ಮುಂಬಯಿಯ ಶಾಲೆಯಲ್ಲಿ 22 ಮಕ್ಕಳಿಗೆ ಕರೋನ ಸೋಂಕು ದೃಢ , ಹನ್ನೆರಡು ವರ್ಷಕ್ಕಿಂತ ಕೆಳಗಿನ ನಾಲ್ಕು ಮಕ್ಕಳು ಪಾಸಿಟಿವ್

ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ ಎನ್ನಲಾಗಿದೆ. ಕರೋನಾದಿಂದ ಹೆಚ್ಚು ಹಾನಿಗೊಳಗಾದ ನಾಲ್ಕು ರಾಜ್ಯಗಳಲ್ಲಿ ಮಹಾರಾಷ್ಟ್ರ ಕೂಡಾ ಒಂದು. ಮಹಾರಾಷ್ಟ್ರ, ಕರ್ನಾಟಕ  , ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಕೋವಿಡ್‌ನ ಸಕ್ರಿಯ ಪ್ರಕರಣಗಳು 10,000 ದಿಂದ 1,00,000 ವರೆಗೆ ಇವೆ.

Written by - Ranjitha R K | Last Updated : Aug 26, 2021, 06:46 PM IST
  • ಅನ್ ಲಾಕ್ ಆಗುತ್ತಿದ್ದಂತೆಯೇ ಶಾಲೆಗಳು ಆರಂಭ
  • ಬಹುತೇಕ ರಾಜ್ಯಗಳಲ್ಲಿ ಶಾಲೆಗಳನ್ನು ತೆರೆಯಲಾಗಿದೆ
  • ಮುಂಬಯಿಯ ಶಾಲೆಯಲ್ಲಿ 22 ಮಕ್ಕಳಿಗೆ ಕರೋನ ಸೋಂಕು
ಮುಂಬಯಿಯ ಶಾಲೆಯಲ್ಲಿ 22 ಮಕ್ಕಳಿಗೆ ಕರೋನ  ಸೋಂಕು ದೃಢ , ಹನ್ನೆರಡು ವರ್ಷಕ್ಕಿಂತ ಕೆಳಗಿನ ನಾಲ್ಕು ಮಕ್ಕಳು ಪಾಸಿಟಿವ್   title=
22 ಮಕ್ಕಳಿಗೆ ಕರೋನ ಸೋಂಕು (file photo)

ಮುಂಬಯಿ : ಕೊರೊನಾವೈರಸ್ (Coronavirus) ಪ್ರಕರಣಗಳು ಕಡಿಮೆಯಾಗುತ್ತಿರುವಂತೆಯೇ ಎಲ್ಲಾ ನಗರಗಳನ್ನು ಅನ್ ಲಾಕ್ ಮಾಡಲಾಗುತ್ತಿದೆ. ಅನ್ಲಾಕ್ ಪ್ರಕ್ರಿಯೆಯ ನಡುವೆ ಹೆಚ್ಚಿನ ರಾಜ್ಯಗಳಲ್ಲಿ ಶಾಲೆಗಳನ್ನು ಕೂಡಾ (School open) ತೆರೆಯಲಾಗಿದೆ. ಈ ಮಧ್ಯೆ, ಮುಂಬಯಿಯಿಂದ ಆತಂಕಕಾರಿ ಸುದ್ದಿ ಕೇಳಿ ಬಂದಿದೆ. ಮುಂಬೈನ ಸೇಂಟ್ ಜೋಸೆಫ್ ಶಾಲೆಯಲ್ಲಿ 22 ಮಕ್ಕಳಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಈ ಪೈಕಿ ನಾಲ್ವರು ಮಕ್ಕಳು 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಹೇಳಲಾಗಿದೆ.
 
ಹೇಗಿದೆ ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ?
ಮಹಾರಾಷ್ಟ್ರದಲ್ಲಿ (Maharastra) ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ ಎನ್ನಲಾಗಿದೆ. ಕರೋನಾದಿಂದ ಹೆಚ್ಚು ಹಾನಿಗೊಳಗಾದ ನಾಲ್ಕು ರಾಜ್ಯಗಳಲ್ಲಿ ಮಹಾರಾಷ್ಟ್ರ ಕೂಡಾ ಒಂದು. ಮಹಾರಾಷ್ಟ್ರ, ಕರ್ನಾಟಕ (Karnataka) , ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಕೋವಿಡ್‌ನ (COVID-19) ಸಕ್ರಿಯ ಪ್ರಕರಣಗಳು 10,000 ದಿಂದ 1,00,000 ವರೆಗೆ ಇವೆ. ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಕೇರಳವು 51%, ಮಹಾರಾಷ್ಟ್ರದಲ್ಲಿ 16% ಮತ್ತು ಉಳಿದ 3 ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ  4% -5% ದಷ್ಟಿದೆ.

ಇದನ್ನೂ ಓದಿ: ಕೊರೊನಾ 2ನೇ ಅಲೆಯ ಆರ್ಭಟ ಇನ್ನೂ ಮುಗಿದಿಲ್ಲ: ಕೇಂದ್ರದ ಎಚ್ಚರಿಕೆ ಸಂದೇಶ

 ದೇಶದಲ್ಲಿ 46 ಸಾವಿರ ಹೊಸ ಪ್ರಕರಣಗಳು:
 ಆರೋಗ್ಯ ಸಚಿವಾಲಯದ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 46,164 ಹೊಸ ಕರೋನಾ ಪ್ರಕರಣಗಳು (Coronavirus) ವರದಿಯಾಗಿವೆ. ಮತ್ತು 607 ಜನರು ಸಾವನ್ನಪ್ಪಿದ್ದಾರೆ. ಇನ್ನು 34,159 ಜನರು ಕರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಇದುವರೆಗೆ 3,25,58,530 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಅದರಲ್ಲಿ 3,33,725 ಸಕ್ರಿಯ ಪ್ರಕರಣಗಳಾಗಿವೆ. 

ಇದನ್ನೂ ಓದಿ: ಸೆಪ್ಟೆಂಬರ್ 30 ರ ನಂತರ ಕೊನೆಗೊಳ್ಳಲಿದೆ SBI, HDFC, ICICI ಬ್ಯಾಂಕಿನ ಈ ಸ್ಕೀಮ್, ತಕ್ಷಣವೇ ಲಾಭ ಪಡೆದುಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News