Independence Day 2022: ಇದೇ ಮೊದಲ ಬಾರಿಗೆ ಸ್ವದೇಶಿ ಫಿರಂಗಿಯೊಂದಿಗೆ ಗೌರವ : ಕೆಂಪು ಕೋಟೆಯಲ್ಲಿ ಅನಾವರಣಗೊಂಡಿತು 'ದೇಸಿ ಧಮ್ '

Independence Day 2022: ಆತ್ಮ ನಿರ್ಭರ ಭಾರತ ಪ್ರತಿಯೊಬ್ಬ ನಾಗರಿಕನ, ಪ್ರತಿ ಸರ್ಕಾರದ, ಸಮಾಜದ ಪ್ರತಿಯೊಂದು ಘಟಕದ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದು ಸರ್ಕಾರದ ಅಜೆಂಡಾ ಅಥವಾ ಸರ್ಕಾರಿ ಕಾರ್ಯಕ್ರಮವಲ್ಲ. ಇದು ಸಮಾಜದ ಸಾಮೂಹಿಕ ಆಂದೋಲನವಾಗಿದ್ದು, ಇದನ್ನು ಮುಂದುವರೆಸಿಕೊಂಡು ಹೋಗಬೇಕಾಗಿ ಕರೆ ನೀಡಿದ್ದಾರೆ.   

Written by - Ranjitha R K | Last Updated : Aug 15, 2022, 11:24 AM IST
  • ಭಾರತ ಸ್ವಾತಂತ್ರ್ಯ ಅಮೃತಮಹೋತ್ಸವ ಹಲವು ರೀತಿಯಲ್ಲಿ ವಿಶೇಷ
  • ಮೊದಲ ಬಾರಿಗೆ ಸ್ವದೇಶಿ ಫಿರಂಗಿಯೊಂದಿಗೆ ಗೌರವ ವಂದನೆ
  • ಆತ್ಮ ನಿರ್ಭರ ಭಾರತ ಸರ್ಕಾರದ ಕಾರ್ಯಕ್ರಮವಲ್ಲ -ಪ್ರಧಾನಿ
Independence Day 2022: ಇದೇ ಮೊದಲ ಬಾರಿಗೆ ಸ್ವದೇಶಿ ಫಿರಂಗಿಯೊಂದಿಗೆ  ಗೌರವ : ಕೆಂಪು ಕೋಟೆಯಲ್ಲಿ ಅನಾವರಣಗೊಂಡಿತು 'ದೇಸಿ ಧಮ್ ' title=
Independenceday 2022

Independence Day 2022: ಭಾರತ ಸ್ವಾತಂತ್ರ್ಯ ಅಮೃತಮಹೋತ್ಸವ ಹಲವು ರೀತಿಯಲ್ಲಿ ವಿಶೇಷವಾಗಿತ್ತು. ಇದೇ ಮೊದಲ ಬಾರಿಗೆ ಕೆಂಪು ಕೋಟೆಯಲ್ಲಿ ಸ್ವದೇಶಿ ಫಿರಂಗಿಯೊಂದಿಗೆ ಗೌರವ ವಂದನೆ ಸಲ್ಲಿಸಲಾಯಿತು. ಧ್ವಜಾರೋಹಣ ನೆರವೇರಿಸಿ, ಕೆಂಪು ಕೋಟೆಯಲ್ಲಿಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು,  ಆತ್ಮ ನಿರ್ಭರ ಭಾರತ ಎನ್ನುವುದು ಸರ್ಕಾರದ ಕಾರ್ಯಕ್ರಮವಲ್ಲ, ಬದಲಾಗಿ ಸಮಾಜದ ಸಾಮೂಹಿಕ ಆಂದೋಲನವಾಗಿದೆ, ಇದನ್ನು ಎಲ್ಲರೂ ಒಟ್ಟಾಗಿ ಮುನ್ನಡೆಸಬೇಕು ಎಂದು ಹೇಳಿದರು. . 

ಆತ್ಮ ನಿರ್ಭರ ಭಾರತವು ಪ್ರತಿಯೊಬ್ಬ ನಾಗರಿಕನ, ಪ್ರತಿ ಸರ್ಕಾರದ, ಸಮಾಜದ ಪ್ರತಿಯೊಂದು ಘಟಕದ ಜವಾಬ್ದಾರಿಯಾಗಿದೆ. ಆತ್ಮ ನಿರ್ಭರ ಭಾರತ ಎನ್ನುವುದು ಸರ್ಕಾರದ ಅಜೆಂಡಾ ಅಥವಾ ಸರ್ಕಾರಿ ಕಾರ್ಯಕ್ರಮವಲ್ಲ. ಇದು ಸಮಾಜದ ಸಾಮೂಹಿಕ ಆಂದೋಲನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.  ಮುಂದಿನ 25 ವರ್ಷಗಳ ಪ್ರಯಾಣ ದೇಶಕ್ಕೆ ಬಹಳ ಮುಖ್ಯ ಎಂದು ಬಣ್ಣಿಸಿದ್ದಾರೆ.  

ಇದನ್ನೂ ಓದಿ : ಮುಂಬರುವ 25 ವರ್ಷಗಳಲ್ಲಿ ಭಾರತದ ಚಿತ್ರಣ ಹೀಗಿರಲಿದೆ”… ಕೆಂಪುಕೋಟೆಯಲ್ಲಿ ಪ್ರಧಾನಿ ಮಾತು

ಅಮೃತ ಮಹೋತ್ಸವದ ಶುಭಾಶಯಗಳು :
ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು  ವಿಶ್ವಾದ್ಯಂತ  ನೆಲೆಸಿರುವ ಪ್ರತಿಯೊಬ್ಬ ಭಾರತೀಯರನ್ನು ಮೋದಿ ಅಭಿನಂದಿಸಿದರು. ಸ್ವಾತಂತ್ರ್ಯ ಬಂದು 100 ವರ್ಷಗಳು ತುಂಬುವ  ಹೊತ್ತಿಗೆ ಅಂದರೆ 2047ರವರೆಗೆ ಸ್ವಾತಂತ್ರ್ಯ ಪ್ರೇಮಿಗಳ ಎಲ್ಲಾ ಕನಸುಗಳನ್ನು ನನಸು ಮಾಡುವ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು ಎಂದು ಜನತೆಗೆ ಕರೆ ನೀಡಿದ್ದಾರೆ. 

ಪಂಚ ನಿರ್ಣಯಗಳೊಂದಿಗೆ ಮುನ್ನಡೆಯಲು ಕರೆ : 
ಅಭಿವೃದ್ಧಿ ಹೊಂದಿದ ಭಾರತ, ಗುಲಾಮಗಿರಿಯ ಪ್ರತಿಯೊಂದು ಆಲೋಚನೆಯಿಂದ ಮುಕ್ತಿ ಹೊಂದುವುದು, ನಮ್ಮ ಪರಂಪರೆಯ ಮೇಲೆ ಹೆಮ್ಮೆ ಪಡುವುದು , ಏಕತೆ ಮತ್ತು ಒಗ್ಗಟ್ಟು ನಾಗರಿಕರ ಕರ್ತವ್ಯ ಪಾಲಿಸುವಂತೆ ಎಂದು ಕರೆ ನೀಡಿದ್ದಾರೆ. 

ಇದನ್ನೂ ಓದಿ : Independence Day 2022: ‘ಹೊಸ ಸಂಕಲ್ಪದೊಂದಿಗೆ ಹೊಸ ದಿಕ್ಕಿನತ್ತ ಹೆಜ್ಜೆ ಹಾಕುವ ಸಮಯ ಬಂದಿದೆ’

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News