ಫತೇಪುರದಲ್ಲಿ ಭೀಕರ ರಸ್ತೆ ಅಪಘಾತ: ಮೂವರ ದುರ್ಮರಣ, ಹಲವರಿಗೆ ಗಾಯ

ಈ ಅಪಘಾತದಲ್ಲಿ ಸಾವನ್ನಪ್ಪಿದವರನ್ನು ಮುಮ್ತಾಜ್, ನಿಸ್ಸರ್ ಮತ್ತು ಸಾಜಿದ್ ಎಂದು ಗುರುತಿಸಲಾಗಿದೆ. ಚಾಲಕ ಗೋಲ್ಡ್ಲಾಲ್ ಸೇರಿದಂತೆ ಇತರರು ಗಾಯಗೊಂಡಿದ್ದಾರೆ.

Last Updated : May 30, 2019, 03:21 PM IST
ಫತೇಪುರದಲ್ಲಿ ಭೀಕರ ರಸ್ತೆ ಅಪಘಾತ: ಮೂವರ ದುರ್ಮರಣ, ಹಲವರಿಗೆ ಗಾಯ title=

ಫತೇಪುರ್: ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ಖಘಾದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಮೂರು ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. 

ಕಾಗ್ಪುರದಿಂದ ಪ್ರಯಾಗರಾಗ್ ಗೆ ಸಾಗುತ್ತಿದ್ದ ವಾಹನವು ಖಘಾ ಕೋಟ್ವಾಲಿಯ ಬಳಿ ಡಿಸಿಎಂ ಟೈರ್ ಬ್ಲಾಸ್ಟ್ ಆದ ಕಾರಣ ಅಪಘಾತಕ್ಕಿಡಾಗಿದೆ ಎಂದು ಉಸ್ತುವಾರಿ ಗಂಗಾ ಪ್ರಸಾದ್ ಯಾದವ್ ತಿಳಿಸಿದರು. 

ಈ ಅಪಘಾತದಲ್ಲಿ ಸಾವನ್ನಪ್ಪಿದವರನ್ನು ಮುಮ್ತಾಜ್, ನಿಸ್ಸರ್ ಮತ್ತು ಸಾಜಿದ್ ಎಂದು ಗುರುತಿಸಲಾಗಿದೆ. ಚಾಲಕ ಗೋಲ್ಡ್ಲಾಲ್ ಸೇರಿದಂತೆ ಇತರರು ಗಾಯಗೊಂಡಿದ್ದಾರೆ. 

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಗಾಯಗೊಂಡಿದ್ದವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮೂವರು ತೀವ್ರವಾಗಿ ಗಾಯಗೊಂಡಿದ್ದರಿಂದ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.

Trending News