ಜಿಎಸ್‏ಟಿ ಹಗುರ: 33 ಉತ್ಪನ್ನಗಳ ಮೇಲೆ ಜಿಎಸ್‏ಟಿ ದರ ಇಳಿಕೆ

ಶನಿವಾರ ದೆಹಲಿಯ ವಿಜ್ಞಾನ್ ಭವನದಲ್ಲಿ ನಡೆದ ಜಿಎಸ್‏ಟಿ ಕೌನ್ಸಿಲ್ ಸಭೆಯಲ್ಲಿ ಜನಸಾಮಾನ್ಯರಿಗೆ ದೊಡ್ಡ ಉಡುಗೊರೆ ನೀಡಲಾಗಿದೆ. 

Last Updated : Dec 22, 2018, 04:08 PM IST
ಜಿಎಸ್‏ಟಿ ಹಗುರ: 33 ಉತ್ಪನ್ನಗಳ ಮೇಲೆ ಜಿಎಸ್‏ಟಿ ದರ ಇಳಿಕೆ title=
Pic: ANI

ನವದೆಹಲಿ: ಶನಿವಾರ ದೆಹಲಿಯ ವಿಜ್ಞಾನ್ ಭವನದಲ್ಲಿ ನಡೆದ ಜಿಎಸ್‏ಟಿ ಕೌನ್ಸಿಲ್ ಸಭೆಯಲ್ಲಿ ಜನಸಾಮಾನ್ಯರಿಗೆ ದೊಡ್ಡ ಉಡುಗೊರೆ ನೀಡಲಾಗಿದೆ. ಸಭೆಯ ಬಳಿಕ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಮಾತನಾಡುತ್ತಾ, ಪ್ರತಿದಿನ ಜನಸಾಮಾನ್ಯರು ಬಳಸುವ 33 ವಸ್ತುಗಳ ಮೇಲಿನ ಜಿಎಸ್‏ಟಿ ದರವನ್ನು ಶೇ. 18 ರಿಂದ ಶೇ. 12ಕ್ಕೆ ಇಳಿಸಲಾಗಿದೆ ಎಂದು ತಿಳಿಸಿದರು.

ಐಶಾರಾಮಿ ವಸ್ತುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಉತ್ಪನ್ನಗಳ ಮೇಲಿನ ಜಿಎಸ್‏ಟಿ ದರವನ್ನು  18% ಅಥವಾ ಅದಕ್ಕಿಂತ ಕಡಿಮೆ ಮಾಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಇದಕ್ಕೆ ಸರ್ಕಾರದ ಸಹಮತವೂ ಇದೇ. ಹಾಗಾಗಿ 34 ಉತ್ಪನ್ನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಉತ್ಪನ್ನಗಳ ಮೇಲಿನ ಜಿಎಸ್‏ಟಿ ದರವನ್ನು 18 ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ಇರಿಸಲಾಗಿದೆ ಎಂದು ನಾರಾಯಣಸ್ವಾಮಿ ಹೇಳಿದರು. 

ಈ ತನಕ 39 ವಸ್ತುಗಳ ಮೇಲೆ ಶೇ. 28ರಷ್ಟು ತೆರಿಗೆ ವಿಧಿಸಲಾಗಿದೆ. ಈಗ ಆ ಸಂಖ್ಯೆ 34 ಕ್ಕೆ ಇಳಿದಿದೆ. ಅಂದರೆ ಐದು ಉತ್ಪನ್ನಗಳ ಮೇಲಿನ ಜಿಎಸ್‏ಟಿ ದರವನ್ನು ಶೇ. 28ಕ್ಕಿಂತ ಕಡಿಮೆ ಮಾಡಲಾಗಿದೆ. ಇತ್ತೀಚೆಗಷ್ಟೇ ಹಲವು ವಸ್ತುಗಳ ಮೇಲಿನ ಜಿಎಸ್‌ಟಿ ಅನ್ನು ಶೇ.28 ರಿಂದ ಶೇ.18ಕ್ಕೆ ಇಳಿಸುವ ಸಾಧ್ಯತೆ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸಹ 1,200ಕ್ಕೂ ಹೆಚ್ಚಿನ ವಸ್ತುಗಳು ಮತ್ತು ಶೇ.99ರಷ್ಟು ಸೇವೆಗಳ ಮೇಲೆ ಶೇ.18ಕ್ಕಿಂತಲೂ ಕಡಿಮೆ ಜಿಎಸ್‌ಟಿ ಹೇರಲು ಉದ್ದೇಶಿಸಲಾಗಿದೆ ಎಂದು ಹೇಳಿಲಾಗಿತ್ತು.

 

Trending News