Winter Diet: ಚಳಿಗಾಲದಲ್ಲಿ ಈ ಆಹಾರಗಳ ಸೇವನೆಯಿಂದ ರೋಗಗಳಿಂದ ದೂರ ಉಳಿಯಬಹುದು

Winter Diet: ಬೇರೆ ಋತುಗಳಿಗಿಂತ ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು ದೇಹವನ್ನು ಬೆಚ್ಚಗಿಡುವುದರ ಜೊತೆಗೆ ನಮ್ಮ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವುದು ಬಹಳ ಮುಖ್ಯ. ಇದಕ್ಕಾಗಿ ಚಳಿಗಾಲದಲ್ಲಿ ಕೆಲವು ಆಹಾರಗಳ ಸೇವನೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. 

Written by - Yashaswini V | Last Updated : Jan 17, 2023, 09:00 AM IST
  • ನೀವು ಚಳಿಗಾಲದಲ್ಲಿ ರೋಗಗಳನ್ನು ತಪ್ಪಿಸಲು ಬಯಸಿದರೆ, ದೇಹವನ್ನು ಒಳಗಿನಿಂದ ಬೆಚ್ಚಗಿಡುವುದು ಅವಶ್ಯಕ.
  • ಇಲ್ಲದಿದ್ದರೆ, ಇತ್ತೀಚಿನ ದಿನಗಳಲ್ಲಿ ಶೀತದಿಂದಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಸಮಸ್ಯೆಗಳು ಹೆಚ್ಚಾಗುತ್ತವೆ.
  • ಇದನ್ನು ತಪ್ಪಿಸಲು ನಿಮ್ಮ ದೈನಂದಿನ ಆಹಾರದಲ್ಲಿ ಕೆಲವು ಆಹಾರಗಳನ್ನು ಸೇವಿಸುವುದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು
Winter Diet: ಚಳಿಗಾಲದಲ್ಲಿ ಈ ಆಹಾರಗಳ ಸೇವನೆಯಿಂದ ರೋಗಗಳಿಂದ ದೂರ ಉಳಿಯಬಹುದು  title=
Winter Diet

Winter Diet: ಚಳಿಗಾಲದಲ್ಲಿ ನಮ್ಮ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವುದರಿಂದ ಇತರ ಋತುಮಾನಗಳಿಗೆ ಹೋಲಿಸಿದರೆ ಈ ಋತುವಿನಲ್ಲಿ ರೋಗಗಳ ಅಪಾಯ ಕೊಂಚ ಹೆಚ್ಚಾಗಿರುತ್ತದೆ. ಚಳಿಗಾಲದಲ್ಲಿ ಸಾಮಾನ್ಯ ರೋಗಗಳನ್ನು ತಪ್ಪಿಸಲು ನಾವು ಒಳಗಿನಿಂದ ಬಲಿಷ್ಠರಾಗಿರುವುದು ಬಹಳ ಅಗತ್ಯ.  ನಮ್ಮ ದೈನಂದಿನ ಆಹಾರಗಳ ಸಹಾಯದಿಂದ ನಾವು ಒಳಗಿನಿಂದ ಬಲಶಾಲಿಯಾಗಬಹುದು. ಇದಕ್ಕಾಗಿ ಚಳಿಗಾಲದಲ್ಲಿ ಯಾವ ಆಹಾರಗಳನ್ನು ಸೇವಿಸುವುದು ಅತ್ಯಗತ್ಯ ಎಂದು ತಿಳಿಯಿರಿ.

ಎಳ್ಳು ಮತ್ತು ಬೆಲ್ಲ:
ಚಳಿಗಾಲದಲ್ಲಿ ಬರುವ ಹಬ್ಬಗಳಲ್ಲಿ ಸಂಕ್ರಾಂತಿ ಹಬ್ಬ ಪ್ರಮುಖ ಹಬ್ಬ. ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲವನ್ನು ತಿಂದು ಒಳ್ಳೆಯ ಮಾತನಾಡು ಎಂಬ ನಾಣ್ನುಡಿ ಇದೆ. ಆದರೆ, ಚಳಿಗಾಲದಲ್ಲಿ ಎಳ್ಳು-ಬೆಲ್ಲವನ್ನು ತಿನ್ನುವುದರಿಂದ ಮಾತು ಸಿಹಿಯಾಗಿರುವುದು ಮಾತ್ರವಲ್ಲ ಆರೋಗ್ಯವೂ ಚೆನ್ನಾಗಿರುತ್ತದೆ. 

ವಾಸ್ತವವಾಗಿ, ಎಳ್ಳು ಮತ್ತು ಬೆಲ್ಲ ಇವೆರಡೂ ಸ್ವಭಾವತಃ ಬಿಸಿ ಪರಿಣಾಮವನ್ನು ಉಂಟು ಮಾಡುತ್ತವೆ. ಹೆಚ್ಚಿನ ಕ್ಯಾಲೋರಿ ಆಹಾರವಾಗಿರುವ ಬೆಲ್ಲವು ಚಳಿಗಾಲದಲ್ಲಿ ಅನೇಕ ರೋಗಗಳ ಅಪಾಯವನ್ನು ದೂರ ಮಾಡಿ ಶೀತದಿಂದ ಮುಕ್ತಿ ನೀಡುತ್ತದೆ. ಅದೇ ಸಮಯದಲ್ಲಿ, ಎಳ್ಳಿನಲ್ಲಿರುವ ಗುಣಲಕ್ಷಣಗಳು ರಕ್ತದ ಹರಿವನ್ನು ಉತ್ತೇಜಿಸುತ್ತದೆ. ಮಾತ್ರವಲ್ಲ, ಎಳ್ಳು ಚಯಾಪಚಯವನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಎಳ್ಳನ್ನು ನೀರಿನಲ್ಲಿ ನೆನೆಸಿ ಕುಡಿಯುವುದರಿಂದ  ಹೃದಯಾಘಾತ ಮತ್ತು ಕೊಲೆಸ್ಟ್ರಾಲ್‌ನಂತಹ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಹ ಹೇಳಲಾಗುತ್ತದೆ.

ಇದನ್ನೂ ಓದಿ- ಚಳಿಗಾಲದಲ್ಲಿ ನಿಮ್ಮ ಈ ಅಭ್ಯಾಸ ಅಧಿಕ ರಕ್ತದೊತ್ತದಕ್ಕೆ ಕಾರಣವಾಗಬಹುದು... ಎಚ್ಚರ!

ಬಜ್ರಾ:
ಸಿರಿಧಾನ್ಯಗಳಲ್ಲಿ ಒಂದಾದ ಬಜ್ರಾ ಸೇವನೆಯೂ ಕೂಡ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಇದನ್ನು ಚಳಿಗಾಲದಲ್ಲಿ ಸೇವಿಸುವುದರಿಂದ ದೇಹವು ಒಳಗಿನಿಂದ ಬೆಚ್ಚಗಿರುತ್ತದೆ. 

ತುಪ್ಪ:
ಸಾಮಾನ್ಯವಾಗಿ ನಮ್ಮಲ್ಲಿ ಹಲವರು ದಪ್ಪಗಾಗುತ್ತೇವೆ ಎಂದು ತುಪ್ಪ ತಿನ್ನುವುದನ್ನು ತಪ್ಪಿಸುತ್ತಾರೆ. ಆದರೆ, ಚಳಿಗಾಲದಲ್ಲಿ ಬಿಸಿ ಆಹಾರದೊಂದಿಗೆ ತುಪ್ಪ ಹಾಕಿ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದಲ್ಲದೆ, ತುಪ್ಪವು ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದಲೂ ಕೂಡ ನಿಮಗೆ ಪರಿಹಾರವನ್ನು ನೀಡುತ್ತದೆ.

ಇದನ್ನೂ ಓದಿ- ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಪಾರಾಗಲು ಇಂದಿನಿಂದಲೇ ನಿಮ್ಮ ಆಹಾರದಲ್ಲಿರಲಿ ಈ 5 ಆರೋಗ್ಯಕರ ಎಣ್ಣೆ

ಶುಂಠಿ:
ಚಳಿಗಾಲದಲ್ಲಿ ಶುಂಠಿ ಅತ್ಯುತ್ತಮ ಮನೆಮದ್ದು. ಶುಂಠಿ ಸೇವನೆಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಾಗಾಗಿಯೇ, ಹೆಚ್ಚಿನ ಜನರು ಚಳಿಗಾಲದಲ್ಲಿ ಶುಂಠಿ ಚಹಾ ಸೇವಿಸಲು ಇಷ್ಟಪಡುತ್ತಾರೆ.

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News