ನವದೆಹಲಿ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನಲಸೋಪರಾ ಪ್ರದೇಶದಲ್ಲಿ ವಾಸಿಸುತ್ತಿದ್ದ 40 ವರ್ಷದ ವ್ಯಕ್ತಿಯೊಬ್ಬ ತನ್ನ ಮೂವರು ಮಕ್ಕಳನ್ನು ಶನಿವಾರ ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೂಲಗಳ ಪ್ರಕಾರ, ಕೈಲಾಶ್ ಪರ್ಮಾರ್ ಎಂಬ ವ್ಯಕ್ತಿ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದನು ಮತ್ತು ಅವನ ಹೆಂಡತಿ ಮತ್ತು ಕುಟುಂಬದೊಂದಿಗೆ ವಿವಾದಗಳನ್ನು ಹೊಂದಿದ್ದನು.ಕೈಲಾಶ್ ಪರ್ಮಾರ್ ತನ್ನ 10 ವರ್ಷದ ಮಗ, 8 ವರ್ಷದ ಮಗಳು ಮತ್ತು ಇನ್ನೊಬ್ಬ 5 ವರ್ಷದ ಮಗಳ ಗಂಟಲನ್ನು ಕತ್ತರಿಸಿದ್ದಾನೆ ಎನ್ನಲಾಗಿದೆ.
ತುಲಿನ್ಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ.