24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 2,347 ಕೋವಿಡ್ ಪ್ರಕರಣಗಳು ದಾಖಲು

ಮಹಾರಾಷ್ಟ್ರದಲ್ಲಿ ಭಾನುವಾರದಂದು  2,347 ಕರೋನವೈರಸ್ ಪ್ರಕರಣಗಳನ್ನು ವರದಿ ಮಾಡಿದೆ, ಇದು ಇದುವರೆಗಿನ ಅತಿದೊಡ್ಡ ಏಕದಿನ ಜಿಗಿತವಾಗಿದೆ ಎನ್ನಲಾಗಿದೆ. ಇನ್ನು ಅತಿ ಹೆಚ್ಚು ಹಾನಿಗೊಳಗಾದ ಮಹಾರಾಷ್ಟ್ರದಲ್ಲಿ ಒಟ್ಟು COVID-19 ಪ್ರಕರಣಗಳು 33,000 ದಾಟಿದೆ. ಒಂದೇ ದಿನದಲ್ಲಿ 63 ಸಾವುಗಳು ವರದಿಯಾಗಿವೆ.

Last Updated : May 17, 2020, 11:15 PM IST
24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 2,347 ಕೋವಿಡ್ ಪ್ರಕರಣಗಳು ದಾಖಲು title=
file photo

ನವದೆಹಲಿ: ಮಹಾರಾಷ್ಟ್ರದಲ್ಲಿ ಭಾನುವಾರದಂದು  2,347 ಕರೋನವೈರಸ್ ಪ್ರಕರಣಗಳನ್ನು ವರದಿ ಮಾಡಿದೆ, ಇದು ಇದುವರೆಗಿನ ಅತಿದೊಡ್ಡ ಏಕದಿನ ಜಿಗಿತವಾಗಿದೆ ಎನ್ನಲಾಗಿದೆ. ಇನ್ನು ಅತಿ ಹೆಚ್ಚು ಹಾನಿಗೊಳಗಾದ ಮಹಾರಾಷ್ಟ್ರದಲ್ಲಿ ಒಟ್ಟು COVID-19 ಪ್ರಕರಣಗಳು 33,000 ದಾಟಿದೆ. ಒಂದೇ ದಿನದಲ್ಲಿ 63 ಸಾವುಗಳು ವರದಿಯಾಗಿವೆ.

ದೇಶದ ಅತಿ ಹೆಚ್ಚು ಕರೋನವೈರಸ್ ಪೀಡಿತ ನಗರವಾದ ಮುಂಬೈ 1,595 ಪ್ರಕರಣಗಳ ಏರಿಕೆ ದಾಖಲಿಸಿದ್ದು, ಒಟ್ಟು 20,000 ದಾಟಿದೆ. ನಗರದಲ್ಲಿ ಭಾನುವಾರ 38 ಸಾವುಗಳು ದಾಖಲಾಗಿವೆ; ಮುಂಬೈನಲ್ಲಿ ಈವರೆಗೆ 734 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು 1,198.  ಸಾವುಗಳು ಸಂಭವಿಸಿವೆ 7,688 ಕರೋನವೈರಸ್ ರೋಗಿಗಳನ್ನು ಗುಣಪಡಿಸಲಾಗಿದೆ.

ಕೇಂದ್ರದ ಘೋಷಣೆಗೆ ಮುಂಚೆಯೇ, ಮಹಾರಾಷ್ಟ್ರವು ರಾಜ್ಯದ ಲಾಕ್ಡೌನ್ ಅನ್ನು ಮೇ 31 ರವರೆಗೆ ವಿಸ್ತರಿಸಿತು. ಹಂತವಾರು ನಿರ್ಬಂಧಗಳನ್ನು ಸಡಿಲಿಸುವ ಆದೇಶವನ್ನು ಶೀಘ್ರದಲ್ಲೇ ತಿಳಿಸಲಾಗುವುದು.'ಎಂದು ಮುಖ್ಯ ಕಾರ್ಯದರ್ಶಿ ಅಜೋಯ್ ಮೆಹ್ತಾ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
 

Trending News