7th Pay Commission: ನೀವೂ ಈ ಸರ್ಕಾರಿ ಯೋಜನೆಯ ಲಾಭ ಪಡೆದಿರುವಿರಾ? ಹಾಗಾದರೆ ಇಲ್ಲಿದೆ ನಿಮಗೊಂದು ಮಹತ್ವದ ಸೂಚನೆ

7th Pay Commission Latest News: ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಮನೆ ನಿರ್ಮಾಣಕ್ಕಾಗಿ HBA ಯೋಜನೆಯ ಅಡಿ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುತ್ತದೆ. ಆದರೆ, ಇದಕ್ಕಾಗಿ ಕೆಲವು ಷರತ್ತುಗಳಿವೆ. ಇವುಗಳನ್ನು ಅನುಸರಿಸದ ನೌಕರರ ಮೇಲೆ ಕಠಿಣ ಕ್ರಮ ಜರುಗಿಸಲಾಗುತ್ತದೆ.

Written by - Nitin Tabib | Last Updated : Aug 18, 2021, 04:05 PM IST
  • ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಮನೆ ನಿರ್ಮಾಣಕ್ಕಾಗಿ HBA ಯೋಜನೆಯ ಅಡಿ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುತ್ತದೆ.
  • ಆದರೆ, ಇದಕ್ಕಾಗಿ ಕೆಲವು ಷರತ್ತುಗಳನ್ನು ವಿಧಿಸಿದೆ.
  • ಇವುಗಳನ್ನು ಅನುಸರಿಸದ ನೌಕರರ ಮೇಲೆ ಕಠಿಣ ಕ್ರಮ ಜರುಗಿಸಲಾಗುತ್ತದೆ.
7th Pay Commission: ನೀವೂ ಈ ಸರ್ಕಾರಿ ಯೋಜನೆಯ ಲಾಭ ಪಡೆದಿರುವಿರಾ? ಹಾಗಾದರೆ ಇಲ್ಲಿದೆ ನಿಮಗೊಂದು ಮಹತ್ವದ ಸೂಚನೆ title=
7th Pay Commission Latest News (File Photo)

7th Pay Commission Latest News: ಕೇಂದ್ರ ಸರ್ಕಾರ ತನ್ನ ನೌಕರರಿಗೆ ಹಲವು ರೀತಿಯ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಸೌಲಭ್ಯ ಗಳಲ್ಲಿ ಹೌಸ್ ಬಿಲ್ಡಿಂಗ್ ಅಡ್ವಾನ್ಸ್ ಕೂಡ ಒಂದು. ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರಿ ನೌಕರರಿಗೆ ಮುಂಗಡ ಆರ್ಥಿಕ  ಸಹಾಯ ಒದಗಿಸಲಾಗುತ್ತಿದೆ. ಒಂದು ವೇಳೆ ನೀವೂ ಕೂಡ ಕೇಂದ್ರ ಸರ್ಕಾರಿ ನೌಕರರಾಗಿದ್ದು, ಸರ್ಕಾರದ ಈ ಯೋಜನೆಯ ಲಾಭ ಪಡೆದುಕೊಂಡಿದ್ದು, ಸರ್ಕಾರಿ ನಿಯಮಗಳಿಗೆ ಅನುಗುಣವಾಗಿ ಅದನ್ನು ನೀವು ಬಳಕೆ ಮಾಡಿಲ್ಲ ಎಂದಾದರೆ, ನಿಮ್ಮ ಸಂಕಷ್ಟ ಹೆಚ್ಚಾಗುವ ಸಾಧ್ಯತೆ ಇದೆ.

ನಿಯಮ ಮುರಿಯುವವರ ಮೇಲೆ ಕಠಿಣ ಕ್ರಮ ಜರುಗಿಸಲು ಸಿದ್ಧತೆ
ಮನೆ ಅಥವಾ ಫ್ಲಾಟ್ ನಿರ್ಮಿಸಲು ಅಥವಾ ಖರೀದಿಸಲು ಎಚ್‌ಬಿಎ ಯೋಜನೆಯಡಿ ಮುಂಗಡ ಹಣ ಪಡೆದ ಉದ್ಯೋಗಿಗಳು ಮನೆ House Building Advance Rules (HBA)- 2017 ನಿಯಮದ  7b ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಸಂಭವಿಸುತ್ತವೆ. ನಿಯಮಗಳನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಂಚೆ ಇಲಾಖೆಯಲ್ಲಿ ಎಡಿಜಿ (ಎಸ್ಟೇಟ್) ಡಿಕೆ ತ್ರಿಪಾಠಿಹೇಳಿದ್ದಾರೆ.  ಎಚ್‌ಬಿಎ ತೆಗೆದುಕೊಳ್ಳುವ ಉದ್ಯೋಗಿಗಳು ಈ ನಿಯಮವನ್ನು ಅನುಸರಿಸುತ್ತಿಲ್ಲ. ಏಕೆಂದರೆ ಅವರು ಹಾಗೆ ಮಾಡದೆ, ಆರಾಮವಾಗಿ ಬಚಾವಾಗಲಿದ್ದಾರೆ  ಎಂದು ಅವರು ಭಾವಿಸುತ್ತಾರೆ. ಆದರೆ ನಾವು ಎಲ್ಲ ವಲಯಗಳಿಗೆ ಈ ಕುರಿತು ನೋಟಿಸ್ ಕಳುಹಿಸಿದ್ದೇವೆ ಮತ್ತು ಆದೇಶವನ್ನು ತಕ್ಷಣಕ್ಕೆ ಜಾರಿಗೆ ತರಲು ಸೂಚಿಸಿದ್ದೇವೆ ಎಂದಿದ್ದಾರೆ. 

ಏನಿದು Rule 7b?
ಈ ನಿಯಮದ ಪ್ರಕಾರ, ಗೃಹ ನಿರ್ಮಾಣಕ್ಕಾಗಿ  ಮುಂಗಡ ತೆಗೆದುಕೊಳ್ಳುವ ಉದ್ಯೋಗಿಗಳು ತಮ್ಮ ಮನೆಯನ್ನು ವಿಮೆ ಮಾಡಿಸಿಕೊಳ್ಳಬೇಕು ಮತ್ತು ಅದರ ವೆಚ್ಚವನ್ನು ಅವರೇ ಭರಿಸಬೇಕು. ವಿಮಾ ಮೊತ್ತವು ಎಚ್‌ಬಿಎ ಮೊತ್ತಕ್ಕೆ ಸಮನಾಗಿರಬೇಕು ಎಂಬ ಷರತ್ತೂ ಇದೆ. ಈ ಕುರಿತು ಹೇಳಿರುವ ಡಿಕೆ ತ್ರಿಪಾಠಿ 'ನಿಯಮ ಪುಸ್ತಕದ ಪ್ರಕಾರ, ಮನೆಯ ವಿಮೆಯನ್ನು ವಿಮಾ ನಿಯಂತ್ರಕ IRDAI ನಿಂದ ಗುರುತಿಸಲ್ಪಟ್ಟ ವಿಮಾ ಕಂಪನಿಗಳಿಂದ ತೆಗೆದುಕೊಳ್ಳಬೇಕು ಮತ್ತು ಪಾಲಿಸಿಯ ಪ್ರತಿಯನ್ನು ತಮ್ಮ ಇಲಾಖೆಗೆ ಸಲ್ಲಿಸಬೇಕು' ಎಂದಿದ್ದಾರೆ.

ಮನೆಯ ವಿಮೆಯಲ್ಲಿ ಯಾವ ಯಾವ ರಕ್ಷಣೆ ಸಿಗುತ್ತದೆ?
HBA ಅಡಿಯಲ್ಲಿ ಪಡೆದ  ವಿಮಾ ಪಾಲಿಸಿ ಅನೇಕ ಅಪಘಾತಗಳನ್ನು ಒಳಗೊಂಡಿದೆ. ಉದಾಹರಣೆಗೆ ಅಗ್ನಿ ಅವಘಡ, ನೆರೆ ಹಾವಳಿ ಹಾಗೂ ವಿದ್ಯುತ್ ಅವಘಡಗಳಿಂದಾಗುವ ಹಾನಿಗಳು ಇರರಲ್ಲಿ ಶಾಮೀಲಾಗಿವೆ. ಉದ್ಯೋಗಿ ಮುಂಗಡ ಪಾವತಿಸುವವರೆಗೂ ಈ ಪಾಲಿಸಿಯು ಜಾರಿಯಲ್ಲಿರುತ್ತದೆ. 'ಪ್ರತಿ ವರ್ಷ ಜುಲೈ ತಿಂಗಳಲ್ಲಿ ಉದ್ಯೋಗಿಗಳಿಂದ ಪಾಲಿಸಿ ಪ್ರಮಾಣಪತ್ರದ ಪ್ರತಿಯನ್ನು ಪಡೆಯುವಂತೆ  HoDಗಳಿಗೆ ಸೂಚಿಸಲಾಗಿದೆ, ಎಲ್ಲಾ  ವಲಯಗಳು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು' ಎಂದು ಡಿಕೆ ತ್ರಿಪಾಠಿ ಹೇಳಿದ್ದಾರೆ.

ಇದನ್ನೂ ಓದಿ-Ration card : ಪಡಿತರ ಚೀಟಿದಾರರಿಗೆ 4 ತಿಂಗಳ ಉಚಿತ ಪಡಿತರದ ಜೊತೆಗೆ ಈ ಪ್ರಯೋಜನ : ಶೀಘ್ರದಲ್ಲೇ ಈ ಕೆಲಸ ಮಾಡಿ

ಏನಿದು HBA?
ಕೇಂದ್ರ ಸರ್ಕಾರ ತನ್ನ ನೌಕರರಿಗೆ House Building Advance ನೀಡುತ್ತದೆ. ಇದರಲ್ಲಿ ನೌಕರರು ತಮ್ಮ ಹೆಸರ ಮೇಲೆ ಅಥವಾ ತಮ್ಮ ಪತ್ನಿಯ ಹೆಸರಿನಲ್ಲಿರುವ ಪ್ಲಾಟ್ ನಲ್ಲಿ ಸ್ವಂತ ಮನೆ ನಿರ್ಮಿಸಿಕೊಳ್ಳಬಹುದು. ಈ ಯೋಜನೆ ಅಕ್ಟೋಬರ್ 1, 2020 ರಂದು ಆರಂಭಗೊಂಡಿತ್ತು ಹಾಗೂ ಇದರ ಅಡಿ ಮಾರ್ಚ್ 31, 2022ರವರೆಗೆ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶೇ.7.9ರ ಬಡ್ಡಿ ದರದಲ್ಲಿ ಹೌಸ್ ಬಿಲ್ಡಿಂಗ್ ಅಡ್ವಾನ್ಸ್ ನೀಡುತ್ತದೆ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಹಾಗೂ HBA ನಿಯಮಗಳ ಅನುಸಾರ ಕೇಂದ್ರ ಸರ್ಕಾರಿ ನೌಕರರು ಹೊಸ ಮನೆಯ ನಿರ್ಮಾಣ ಅಥವಾ ಹೊಸ ಮನೆ ಅಥವಾ ಫ್ಲಾಟ್ ಖರೀದಿಗಾಗಿ 34 ತಿಂಗಳ ಬೇಸಿಕ್ ಸ್ಯಾಲರಿ ಅಥವಾ ಅತ್ಯಧಿಕ 25 ಲಕ್ಷ ರೂರೂ. ಅಥವಾ ಮನೆಯ ಬೆಲೆ ಅಥವಾ  ಅಡ್ವಾನ್ಸ್ ಮರು ಪಾವತಿಯ ಕ್ಷಮತೆಗೆ ಅನುಗುಣವಾಗಿ ಯಾವುದು ಕಡಿಮೆಯಾಗುತ್ತದೆಯೋ ಅಷ್ಟು ಮೊತ್ತವನ್ನು ಅಡ್ವಾನ್ಸ್ ಪಡೆಯಬಹುದು. ಈ ಅಡ್ವಾನ್ಸ್ ಮೇಲೆ ಶೇ.7.9 ರಷ್ಟು ಬಡ್ಡಿ ಪಾವತಿಸಬೇಕು. ಸತತ 5 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ತಾತ್ಕಾಲಿಕ ಉದ್ಯೋಗಿಗಳಿಗೂ ಕೂಡ ಈ ಸೌಲಭ್ಯದ ಲಾಭ ಸಿಗುತ್ತದೆ.

ಇದನ್ನೂ ಓದಿ-SC On Women In NDA : ಮಹಿಳೆಯರೂ ಕೂಡ NDA ಪರೀಕ್ಷೆ ಬರೆಯಬಹುದು, ಸೇನೆಯ ನಿಯಮ ತಾರತಮ್ಯದಿಂದ ಕೂಡಿದೆ ಎಂದ ಸುಪ್ರೀಂ

ಈ ಅಡ್ವಾನ್ಸ್ ಪಡೆದು ಬ್ಯಾಂಕ್ ಹೋಮ್ ಲೋನ್ ಮರುಪಾವತಿಸಬಹುದು
ಹೊಸ ಮನೆ ಅಥವಾ ಫ್ಲಾಟ್ ಖರೀದಿಗಾಗಿ ಒಂದು ವೇಳೆ ನೌಕರರು ಬ್ಯಾಂಕ್ ಗೃಹ ಸಾಲ ಪಡೆದಿದ್ದರೆ. HBA ಪಡೆದು ನೌಕರರು ಅದನ್ನು ಮರುಪಾವತಿಸಬಹುದು. ಖಾಯಂ ನೌಕರರ ಜೊತೆಗೆ ಖಾಯಂ ಇಲ್ಲದೆ ಇರುವ ನೌಕರರು ಕೂಡ ಈ ಮುಂಗಡ ಹಣವನ್ನು ಪಡೆದುಕೊಳ್ಳಬಹುದು. ಆದರೆ, ಇದಕ್ಕಾಗಿ ಒಂದು ನಿಯಮವನ್ನು ಮಾಡಲಾಗಿದೆ. ಖಾಯಂ ಇಲ್ಲದೆ ಇರುವ ನೌಕರರು ಸತತವಾಗಿ ಐದು ವರ್ಷಗಳ ಕಾಲ ಸರ್ಕಾರಿ ನೌಕರಿ ಮಾಡಿರಬೇಕು. ನೌಕರರು ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದ ದಿನದಿಂದಲೆ ಮನೆ ನಿರ್ಮಾಣಕ್ಕಾಗಿ  ಮುಂಗಡವನ್ನು ಪಡೆಯಬಹುದು. ಅಂದರೆ, ನೀವು ಮೊದಲೇ ಮನೆ ಕಟ್ಟಲು ಮುಂಗಡವಾಗಿ ಅರ್ಜಿ ಸಲ್ಲಿಸಿದ್ದರೂ, ನಿಮಗೆ ಸಾಲ ನೀಡಿದ ದಿನದಿಂದ ಈ ಮೊತ್ತ ಲಭ್ಯವಿರುತ್ತದೆ. ಬ್ಯಾಂಕ್-ಮರುಪಾವತಿಗೆ ಮುಂಗಡವನ್ನು ಒಟ್ಟು ಮೊತ್ತದಲ್ಲಿ ನೀಡಲಾಗುತ್ತದೆ. ಆದರೆ, ಉದ್ಯೋಗಿಗಳು ಮುಂಗಡ ನೀಡಿದ ದಿನಾಂಕದಿಂದ ಒಂದು ತಿಂಗಳೊಳಗೆ HBA Utilization Certificate ಸಲ್ಲಿಸಬೇಕು.

ಇದನ್ನೂ ಓದಿ -Indian Cities In Danger: ಮುಂದಿನ 30 ವರ್ಷಗಳಲ್ಲಿ 3 ಅಡಿ ಸಮುದ್ರದ ನೀರಿನಲ್ಲಿ ಮುಳುಗಲಿವೆ ಭಾರತದ ಈ ನಗರಗಳು: NASA ವರದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News