ್ರೀಂಕೋರ್ಟ್ ನ ನಡೆಯನ್ನು ಖಂಡಿಸಿ ಮಹಿಳಾ ವಕೀಲರು ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

Last Updated : May 7, 2019, 02:58 PM IST
ಸಿಜೆಐ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ'ಸುಪ್ರೀಂ' ಕ್ಲೀನ್ ಚಿಟ್ ಖಂಡಿಸಿ ಪ್ರತಿಭಟನೆ   title=
photo:ANI

ನವದೆಹಲಿ: ಸುಪ್ರೀಂಕೋರ್ಟ್ ನ ಆಂತರಿಕ ಸಮಿತಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ವಿಚಾರವಾಗಿ ಸೋಮವಾರಂದು ಸುಪ್ರೀಂ ಕ್ಲೀನ್ ಚಿನ್ ನೀಡಿತ್ತು. ಈಗ ಸುಪ್ರೀಂಕೋರ್ಟ್ ನ ನಡೆಯನ್ನು ಖಂಡಿಸಿ ಮಹಿಳಾ ವಕೀಲರು ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಈ ಸುಪ್ರೀಂ ತೀರ್ಪಿನ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಪಿಎಂ ಪಕ್ಷದ ನಾಯಕಿ ಬ್ರಿಂದಾ ಕಾರಟ್ "ಸುಪ್ರೀಂನ  ನಡಾವಳಿ ನಿಜಕ್ಕೂ ಅನ್ಯಾಯ, ಸಂತ್ರಸ್ಥೆಗೆ ಸುಪ್ರೀಂ ವರದಿಯನ್ನು ಏಕೆ ನೀಡಿಲ್ಲ? ಇದು ತಪ್ಪು ನಡೆ. ಅವರು ಪ್ರಕರಣವನ್ನು ತಳ್ಳಿಹಾಕಿದ ಸಂದರ್ಭದಲ್ಲಿ ಸುಪ್ರೀಂ ನ ವಿಧಿ ವಿಧಾನದ ವಿಚಾರವಾಗಿ ಹಲವು ಸಂಶಯಗಳು ಏರ್ಪಟ್ಟಿವೆ. ಆದ್ದರಿಂದ ಕಾನೂನಿನಲ್ಲಿ ಪಾರದರ್ಶಕತೆ ಅವಶ್ಯಕ "ಎಂದು ಸುಪ್ರೀಂ ನಡೆಯನ್ನು ಖಂಡಿಸಿದರು.

ವಕೀಲೆ ಅಮೃತಾನಂದಾ ಚಕ್ರವರ್ತಿ ಟ್ವೀಟ್ ಮಾಡಿ "ನಮಗೆ ಕನಿಷ್ಠ ಐದು ನಿಮಿಷಗಳ ಕಾಲ ಪ್ರತಿಭಟಿಸಲು ಅವಕಾಶ ನೀಡುತ್ತಿಲ್ಲ, ಮೊದಲು ಸುಪ್ರೀಂ ವ್ಯಂಗ್ಯ ಪ್ರಕ್ರಿಯೆಗೆ ಅವಕಾಶ ನೀಡಿ ಈಗ ಅದು ಯಾವುದೇ ಟೀಕೆಗಳಿಗೆ ಅವಕಾಶ ನೀಡುತ್ತಿಲ್ಲ. ಕಾನೂನು ಪ್ರಕ್ರಿಯೆ ಸಾವಿರ ಬಾರಿ ಸತ್ತು ಹೋಗಿದೆ"ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರದಂದು ಸುಪ್ರೀಂಕೋರ್ಟ್ ನ ಆಂತರಿಕ ಸಮಿತಿ ಮುಖ್ಯನಾಯಮೂರ್ತಿಗಳ ವಿರುದ್ಧ ಮಾಡಿರುವ ಆರೋಪಗಳೆಲ್ಲವು ಆಧಾರ ರಹಿತ ಎಂದು ಹೇಳಿತ್ತು. ಅಲ್ಲದೆ ಆಂತರಿಕ ಸಮಿತಿ ತನಿಖಾ ವರದಿಯನ್ನು ಸಹಿತ ಸಾರ್ವಜನಿಕವಾಗಿ ಬಿಡುಗಡೆ ಮಾಡುವುದಿಲ್ಲವೆಂದು ಸುಪ್ರೀಂ ಕೋರ್ಟ್ ತಿಳಿಸಿತ್ತು. ಆದ್ದರಿಂದ ಇಂದು ಪ್ರತಿಭಟನಾಕಾರರು ಸುಪ್ರೀಂಕೋರ್ಟ್ ಎದುರು ಜಮಾಯಿಸಿ ವರದಿಯನ್ನು ಸಾರ್ವಜನಿಕಗೊಳಿಸಬೇಕೆಂದು ಆಗ್ರಹಿಸಿದರು. 

  

 

Trending News