ಅಹಮದಾಬಾದ್: 2002 ರ ಅಕ್ಷರಧಾಮ ದೇವಾಲಯದ ದಾಳಿಗೆ ಸಂಬಂಧಿಸಿದಂತೆ ಮೊಹಮ್ಮದ್ ಫಾರೂಕ್ ಶೇಖ್ ಅವರನ್ನು ಅಹ್ಮದಾಬಾದ್ ನ ಕ್ರೈಂ ಬ್ರ್ಯಾಂಚ್ ಬಂಧಿಸಿದೆ. ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಫಾರೂಕ್ ರನ್ನು ಕ್ರೈಂ ಬ್ರ್ಯಾಂಚ್ ಬಂಧಿಸಲಾಗಿದೆ.
2002 ರಲ್ಲಿನ ಅಕ್ಷರಧಾಮ ದೇವಸ್ಥಾನದ ಮೇಲಿನ ದಾಳಿಯಲ್ಲಿ ಮೊಹಮ್ಮದ್ ಫಾರೂಕ್ ಶೇಖ್ ನನ್ನು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಅಹ್ಮದಾಬಾದ್ ಕ್ರೈಮ್ ಬ್ರಾಂಚ್ ಬಂದಿಸಿದೆ ಎಂದು ಎಎನ್ಐ ಸಂಸ್ಥೆ ವರದಿ ಮಾಡಿದೆ.
Gujarat: Accused Mohammed Farooq Shaikh in 2002 Akshardham Temple attack arrested by Ahmedabad Crime Branch from Ahmedabad Airport pic.twitter.com/R5NbGc3K0X
— ANI (@ANI) November 26, 2018
ಈ ಹಿಂದೆ ಅಪರಾಧ ಶಾಖೆ, ನವೆಂಬರ್ನಲ್ಲಿ 2017 ಅಜ್ಮೀರಿ ಅಬ್ದುಲ್ ರಶೀದ್ ಎನ್ನುವ ಆರೋಪಿಯನ್ನು ಬಂದಿಸಲಾಗಿತ್ತು ಮತ್ತು ಆಡಮ್ ಅಜ್ಮೀರಿ ಶನ್ ಮಿಯಾ ಅಲಿಯಾಸ್ ಚಾಂದ್ ಖಾನ್ ಮತ್ತು ಮುಫ್ತಿ ಅಬ್ದುಲ್ ಖಾಯಂ ಮನ್ಸೂರಿ ಎನ್ನುವವರಿಗೆ ಪೋಟಾ ಕಾಯ್ದೆ ಅಡಿಯಲ್ಲಿ ವಿಶೇಷ ನ್ಯಾಯಾಲಯವು ಮರಣದಂಡನೆ ವಿಧಿಸಲಾಗಿತ್ತು.
2002 ರಲ್ಲಿ ಗುಜರಾತ್ ಗಾಂಧಿನಗರದಲ್ಲಿನ ಅಕ್ಷರಧಾಮ ದೇವಸ್ಥಾನದ ಮೇಲೆ ನಡೆಯಿತು. ಸೆಪ್ಟೆಂಬರ್ 24, 2002 ರಂದು,ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಮತ್ತು ಕೈ ಗ್ರೆನೇಡ ದಾಳಿಯಿಂದಾಗಿ 32 ಜನರು ಸಾವನ್ನಪ್ಪಿದ್ದರು.