ನಟ ಸಲ್ಮಾನ್ ಖಾನ್ ಕೊಲ್ಲಲು ಸಂಚು ರೂಪಿಸಿದ್ದ ವ್ಯಕ್ತಿಯೊಬ್ಬನ ಬಂಧನ

    

Last Updated : Jun 10, 2018, 11:00 AM IST
ನಟ ಸಲ್ಮಾನ್ ಖಾನ್ ಕೊಲ್ಲಲು ಸಂಚು ರೂಪಿಸಿದ್ದ ವ್ಯಕ್ತಿಯೊಬ್ಬನ ಬಂಧನ title=

ಹೈದರಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಯೋಜನೆ ರೂಪಿಸುತ್ತಿದ್ದ ಲಾರೆನ್ಸ್ ಬಿಷ್ನೋಯಿ ಗ್ಯಾಂಗ್ ಗೆ ಸಂಬಂಧಿಸಿದ ವ್ಯಕ್ತಿಯನ್ನು ಹೈದರಾಬಾದ್ನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ಲಾರೆನ್ಸ್ ಬಿಶ್ನೋಯ್ ಗ್ಯಾಂಗ್ ರಾಜಸ್ಥಾನದ ಜೋಧಪುರದಲ್ಲಿ ಕೃಷ್ಣಾ ಮೃಗವನ್ನು ಭೇಟಿ ಆಡಿದ್ದಕ್ಕಾಗಿ ಸಲ್ಮಾನ್ ಖಾನ್ ಗೆ ಕೊಲ್ಲುವ ಬೆದರಿಕೆ ಹಾಕಿದ್ದರು ಎಂದು ತಿಳಿದುಬಂದಿದೆ 

ಬಂಧಿತ ಆರೋಪಿಯನ್ನು ಹೈದರಾಬಾದ್ ಪೊಲೀಸರು ಸಂಚಾತ್ ನೆಹ್ರಾ ಎಂದು ಗುರುತಿಸಿದ್ದಾರೆ.  ಈಗ ಅವರನ್ನು ರಾಜ್ಯ ಪೊಲೀಸ್ ವಿಶೇಷ ಕಾರ್ಯಪಡೆಯಿಂದ ಹರಿಯಾಣಕ್ಕೆ ಕರೆದೊಯ್ಯಲಾಗುತ್ತದೆ. ಹೈದರಾಬಾದ್ ಪೊಲೀಸರ ಪ್ರಕಾರ, ನೆಹ್ರಾ ಸಲ್ಮಾನ್ ಖಾನ್ ಅಭಿಮಾನಿಯ ಹಾಗೆ ವರ್ತಿಸಿ ಮುಂಬೈಯಲ್ಲಿನ ನಟನ ಮನೆಯ ಹತ್ತಿರ  ಅವರ ಚಲನವಲನಗಳನ್ನು ತಿಳಿದುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ಆದರೆ ಈಗ  ಹೈದರಾಬಾದ್ ಪೊಲೀಸರು ಅವರನ್ನು ಜೂನ್ 6 ರಂದು ಬಂಧಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಜೋಧಪುರ್ ನಲ್ಲಿ  ಸಲ್ಮಾನ್ ಖಾನ್ನನ್ನು ಕೊಲ್ಲುತ್ತೇನೆ ಎಂದು  ಎಂದು ದರೋಡೆಕೋರ ಲಾರೆನ್ಸ್ ಬಿಶ್ನೋಯ್ ತಿಳಿಸಿದ್ದರು. ಈ ಹಿಂದೆ ಜನವರಿಯಲ್ಲಿ, ಮುಂಬೈ ಫಿಲ್ಮ್ ಸಿಟಿ ಆವರಣದಲ್ಲಿ  ರೇಸ್ 3 ಚಲನಚಿತ್ರ ಶೂಟಿಂಗ್ ಸಂದರ್ಭದಲ್ಲಿ ಕೆಲವು  ಅನುಮಾನಸ್ಪದ ವ್ಯಕ್ತಿಗಳು ಪ್ರವೇಶಿಸಿದ್ದಾರೆ ಎನ್ನುವ ಕಾರಣದಿಂದಾಗಿ ಅವರನ್ನು ವಾಪಾಸ್ ಮನೆಗೆ ಕಳುಹಿಸಲಾಗಿತ್ತು.

1998 ರ ಅಕ್ಟೋಬರ್ 1 ರಂದು ಸೂರಜ್ ಬಾರ್ಜತ್ಯರ ಹಮ್ ಸಾಥ್ ಸಾಥ್ ಹೈ ಚಿತ್ರೀಕರಣದ ಸಮಯದಲ್ಲಿ ಜೋಧಪುರದ ಕಂಕನಿ ಗ್ರಾಮದಲ್ಲಿ ಕೃಷ್ಣ ಮೃಗ ಭೇಟಿಯನ್ನು ಆಡಿದ್ದಕ್ಕಾಗಿ ಅವರನ್ನು ಅಪರಾಧಿ ಎಂದು ಘೋಷಿಸಲಾಗಿತ್ತು ಆದರೆ ಅವರು ಈಗ ಜಾಮೀನು ಆಧಾರದ ಮೇಲೆ ಬಿಡುಗಡೆಯಾಗಿದ್ದಾರೆ.

Trending News