ರಾಜಸ್ತಾನದ ಆಸ್ಪತ್ರೆಯೊಂದರಲ್ಲಿ ಒಂದು ತಿಂಗಳಲ್ಲಿ 100 ಹಸುಳೆಗಳ ಸಾವು

ರಾಜಸ್ಥಾನದ ಕೋಟಾದಲ್ಲಿನ ಒಂದೇ ಆಸ್ಪತ್ರೆಯಲ್ಲಿ ಒಂದು ತಿಂಗಳಲ್ಲಿ ನೂರು ಶಿಶುಗಳು ಸಾವನ್ನಪ್ಪಿದ್ದು, ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಆತಂಕಕಾರಿ ಸಾವುಗಳು ಸಂಭವಿಸಿರುವುದು ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

Last Updated : Jan 2, 2020, 02:52 PM IST
ರಾಜಸ್ತಾನದ ಆಸ್ಪತ್ರೆಯೊಂದರಲ್ಲಿ ಒಂದು ತಿಂಗಳಲ್ಲಿ 100 ಹಸುಳೆಗಳ ಸಾವು  title=
ಸಾಂದರ್ಭಿಕ ಚಿತ್ರ

ನವದೆಹಲಿ: ರಾಜಸ್ಥಾನದ ಕೋಟಾದಲ್ಲಿನ ಒಂದೇ ಆಸ್ಪತ್ರೆಯಲ್ಲಿ ಒಂದು ತಿಂಗಳಲ್ಲಿ ನೂರು ಶಿಶುಗಳು ಸಾವನ್ನಪ್ಪಿದ್ದು, ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಆತಂಕಕಾರಿ ಸಾವುಗಳು ಸಂಭವಿಸಿರುವುದು ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

ಜೈಪುರದಿಂದ 251 ಕಿ.ಮೀ ದೂರದಲ್ಲಿರುವ ಕೋಟಾ ನಗರದ ಸರ್ಕಾರ ನಡೆಸುತ್ತಿರುವ ಜೆಕೆ ಲೋನ್ ಆಸ್ಪತ್ರೆಯಲ್ಲಿ ಡಿಸೆಂಬರ್ ಕೊನೆಯ ಎರಡು ದಿನಗಳಲ್ಲಿ ಕನಿಷ್ಠ ಒಂಬತ್ತು ಶಿಶುಗಳು ಸಾವನ್ನಪ್ಪಿವೆ. ಶಿಶುಗಳ ಸಾವಿಗೆ ವಿರೋಧ ವ್ಯಕ್ತವಾದ ನಂತರ ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಆಯೋಗದ (ಎನ್‌ಸಿಪಿಸಿಆರ್) ತಂಡವು ಭೇಟಿ ನೀಡಿದೆ. 

ಆಸ್ಪತ್ರೆಯ ತಪಾಸಣೆಯ ಸಮಯದಲ್ಲಿ ಮುರಿದ ಕಿಟಕಿಗಳು ಮತ್ತು ಗೇಟ್‌ಗಳು, ಆಸ್ಪತ್ರೆ ಆವರಣದೊಳಗೆ ಹಂದಿಗಳು ತಿರುಗಾಡುವುದು ಮತ್ತು ಸಿಬ್ಬಂದಿಗಳ ತೀವ್ರ ಕೊರತೆ ಮಕ್ಕಳ ಹಕ್ಕುಗಳ ಉನ್ನತ ಸಂಸ್ಥೆಯ ತಪಾಸಣೆ ವೇಳೆ ಕಂಡು ಬಂದಿದೆ.

ಡಿಸೆಂಬರ್ 23 ಮತ್ತು 24 ರ ನಡುವಿನ 48 ಗಂಟೆಗಳ ಅವಧಿಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಹತ್ತು ಮಕ್ಕಳು ಸಾವನ್ನಪ್ಪಿದ್ದಾರೆ.ಜನನ ತೂಕ ಕಡಿಮೆ ಇರುವುದರಿಂದ ನಾಲ್ಕು ಮಕ್ಕಳು ಡಿಸೆಂಬರ್ 30 ರಂದು ಸಾವನ್ನಪ್ಪಿದ್ದರೆ, ಡಿಸೆಂಬರ್ 31 ರಂದು ಐದು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಅಧೀಕ್ಷಕ ಡಾ.ಸುರೇಶ್ ದುಲಾರಾ ತಿಳಿಸಿದ್ದಾರೆ. 2019 ರ ಕೊನೆಯ ಎರಡು ದಿನಗಳಲ್ಲಿ ಸಾವನ್ನಪ್ಪಿದ ಎಂಟು ಮಕ್ಕಳು ಅಕಾಲಿಕ ಹೆರಿಗೆಯಾಗಿದ್ದು, ವೈದ್ಯರ ಕಡೆಯಿಂದ ಯಾವುದೇ ದೋಷ ಉಂಟಾಗಿಲ್ಲ ಎಂದು ಆಸ್ಪತ್ರೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್) ತನ್ನ ತಂಡವು ಮುರಿದ ಕಿಟಕಿಗಳು ಮತ್ತು ಗೇಟ್‌ಗಳು, ಆಸ್ಪತ್ರೆಯ ಆವರಣದೊಳಗೆ ಹಂದಿಗಳು ತಿರುಗಾಡುತ್ತಿರುವುದು ಮತ್ತು ಸಿಬ್ಬಂದಿ ಕೊರತೆಯನ್ನು ಕಂಡುಕೊಂಡಿದೆ ಎಂದು ಹೇಳಿದರು. "ಕಿಟಕಿ ಫಲಕಗಳಲ್ಲಿ ಯಾವುದೇ ಗಾಜು ಇರಲಿಲ್ಲ, ಗೇಟ್‌ಗಳು ಮುರಿದುಹೋಗಿವೆ ಮತ್ತು ಇದರ ಪರಿಣಾಮವಾಗಿ ಪ್ರವೇಶ ಪಡೆದ ಮಕ್ಕಳು ತೀವ್ರ ಹವಾಮಾನದಿಂದ ಬಳಲುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ" ಎಂದು ಮಕ್ಕಳ ಹಕ್ಕುಗಳ ಸಂಸ್ಥೆಯ ಅಧ್ಯಕ್ಷ ಪ್ರಿಯಾಂಕ್ ಕನೂಂಗೊ ಹೇಳಿದರು

Trending News