ರಾಜಸ್ತಾನದಲ್ಲಿ ಭಯ ಹುಟ್ಟಿಸಿದ 29 ಜಿಕಾ ವೈರಸ್ ಪ್ರಕರಣ

ರಾಜಸ್ಥಾನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ವೀಣಾ ಗುಪ್ತಾ ಮಂಗಳವಾರ ಒಟ್ಟು 29 ಜೀಕಾ ವೈರಸ್ ಪ್ರಕರಣಗಳನ್ನು ದೃಢಪಡಿಸಿದ್ದಾರೆ.ಜೀಕಾ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಈಗಾಗಾಗಲೇ 150ರಿಂದ 200 ತಂಡಗಳು ಜೈಪುರದಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು  

Last Updated : Oct 9, 2018, 05:16 PM IST
ರಾಜಸ್ತಾನದಲ್ಲಿ ಭಯ ಹುಟ್ಟಿಸಿದ 29 ಜಿಕಾ ವೈರಸ್ ಪ್ರಕರಣ title=

ನವದೆಹಲಿ: ರಾಜಸ್ಥಾನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ವೀಣಾ ಗುಪ್ತಾ ಮಂಗಳವಾರ ಒಟ್ಟು 29 ಜೀಕಾ ವೈರಸ್ ಪ್ರಕರಣಗಳನ್ನು ದೃಢಪಡಿಸಿದ್ದಾರೆ.ಜೀಕಾ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಈಗಾಗಾಗಲೇ 150ರಿಂದ 200 ತಂಡಗಳು ಜೈಪುರದಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು  

ಗುಪ್ತಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ "ಒಟ್ಟು 29 ಪೊಸಿಟಿವ್  ಪ್ರಕರಣಗಳು ಇಲ್ಲಿವೆ, 150-200 ತಂಡಗಳು ಜಂಟಿ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಈಗಾಗಲೇ ಒಟ್ಟು 26,000 ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ ಮತ್ತು ಎಲ್ಲಾ ರೀತಿಯ ಜ್ವರ ಪ್ರಕರಣಗಳ ಪಟ್ಟಿ ಸಿದ್ದಗೊಳಿಸಲಾಗಿದೆ " ಎಂದು ಹೇಳಿದರು.

ವೈರಸ್ ಸೆಪ್ಟೆಂಬರ್ 24 ರಂದು ದೃಢೀಕರಿಸಲ್ಪಟ್ಟ ನಂತರ 160 ಗರ್ಭಿಣಿ ಮಹಿಳೆಯರ ಮಾದರಿಗಳನ್ನು ಒಳಗೊಂಡಂತೆ 450 ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ. ಏತನ್ಮಧ್ಯೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡ ಅವರು ಮಾತನಾಡಿ  ಈಗ ಎಲ್ಲವು ನಿಯಂತ್ರಣದಲ್ಲಿದೆ ಆದ್ದರಿಂದ ಯಾರು ಭಯಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವರು ತಿಳಿಸಿದರು. 

ಝೈಕಾ ವೈರಸ್ ರೋಗವು ಪ್ರಾಥಮಿಕವಾಗಿ ಏಡೆಸ್ ಸೊಳ್ಳೆಗಳ ಮೂಲಕ ಹರಡುವ ವೈರಸ್ನಿಂದ ಉಂಟಾಗುತ್ತದೆ, ಅದು ಹೆಚ್ಚಾಗಿ ಹಗಲಿನಲ್ಲಿ ಸೊಳ್ಳೆಗಳು ಕಚ್ಚುವುದರಿಂದ ಹರಡುತ್ತದೆ ಸಾಮಾನ್ಯವಾಗಿ ಇದರ ಲಕ್ಷಣಗಳು ಜ್ವರ, ಸ್ನಾಯು ಮತ್ತು ಜಂಟಿ ನೋವು, ಅಸ್ವಸ್ಥತೆ ಅಥವಾ ತಲೆನೋವುಗಳಾಗಿವೆ.

Trending News