Coronavirus ವಿರುದ್ಧದ ಹೋರಾಟದಲ್ಲಿ PM Modi ಕೈಗೊಂಡ ನಿರ್ಣಯಕ್ಕೆ ಸೈ ಎಂದ ಶೇ.93.5ರಷ್ಟು ಭಾರತೀಯರು

ಈ ಕುರಿತು ನಡೆಸಲಾಗಿರುವ ಸರ್ವೆಯೊಂದರ ಪ್ರಕಾರ, ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕೊರೊನಾ ಮಹಾಮಾರಿಯಿಂದ ಉದ್ಭವಿಸಿರುವ ಸ್ಥಿತಿಯನ್ನು ಅತ್ಯಂತ ಪ್ರಭಾವಶಾಲಿಯಾಗಿ ನಿಯಂತ್ರಿಸಿದೆ ಎಂದು ಹೇಳಿದೆ

Last Updated : Apr 23, 2020, 09:53 PM IST
Coronavirus ವಿರುದ್ಧದ ಹೋರಾಟದಲ್ಲಿ PM Modi ಕೈಗೊಂಡ ನಿರ್ಣಯಕ್ಕೆ ಸೈ ಎಂದ ಶೇ.93.5ರಷ್ಟು ಭಾರತೀಯರು  title=

ನವದೆಹಲಿ: ಕೊರೊನಾ ವೈರಸ್ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಕಳೆದ ಒಂದು ತಿಂಗಳಿಂದ ಇಂಡೆಕ್ಸ್ ಆಫ್ ರೆಡಿನೆಸ್ಸ್ ನಿರಂತರ ಏರಿಕೆಯಾಗುತ್ತಲೇ ಇದ್ದು, ಆತ್ಮಸಂತುಷ್ಟಿಯ ಸೂಚ್ಯಂಕದಲ್ಲಿ ನಿರಂತರ ಇಲಿಕೆಯಾಗುತ್ತಲೇ ಇದೆ. ಮಹಾಮಾರಿಯನ್ನು ಹಿಮ್ಮೆಟ್ಟಿಸುವಲ್ಲಿ ಸರ್ಕಾರ ಕೈಗೊಂಡ ಪ್ರಯತ್ನಗಳಲ್ಲಿ ಜನರ ವಿಶ್ವಾಸ ಕೇವಲ ದೃಢವಾಗಿರದೇ ಅಪ್ರೂವಲ್ ರೇಟಿಂಗ್ ನಲ್ಲಿಯೂ ಕೂಡ ವೃದ್ಧಿಯಾಗುತ್ತಲೇ ಇದೆ. IANS/C-ವೋಟರ್ ನಡೆಸಿರುವ ಸಮೀಕ್ಷೆ ಗುರುವಾರ ಈ ಅಂಶಗಳನ್ನು ಬಹಿರಂಗಪಡಿಸಿದೆ.

ಮಾರ್ಚ್ 16 ರಿಂದ ಏಪ್ರಿಲ್ 20ರವರೆಗೆ ನಡೆಸಲಾಗಿರುವ ಈ ಸಮೀಕ್ಷೆಯಲ್ಲಿ ಇಂಡೆಕ್ಸ್ ಆಫ್ ರೆಡಿನೆಸ್ಸ್ ಮಾಧ್ಯಮದ ಮೂಲಕ ಮುಂದಿನ ಯೋಜನೆ ಕೈಗೊಳ್ಳುವ ಜನರ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗಿದೆ ಎನ್ನಲಾಗಿದೆ. ಜನರು ಇದೀಗ ರೇಶನ್, ಔಷಧಿಗಳು ಹಾಗೂ ಅವುಗಳ ಖರೀದಿಗೆ ಪ್ರತ್ಯೇಕವಾಗಿ ಹಣವನ್ನು ಮೀಸಲಿಡುತ್ತಿದ್ದಾರೆ. ಏಪ್ರಿಲ್ 20ರವರೆಗೆ ನಡೆಸಲಾಗಿರುವ ಈ ಸರ್ವೆಯಲ್ಲಿ ಶೇ.42.9 ರಷ್ಟು ಉತ್ತರ ನೀಡಿದವರು 3 ವಾರಕ್ಕೂ ಅಧಿಕ ಸಮಯದ ವರೆಗೆ ದಿನಸಿ ಸಾಮಗ್ರಿ ಹಾಗೂ ಔಷಧಿ ಶೇಖರಿರುವುದಾಗಿ ಹೇಳಿದ್ದಾರೆ. ಆದರೆ, ಎರಡೂ ವಾರಕ್ಕಿಂತ ಕಡಿಮೆ ಸಿದ್ಧತೆ ನಡೆಸಿರುವವರ ಸಂಖ್ಯೆ ಇನ್ನೂ ಶೇ.56.9 ರಷ್ಟಿದೆ.

ಆದರೆ, ಸುಮಾರು 4718 ಸ್ಯಾಂಪಲ್ ಗಾತ್ರ ಹೊಂದಿರುವ ಈ ಸಮೀಕ್ಷೆಯಲ್ಲಿ ಒಂದು ವಾರಕ್ಕಿಂತಲೂ ಕಡಿಮೆ ಸಿದ್ಧತೆಹೊಂದಿರುವವರ ಸಂಖ್ಯೆ ಕೇವಲ ಶೇ.12.1 ರಷ್ಟಿದೆ. ಮಾರ್ಚ್ 16ರ ವೇಳೆಗೆ ಮೂರು ವಾರಕ್ಕಿಂತ ಕಡಿಮೆ ಅವಧಿಗಾಗಿ ಅತ್ಯಾವಶ್ಯಕ ಸಾಮಾಗ್ರಿ ಸಂಗ್ರಹಿಸಿರುವವರ ಸಂಖ್ಯೆ ಶೇ.90ರಷ್ಟಿದ್ದರೆ, ಮೂರು ವಾರಗಳಿಗಿಂತ ಹೆಚ್ಚಿನ ಅವಧಿಗಾಗಿ ರೇಶನ್ ಬಹುತೇಕರ ಬಳಿ ಇರಲಿಲ್ಲ. ಆದರೆ, ಏಪ್ರಿಲ್ ತಿಂಗಳಿನಲ್ಲಿ ಲಾಕ್ ಡೌನ್ ಅವಧಿ ವಿಸ್ತರಣೆಯಾದ ಬಳಿಕ ಈ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.

ಇಂಡೆಕ್ಸ್ ಆಫ್ ಪ್ಯಾನಿಕ್ ಅಂದರೆ ಭಯದ ಸೂಚ್ಯಂಕದ ಕುರಿತು ಹೇಳುವುದಾದರೆ ಏಪ್ರಿಲ್ 20ರವರೆಗಿಂದ ಅಂಕಿ ಅಂಶಗಳ ಪ್ರಕಾರ ಶೇ.41.5ರಷ್ಟು ಉತ್ತರ ನೀಡಿದವರಿಗೆ ತಮ್ಮ ಮನೆಯಲ್ಲಿ ಯಾರಿಗಾದರೂ ಕೂಡ ಈ ಮಹಾಮಾರಿ ಅಂಟಿಕೊಳ್ಳಬಹುದು ಎಂಬ ಭಯ ಸತಾಯಿಸುತ್ತದೆ ಎಂದು ಹೇಳಿದ್ದಾರೆ. ಆದರೆ, ಶೇ.56.3 ರಷ್ಟು ಜನರು ತಮಗಾಗಲಿ ಅಥವಾ ತಮ್ಮ ಕುಟುಂಬದ ಯಾವುದೇ ಸದಸ್ಯರಿಗಾಗಲಿ ಈ ವೈರಸ್ ಪ್ರಭಾವಿತಗೊಳಿಸದು ಎಂದು ಹೇಳಿದ್ದಾರೆ. ಈ ಸರ್ವೇ ಆರಂಭದಲ್ಲಿ ಶೇ.35.1 ರಷ್ಟು ಜನರಿಗೆ ಈ ಸೋಂಕು ಯಾರಿಗಾದರೂ ಕೂಡ ಅಂಟಿಕೊಳ್ಳಬಹುದು ಎಂಬುದಾಗಿ ಅನಿಸಿರುವುದು ಇಲ್ಲಿ ಉಲ್ಲೇಖನೀಯ.

ಈ ಟ್ರ್ಯಾಕರ್ ನಲ್ಲಿ 'ಟ್ರಸ್ಟ್ ಇನ್ ಗವರ್ನಮೆಂಟ್ ಇಂಡೆಕ್ಸ್'ಗೆ ಎಲ್ಲಕ್ಕಿಂತ ನಿರಂತರ ಮತ್ತು ಹೆಚ್ಚು ರೀಡಿಂಗ್ ಗಳು ಬಂದಿವೆ. ದೇಶದ ಶೇ. 93.5 ರಷ್ಟು ಜನರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೊರೊನಾ ವೈರಸ್ ಮಹಾಮಾರಿಯ ಪ್ರಕೋಪವನ್ನು ಅತ್ಯಂತ ಪ್ರಭಾವಶಾಲಿಯಾಗಿ ನಿರ್ವಹಿಸಿದೆ ಮತ್ತು ಸೋಂಕನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಲಿದೆ ಎಂದಿದ್ದಾರೆ.

Trending News