ಸ್ನ್ಯಾಕ್ಸ್ ಫ್ಯಾಕ್ಟರಿಯಲ್ಲಿ ಭಾರಿ ಸ್ಫೋಟ: ಐವರು ಸಾವು, 6 ಮಂದಿಗೆ ಗಾಯ

Explosion at a snacks factory: ಬಿಹಾರದ ಮುಜಾಫರ್‌ಪುರದಲ್ಲಿರುವ ಸ್ನ್ಯಾಕ್ಸ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ ಸಂಭವಿಸಿದೆ. ಈ ಅವಘಡದಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ. 6 ಮಂದಿ ಗಾಯಗೊಂಡಿದ್ದಾರೆ.

Edited by - Zee Kannada News Desk | Last Updated : Dec 26, 2021, 01:39 PM IST
  • ಸ್ನ್ಯಾಕ್ಸ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ
  • ಬಿಹಾರದ ಮುಜಾಫರ್‌ಪುರದಲ್ಲಿ ಅವಘಡ
  • ಐವರು ಸಾವು, 6 ಮಂದಿಗೆ ಗಾಯ
ಸ್ನ್ಯಾಕ್ಸ್ ಫ್ಯಾಕ್ಟರಿಯಲ್ಲಿ ಭಾರಿ ಸ್ಫೋಟ: ಐವರು ಸಾವು, 6 ಮಂದಿಗೆ ಗಾಯ  title=
ಬಾಯ್ಲರ್ ಸ್ಫೋಟ

ನವದೆಹಲಿ: ಬಿಹಾರದ ಮುಜಾಫರ್‌ಪುರದಲ್ಲಿರುವ ಸ್ನ್ಯಾಕ್ಸ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ (Explosion at a snacks factory) ಸಂಭವಿಸಿದೆ. ಈ ಅವಘಡದಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ. 6 ಮಂದಿ ಗಾಯಗೊಂಡಿದ್ದಾರೆ. 

ಮಾಹಿತಿ ಪ್ರಕಾರ, ಈ ಘಟನೆ ಭಾನುವಾರ ಬೇಲಾ ಕೈಗಾರಿಕಾ ಪ್ರದೇಶದ ಮೋದಿ ಕುರ್ ಕುರೆ ಮತ್ತು ನೂಡಲ್ಸ್ ಫ್ಯಾಕ್ಟರಿಯಲ್ಲಿ ನಡೆದಿದೆ. ಎಸ್ಪಿ-ಡಿಎಂ ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಸ್ಥಳದಲ್ಲಿದ್ದಾರೆ.

ಘಟನೆ ವೇಳೆ ಕಾರ್ಖಾನೆಯೊಳಗೆ ಹತ್ತಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು. ಭಾರೀ ಸ್ಫೋಟದ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ತೀವ್ರಗೊಳಿಸಲಾಗಿದೆ.

"ಸ್ಫೋಟದಿಂದಾಗಿ ಸುತ್ತಮುತ್ತಲಿನ ಭೂಮಿಯೂ ನಡುಗಿತು. ನಾವು ಮೊದಲು ಭೂಕಂಪ ಸಂಭವಿಸಿದೆ ಎಂದುಕೊಂಡೆವು. ಕೆಲವರು ಮನೆಯಿಂದ ಹೊರ ಬಂದರು. ಆದರೆ ನಂತರ ಬಾಯ್ಲರ್ ಸ್ಫೋಟದಿಂದ (boiler explosion) ಭೂಮಿ ಕಂಪಿಸಿದೆ ಎಂದು ತಿಳಿದುಬಂದಿದೆ" ಎಂದು ಸುತ್ತಮುತ್ತಲಿನ ಜನರು ಹೇಳಿದ್ದಾರೆ.

ವರದಿಗಳ ಪ್ರಕಾರ ಸ್ಫೋಟ ಸಂಭವಿಸಿದ ಕಾರ್ಖಾನೆಯಲ್ಲಿ ನೂಡಲ್ಸ್ ತಯಾರಿಸಲಾಗಿತ್ತು. ಸ್ಫೋಟದಲ್ಲಿ ನೂಡಲ್ಸ್ ಕಾರ್ಖಾನೆ ಸಂಪೂರ್ಣ ನಾಶವಾಗಿದೆ. ಸ್ಫೋಟದಿಂದಾಗಿ ಹತ್ತಿರದ ಅನೇಕ ಕಾರ್ಖಾನೆಗಳು ಹಾನಿಗೊಳಗಾಗಿವೆ. ಮುಜಾಫರ್‌ಪುರ ಎಸ್‌ಎಸ್‌ಪಿ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಗಾಯಾಳುಗಳನ್ನು ಸದರ್ ಆಸ್ಪತ್ರೆ ಮತ್ತು ಎಸ್‌ಕೆಎಂಸಿಎಚ್‌ಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.

ಅಪಘಾತದ ನಂತರ ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ. ಇದೇ ವೇಳೆ ಕಾರ್ಖಾನೆಯ ಗೇಟ್ ಮುಚ್ಚಲಾಗಿದೆ. ಬಾಯ್ಲರ್ ಸ್ಫೋಟಗೊಂಡಿದ್ದರಿಂದ ಭಾರೀ ಸದ್ದು ಕೇಳಿ ಬಂದಿತ್ತು ಎಂದು ಅಕ್ಕಪಕ್ಕದ ಜನರು ತಿಳಿಸಿದ್ದಾರೆ. 

ಇದನ್ನೂ ಓದಿ:  WATCH:ದೈತ್ಯ ಹಾವಿನೊಂದಿಗೆ ಆಟ, ಭಯಾನಕ ವಿಡಿಯೋ ವೈರಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News