Telangana Lockdown : 10 ದಿನಗಳ ಕಾಲ 'ಸಂಪೂರ್ಣ ಲಾಕ್‌ಡೌನ್' ಘೋಷಿಸಿದ ತೆಲಂಗಾಣ ಸರ್ಕಾರ!

ಪ್ರತಿದಿನ ಬೆಳಿಗ್ಗೆ 6 ರಿಂದ ಬೆಳಿಗ್ಗೆ 10 ರವರೆಗೆ ಮಾತ್ರ ಅಗತ್ಯ ವಸ್ತುಗಳನ್ನು ಮಾರಾಟ ಮಾಡಲು ಮತ್ತು ಖರೀದಿಸಲು ಅವಕಾಶ

Last Updated : May 11, 2021, 05:15 PM IST
  • ನಾಳೆಯಿಂದ ರಾಜ್ಯದಾದ್ಯಂತ 10 ದಿನಗಳ ಲಾಕ್‌ಡೌನ್ ಜಾರಿಯಲ್ಲಿರುತ್ತದೆ
  • ತೆಲಂಗಾಣ ಸರ್ಕಾರ ಘೋಷಿಸಿದೆ.
  • ಪ್ರತಿದಿನ ಬೆಳಿಗ್ಗೆ 6 ರಿಂದ ಬೆಳಿಗ್ಗೆ 10 ರವರೆಗೆ ಮಾತ್ರ ಅಗತ್ಯ
Telangana  Lockdown : 10 ದಿನಗಳ ಕಾಲ 'ಸಂಪೂರ್ಣ ಲಾಕ್‌ಡೌನ್' ಘೋಷಿಸಿದ ತೆಲಂಗಾಣ ಸರ್ಕಾರ! title=

ತೆಲಂಗಾಣ : ನಾಳೆಯಿಂದ ರಾಜ್ಯದಾದ್ಯಂತ 10 ದಿನಗಳ ಲಾಕ್‌ಡೌನ್ ಜಾರಿಯಲ್ಲಿರುತ್ತದೆ ಎಂದು ತೆಲಂಗಾಣ ಸರ್ಕಾರ ಘೋಷಿಸಿದೆ.

ತೆಲಂಗಾಣ ಸರ್ಕಾರ ವಿಧಿಸಿರುವ ಲಾಕ್‌ಡೌನ್ ಕ್ರಮಗಳ ಪ್ರಕಾರ, ಪ್ರತಿದಿನ ಬೆಳಿಗ್ಗೆ 6 ರಿಂದ ಬೆಳಿಗ್ಗೆ 10 ರವರೆಗೆ ಮಾತ್ರ ಅಗತ್ಯ ವಸ್ತುಗಳನ್ನು ಮಾರಾಟ ಮಾಡಲು ಮತ್ತು ಖರೀದಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ : ಕೇರಳ ಕಮ್ಯುನಿಸ್ಟ್ ಚಳುವಳಿಯ ದಿಟ್ಟ ಮಹಿಳಾ ಧ್ವನಿ ಕೆ.ಆರ್.ಗೌರಿ ಅಮ್ಮಾ

ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್(K Chandrashekar Rao) ಅವರ ನಿವಾಸದಲ್ಲಿ ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಲಾಕ್ ಡೌನ್ ವಿಧಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ : Indian Railways : ಕೊರೋನಾಗೆ 1,952 ರೈಲ್ವೆ ಸಿಬ್ಬಂದಿಗಳು ಬಲಿ : ರೈಲ್ವೆ ಇಲಾಖೆ

ಸಂಬಂಧಿತ ಬೆಳವಣಿಗೆಯೊಂದರಲ್ಲಿ, ರಾಜ್ಯದಲ್ಲಿ ಲಸಿಕೆ ಪೂರೈಕೆ(Vaccine Supply)ಯನ್ನು ಹೆಚ್ಚಿಸಲು ಜಾಗತಿಕ ಟೆಂಡರ್‌ಗಳನ್ನು ಕರೆಯಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ : Paytmನಲ್ಲೂ ಲಭ್ಯವಿದೆ COVID-19 ಲಸಿಕೆ ಸ್ಲಾಟ್, ಅದನ್ನು ಈ ರೀತಿ ಪರಿಶೀಲಿಸಿ

"ಕೆಲವು ರಾಜ್ಯಗಳು ಲಾಕ್ ಡೌನ್ ಅನ್ನು ವಿಧಿಸಿದರೂ, ಪ್ರಕರಣಗಳಲ್ಲಿ ಯಾವುದೇ ಇಳಿಕೆ ಕಂಡು ಬಂದಿಲ್ಲ ಎಂದು ಸೂಚಿಸುವ ವರದಿಗಳಿವೆ. ಈ ಹಿನ್ನೆಲೆಯಲ್ಲಿ, ಲಾಕ್‌ಡೌನ್‌(Lockdown)ನಲ್ಲಿ ವಿಭಿನ್ನ ಅಭಿಪ್ರಾಯಗಳು ಹೊರಬರುತ್ತಿವೆ. ಕೆಲವು ವಿಭಾಗಗಳು ಲಾಕ್‌ಡೌನ್ ಹೇರುವ ಪರವಾಗಿ ವಾದಿಸುತ್ತಿವೆ. ಈ ಪರಿಸ್ಥಿತಿಗಳಲ್ಲಿ, ರಾಜ್ಯ ಕ್ಯಾಬಿನೆಟ್ ಲಾಲಾಕ್ ಡೌನ್ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಸೋಮವಾರ ತಿಳಿಸಿತ್ತು.

ಇದನ್ನೂ ಓದಿ : Sanjeevani App ಲಾಂಚ್ ಮಾಡಿದ Snapdeal ; Covid 19 ರೋಗಿಗಳಿಗೆ ಇಲ್ಲಿ ಸುಲಭವಾಗಿ ಸಿಗಲಿದೆ ಪ್ಲಾಸ್ಮಾ

ಎರಡು ವಾರಗಳ ಹಿಂದೆ ತೆಲಂಗಾಣದಲ್ಲಿ ನೈಟ್ ಕರ್ಫ್ಯೂ(Night Curfew) ವಿಧಿಸಿತ್ತು. ಆದ್ರೆ ಕೊರ್ನ ನಿಯಂತ್ರಣಕ್ಕೆ ಲಾಕ್ ಡೌನ್ ಮಾಡುವುದೇ ಮದ್ದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ : Good News: ವ್ಯಾಕ್ಸಿನ್ ಹಾಕಿಸಿಕೊಂಡ್ರಾ? ಇಲ್ಲ ಎಂದಾದರೆ ಮೊದಲು ಈ ಮಾಹಿತಿ ತಿಳಿದುಕೊಂಡು ಬೇಗ ವ್ಯಾಕ್ಸಿನ್ ಹಾಕಿಸಿಕೊಳ್ಳಿ

ಕಳೆದ ವಾರ ಆರಂಭದಲ್ಲಿ, ಸಿಎಂ ಕೆಸಿಆರ್ ತೆಲಂಗಾಣ(Telangana)ದಲ್ಲಿ ಲಾಕ್ ಡೌನ್ ಹೇರುವುದನ್ನು ತಳ್ಳಿಹಾಕಿದ್ದರು, ಆದ್ರೆ ಇಂದು ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ. ಇದು ರಾಜ್ಯದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News