ರಾಂಪುರ್ ಸೆಕ್ಟರ್‌ನಲ್ಲಿರುವ ಎಲ್‌ಒಸಿ ಬಳಿ ಪಾಕ್ ಗುಂಡಿನ ದಾಳಿಗೆ ಇಬ್ಬರು ಭಾರತೀಯ ಸೈನಿಕರು ಬಲಿ

ಮಧ್ಯಾಹ್ನ 3.30ರ ಸುಮಾರಿಗೆ ಪಾಕಿಸ್ತಾನ ಸೇನೆಯು ಜಿಲ್ಲೆಯ ರಾಂಪುರ್ ಸೆಕ್ಟರ್‌ನಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿತು.

Last Updated : May 2, 2020, 11:04 AM IST
ರಾಂಪುರ್ ಸೆಕ್ಟರ್‌ನಲ್ಲಿರುವ ಎಲ್‌ಒಸಿ ಬಳಿ ಪಾಕ್ ಗುಂಡಿನ ದಾಳಿಗೆ ಇಬ್ಬರು ಭಾರತೀಯ ಸೈನಿಕರು ಬಲಿ title=
File Image

ಜಮ್ಮು ಮತ್ತು ಕಾಶ್ಮೀರ: ರಾಂಪುರ್ ಸೆಕ್ಟರ್‌ನಲ್ಲಿ ಶುಕ್ರವಾರ ಪಾಕಿಸ್ತಾನ (Pakistan)ದ ಕದನ ವಿರಾಮ ಉಲ್ಲಂಘನೆಯಲ್ಲಿ ಗಾಯಗೊಂಡಿದ್ದ ಇಬ್ಬರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ ಪಾಕಿಸ್ತಾನ ಸೇನೆಯು ಜಿಲ್ಲೆಯ ರಾಂಪುರ್ ಸೆಕ್ಟರ್‌ನಲ್ಲಿ ಅಪ್ರಚೋದಿತ ಗುಂಡಿನ ದಾಳಿ ಆರಂಭಿಸಿ ಮೂವರು ಸೈನಿಕರು ಗಾಯಗೊಂಡಿದ್ದರು. ಅವರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನದ ಈ ದಾಳಿಗೆ ಭಾರತೀಯ ಸೇನೆಯು ಸೂಕ್ತವಾಗಿ ಪ್ರತೀಕಾರ  ತೀರಿಸಿಕೊಂಡಿದೆ ಎಂದು ಸೇನಾ ಮೂಲಗಳಿಂದ ಮಾಹಿತಿ ಲಭಿಸಿದೆ.

ಮುಂಜಾನೆ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಉರಿಯ ಹಾಜಿಪೀರ್ ಸೆಕ್ಟರ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಡೆಗಳ ನಡುವೆ ನಿಯಂತ್ರಣ ರೇಖೆಯ (LoC) ಉದ್ದಕ್ಕೂ ಗುಂಡಿನ ಚಕಮಕಿ ನಡೆದಿದೆ.  ಅಧಿಕಾರಿಯೊಬ್ಬರ ಪ್ರಕಾರ ಪಾಕಿಸ್ತಾನ ಪಡೆಗಳು ಕದನ ವಿರಾಮವನ್ನು ಉಲ್ಲಂಘಿಸಿವೆ ಮತ್ತು ಉರಿಯಲ್ಲಿನ ಭಾರತೀಯ ಸೇನೆಯ ಶಿಬಿರಗಳ ಮೇಲೆ ಭಾರೀ ಶೆಲ್ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ.

ಉಭಯ ಸೈನಿಕರ ನಡುವೆ ಭಾರಿ ಶೆಲ್ ದಾಳಿ ನಡೆದ ನಂತರ ಶುಕ್ರವಾರ ಬೆಳಿಗ್ಗೆ ಈ ಪ್ರದೇಶದಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದೆ ಎಂದು ಸ್ಥಳೀಯರ ವರದಿಗಳು ತಿಳಿಸಿವೆ.

ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಬಾರಾಮುಲ್ಲಾ, ಅಬ್ದುಲ್ ಕಯೂಮ್ ಕೂಡ ಎಲ್‌ಇಸಿ ಉದ್ದಕ್ಕೂ ಶೆಲ್ ದಾಳಿ ನಡೆಸಿರುವುದನ್ನು ದೃಢಪಡಿಸಿದರು, ಈ ಪ್ರದೇಶದಲ್ಲಿ ಶೆಲ್ ದಾಳಿ ಸಮಯದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ ಎಂದು ಅವರು ಹೇಳಿದ್ದಾರೆ.

Trending News