ಮನೆಯಲ್ಲಿ 4 ರಸ್ತೆಯಲ್ಲಿ ಒಂದು ಮೃತದೇಹ.. ಸಾವಿನ ಸುದ್ದಿ ತಿಳಿಸಲು ಮನೆಗೆ ಹೋದವರಿಗೆ ಕಾದಿತ್ತು ಶಾಕ್!

Suspicious death: ಹರಿಯಾಣದ ಹಿಸಾರ್‌ನಲ್ಲಿ ಒಂದೇ ಕುಟುಂಬದ 5 ಜನರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಈ ವೇಳೆ ನಾಲ್ಕು ಕೊಲೆ ಮಾಡಿ ಐದನೇ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Edited by - Zee Kannada News Desk | Last Updated : Dec 20, 2021, 05:49 PM IST
  • ಹರಿಯಾಣದ ಹಿಸಾರ್‌ನಲ್ಲಿ ಒಂದೇ ಕುಟುಂಬದ 5 ಮಂದಿ ಸಾವು
  • ನಾಲ್ಕು ಕೊಲೆ ಮಾಡಿ ಐದನೇ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ
  • ಮನೆಯಲ್ಲಿ ನಾಲ್ಕು ಮತ್ತು ರಸ್ತೆಯಲ್ಲಿ ಒಬ್ಬರ ಮೃತದೇಹ ಪತ್ತೆ
ಮನೆಯಲ್ಲಿ 4 ರಸ್ತೆಯಲ್ಲಿ ಒಂದು ಮೃತದೇಹ.. ಸಾವಿನ ಸುದ್ದಿ ತಿಳಿಸಲು ಮನೆಗೆ ಹೋದವರಿಗೆ ಕಾದಿತ್ತು ಶಾಕ್!  title=
5 ಮಂದಿ ಸಾವು

ಹಿಸಾರ್: ಹರಿಯಾಣದ ಹಿಸಾರ್ ಜಿಲ್ಲೆಯ ನಂಗ್ತಾಲಾ ಗ್ರಾಮದಲ್ಲಿ 5 ಮಂದಿ ಅನುಮಾನಾಸ್ಪದ ಸ್ಥಿತಿಯಲ್ಲಿ (Suspicious death) ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.    

ರಸ್ತೆ ಮೇಲಿತ್ತು ಮನೆಯ ಮುಖ್ಯಸ್ಥನ ಶವ:

ನಂಗ್ತಾಲಾ ಗ್ರಾಮದ ರಮೇಶ್ ಕುಮಾರ್ ಎಂಬುವವರ ಮೃತದೇಹ ರಸ್ತೆಯಲ್ಲಿ ಬಿದ್ದಿರುವುದನ್ನು ಕಂಡು ಗ್ರಾಮದ ಜನರು ಬೆಚ್ಚಿಬಿದ್ದಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಆತನ ಮನೆಗೆ ತಲುಪಿದಾಗ ಇಡೀ ಕುಟುಂಬದವರ ಮೃತದೇಹಗಳು ಕಂಡಿವೆ.

ನಡೆದಿದ್ದು ಕೊಲೆಯೋ!  ಆತ್ಮಹತ್ಯೆಯೋ?:

ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ್ರೋಹ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇದು ಕೊಲೆಯ ನಂತರ ಆತ್ಮಹತ್ಯೆ ಪ್ರಕರಣವೇ ಅಥವಾ ಯಾರಾದರೂ ಮನೆಯ ಎಲ್ಲ ಸದಸ್ಯರನ್ನೂ ಕೊಲೆ ಮಾಡಿದ್ದಾರೆಯೀ ಎಂದು ಕಂಡುಹಿಡಿಯಲು ಪೋಲಿಸ್ಸ್ರು ತನಿಖೆ ನಡೆಸಿದ್ದಾರೆ.

ಗ್ರಾಮದ ನಿವಾಸಿ ರಮೇಶ್ ಕುಮಾರ್ ಆಗ್ರೋಹದಲ್ಲಿ ಮದುವೆ ಕಾರ್ಡ್ ಮಾಡುತ್ತಿದ್ದರು.  ರಮೇಶ್ ಕುಮಾರ್ (35), ಪತ್ನಿ ಸುನೀತಾ, ಅವರ 15 ಮತ್ತು 13 ವರ್ಷದ ಇಬ್ಬರು ಪುತ್ರಿಯರು ಮತ್ತು 10 ವರ್ಷದ ಮಗ ಮೃತಪಟ್ಟಿದ್ದಾರೆ.

ಇಡೀ ಕುಟುಂಬವನ್ನು ಕೊಂದು ಅತ್ಮಹತ್ಯೆ ಮಾಡಿಕೊಂಡ ಯಜಮಾನ?:

ರಮೇಶ ಅವರ ಶವ ಮನೆಯ ಹೊರಗೆ ರಸ್ತೆಯಲ್ಲಿ ಪತ್ತೆಯಾಗಿದ್ದು, ಮನೆಯಲ್ಲಿ ಇಡೀ ಕುಟುಂಬದವರ ಶವ ಪತ್ತೆಯಾಗಿವೆ. ರಮೇಶ್ ಮೊದಲು ಇಡೀ ಕುಟುಂಬವನ್ನು ಕೊಂದಿದ್ದು, ನಂತರ ಅವರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಊಹಿಸಲಾಗುತ್ತಿದೆ. ಆದರೆ, ಪೊಲೀಸರ ತನಿಖೆಯ ನಂತರವೇ ಈ ಬಗ್ಗೆ ಸಂಪೂರ್ಣ ಸತ್ಯಾಂಶ ಹೊರಬೀಳಲಿದೆ. ಈ ವಿಷಯವನ್ನು ಶೀಘ್ರದಲ್ಲೇ ಬಹಿರಂಗಪಡಿಸುವ ಬಗ್ಗೆ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Horrible Video: ಹಾವಿನಿಂದ ಸ್ಕಿಪ್ಪಿಂಗ್​ ಆಡಿದ ಯುವಕ.. ಸ್ವಲ್ಪ ಯಾಮಾರಿದ್ರೂ ಇತ್ತು ಪ್ರಾಣಕ್ಕೆ ಕಂಟಕ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News