ತಮಿಳುನಾಡಿನಲ್ಲಿ 5 ಅಪ್ರಾಪ್ತ ದಲಿತ ಬಾಲಕರಿಗೆ ಮಲ ಹೊರಲು ಒತ್ತಾಯ, ಮೂವರ ಬಂಧನ

ಐದು ಅಪ್ರಾಪ್ತ ದಲಿತ ಹುಡುಗರನ್ನು ಮಲ ಹೊರಲು ಒತ್ತಾಯಿಸಿದ ಆರೋಪದ ಮೇಲೆ ಮೂವರು ಮೇಲ್ಜಾತಿಯ ಯುವಕರನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಪೆರಂಬಲೂರು ಜಿಲ್ಲೆಯ ಸಿರುಕುಡಾಲ್ ಗ್ರಾಮದ ಬಳಿ ಶುಕ್ರವಾರ ಈ ಘಟನೆ ನಡೆದಿದೆ.

Last Updated : Dec 12, 2020, 05:25 PM IST
ತಮಿಳುನಾಡಿನಲ್ಲಿ 5 ಅಪ್ರಾಪ್ತ ದಲಿತ ಬಾಲಕರಿಗೆ ಮಲ ಹೊರಲು ಒತ್ತಾಯ, ಮೂವರ ಬಂಧನ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಐದು ಅಪ್ರಾಪ್ತ ದಲಿತ ಬಾಲಕರಿಗೆ ಮಲ ಹೊರಲು ಒತ್ತಾಯಿಸಿದ ಆರೋಪದ ಮೇಲೆ ಮೂವರು ಮೇಲ್ಜಾತಿಯ ಯುವಕರನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಪೆರಂಬಲೂರು ಜಿಲ್ಲೆಯ ಸಿರುಕುಡಾಲ್ ಗ್ರಾಮದ ಬಳಿ ಶುಕ್ರವಾರ ಈ ಘಟನೆ ನಡೆದಿದೆ.

ವರದಿಗಳ ಪ್ರಕಾರ, 10-15 ವರ್ಷ ವಯಸ್ಸಿನ ಬಾಲಕರು ಶೌಚಕ್ಕಾಗಿ ಬಯಲು ಪ್ರದೇಶಕ್ಕೆ ಹೋದಾಗ ಅಲ್ಲಿ ಅವರಿಗೆ ತಮ್ಮ ಮಲವನ್ನು ಗೋಣಿಚೀಲದಲ್ಲಿ ಇರಿಸಿ ಸಾಗಿಸಲು ಒತ್ತಾಯಿಸಿದರು ಎನ್ನಲಾಗಿದೆ.ಈಗ ಆ ಮೇಲ್ಜಾತಿಯ ಯುವಕರನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989 ರ ಅಡಿಯಲ್ಲಿ ಬಂಧಿಸಲಾಗಿದೆ.ಆರೋಪಿಗಳನ್ನು ಅಬಿನೇಶ್ (20), ಸೆಲ್ವಕುಮಾರ್ (24) ಮತ್ತು ಸಿಲಾಂಬರಸನ್ (22) ಎಂದು ಗುರುತಿಸಲಾಗಿದೆ.

ಸಮಾನತೆ ಹೋರಾಟ ಕೊನೆಗೊಂಡಿಲ್ಲ, ದಲಿತರಿನ್ನೂ ತಾರತಮ್ಯ ಅನುಭವಿಸುತ್ತಿದ್ದಾರೆ - ಸುಪ್ರೀಂ

ಅಪ್ರಾಪ್ತ ವಯಸ್ಕರಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಬಾಲಕರ ಕುಟುಂಬಗಳೊಂದಿಗೆ ವಿದುತಲೈ ಸಿರುತೈಗಲ್ ಕಚ್ಚಿ ಸದಸ್ಯರೊಂದಿಗೆ ಗ್ರಾಮದಲ್ಲಿ ರಸ್ತೆ ರೋಖೋ ಪ್ರತಿಭಟನೆಯನ್ನು ನಡೆಸಿದರು.ಈಗ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದರಿಂದ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

ಬಿಜೆಪಿ-ಆರ್‌ಎಸ್‌ಎಸ್ ದಲಿತ ವಿರೋಧಿಗಳು, ಮೀಸಲಾತಿ ಅಂತ್ಯಗೊಳಿಸಲು ಪ್ರಯತ್ನಿಸುತ್ತಿವೆ: ಕಾಂಗ್ರೆಸ್

ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೆರಂಬಲೂರು ಪೊಲೀಸ್ ವರಿಷ್ಠಾಧಿಕಾರಿ ನಿಶಾ ಪರಿಹಬನ್ ಸ್ಥಳೀಯ ಟಿವಿ ಚಾನೆಲ್ ಪುತಿಯಥಲೈಮುರೈಗೆ ತಿಳಿಸಿದರು.

Trending News