Health Tips: ಹೊಟ್ಟೆಯ ಬೊಜ್ಜು ಕರಗಿಸಲು ರಾತ್ರಿ ಊಟದ ವೇಳೆ ಈ ನಿಯಮ ಅನುಸರಿಸಿ

ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ರಾತ್ರಿ ವೇಳೆ ಆಹಾರ ಸೇವಿಸುವಾಗ ಈ ನಿಯಮಗಳನ್ನು ಅನುಸರಿಸಿ. ಆಗ ನಿಮ್ಮ ಹೊಟ್ಟೆಯ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ.

Written by - Puttaraj K Alur | Last Updated : Jul 14, 2022, 04:25 PM IST
  • ಬೊಜ್ಜು ಕರಗಿಸಲು ರಾತ್ರಿ ಊಟದ ವೇಳೆ ಪೋಷಕಾಂಶ ಭರಿತ ಆಹಾರ ಸೇವಿಸಬೇಕು
  • ರಾತ್ರಿಯ ಊಟದಲ್ಲಿ ರಾಗಿ ಸೇವನೆಯಿಂದ ಕೂಡ ನೀವು ಹೊಟ್ಟೆಯ ಕೊಬ್ಬನ್ನು ಕರಿಸಬಹುದು
  • ಸೂರ್ಯಾಸ್ತದ ಮೊದಲು ಭೋಜನ ಮಾಡುವುದರಿಂದ ಸುಲಭವಾಗಿ ತೂಕ ಕಳೆದುಕೊಳ್ಳಬಹುದು
Health Tips: ಹೊಟ್ಟೆಯ ಬೊಜ್ಜು ಕರಗಿಸಲು ರಾತ್ರಿ ಊಟದ ವೇಳೆ ಈ ನಿಯಮ ಅನುಸರಿಸಿ title=
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಲಹೆಗಳು

ನವದೆಹಲಿ: ದೇಹದಲ್ಲಿ ಸಂಗ್ರಹವಾಗುವ ಕೊಬ್ಬು ಅನೇಕ ಬಾರಿ ಮುಜುಗರಕ್ಕೀಡು ಮಾಡುತ್ತದೆ. ಹೊಟ್ಟೆಯ ಬೊನ್ಜು ನಿಮ್ಮ ನೋಟವನ್ನೇ ಹಾಳು ಮಾಡುತ್ತದೆ. ಹೀಗಾಗಿ ಬೊಜ್ಜು ಕರಗಿಸಲು ಜನರು ವಿವಿಧ ರೀತಿಯ ಆಹಾರ ಮತ್ತು ವ್ಯಾಯಾಮವನ್ನು ಅನುಸರಿಸುತ್ತಾರೆ. ಇದಕ್ಕಾಗಿಯೇ ನಾವೆಲ್ಲರೂ ಫಿಟ್ ಮತ್ತು ಆಕರ್ಷಕವಾಗಿ ಕಾಣಲು ಬಯಸುತ್ತೇವೆ. ಆದರೆ ಹೆಚ್ಚಿದ ದೇಹದ ತೂಕ ಅಥವಾ ಬೊಜ್ಜಿನಿಂದ ಇದು ಸಾಧ್ಯವಾಗುವುದಿಲ್ಲ.

ಅಷ್ಟೇ ಅಲ್ಲ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು ಹಲವು ಗಂಭೀರ ಕಾಯಿಲೆಗಳನ್ನು ಹೊತ್ತುತರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರಾತ್ರಿಯ ಊಟದ ಸಮಯದಲ್ಲಿ ನೀವು ಅನುಸರಿಸಬೇಕಾದ ಕೆಲವು ನಿಯಮಗಳನ್ನು ನಾವು ನಿಮಗೆ ತಿಳಿಸುತ್ತೇವೆ. ಈ ವಿಧಾನಗಳನ್ನು ಅನುಸರಿಸುವ ಮೂಲಕ ನೀವು ಹೊಟ್ಟೆಯ ಕೊಬ್ಬಿನ ಜೊತೆಗೆ ಇಡೀ ದೇಹದ ಕೊಬ್ಬನ್ನು ಕಡಿಮೆ ಮಾಡಬಹುದು. ಅದು ಹೇಗೆಂದು ತಿಳಿಯಿರಿ..

ಇದನ್ನೂ ಓದಿ: ಡಯಾಬಿಟೀಸ್ ಮತ್ತು ಹೃದ್ರೋಗಿಗಳು ತಿನ್ನಲೇ ಬೇಕು ಈ ಹಣ್ಣು ..!

ರಾತ್ರಿಯ ಊಟದ ವೇಳೆ ಈ ನಿಯಮ ಅನುಸರಿಸಿ:-

ಸಂಜೆ ಪೋಷಕಾಂಶ ಭರಿತ ಆಹಾರ ಸೇವಿಸಿ

ಸಂಜೆ ಆರೋಗ್ಯಕರ ಊಟ ಮಾಡಿ. ರಾತ್ರಿಯಲ್ಲಿ ಕಡಿಮೆ ತಿನ್ನಲು ಇದು ನಿಮಗೆ ಸಹಾಯ ಮಾಡುತ್ತದೆ. ನೀವು ರಾತ್ರಿ ವೇಳೆ ಕಡಿಮೆ ಆಹಾರ ಸೇವಿಸಬೇಕು. ಕೆಂಪು ಅಕ್ಕಿ, ಹೆಸರು ಬೇಳೆ, ತುಪ್ಪ, ನೆಲ್ಲಿಕಾಯಿ, ಹಾಲು, ಬಾರ್ಲಿ, ರಾಗಿ, ದಾಳಿಂಬೆ, ಜೇನುತುಪ್ಪ, ಒಣದ್ರಾಕ್ಷಿ, ಕಲ್ಲು ಉಪ್ಪು ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿ ಸೇವಿಸಬೇಕು. ಪ್ರತಿದಿನ ರಾತ್ರಿ ಈ ರೀತಿಯ ಆಹಾರ ಸೇವನೆಯಿಂದಾಗಿ ದೇಹಕ್ಕೆ ಯಾವುದೇ ಹಾನಿಯುಂಟಾಗುವುದಿಲ್ಲ. ಈ ಆಹಾರಗಳು ವಿಶೇಷವಾಗಿ ಧಾನ್ಯಗಳು ಮತ್ತು ಪ್ರೋಟೀನ್ಗಳನ್ನು ಹೊಂದಿರುತ್ತವೆ ಮತ್ತು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ.

ರಾತ್ರಿಯ ಊಟದಲ್ಲಿ ರಾಗಿ ಸೇವನೆ

ರಾಗಿ ದೋಸೆ, ರಾಗಿ ಪುಲಾವ್, ರಾಗಿ ಖಿಚಡಿ ಮುಂತಾದವುಗಳನ್ನು ರಾತ್ರಿ ಊಟಕ್ಕೆ ಆಯ್ಕೆಮಾಡಿಕೊಳ್ಳಿ. ಇವು ಜೀರ್ಣಿಸಿಕೊಳ್ಳಲು ಸುಲಭ ಮತ್ತು ಪೋಷಕಾಂಶಗಳಿಂದ ತುಂಬಿರುತ್ತವೆ. ಇವು ನಿಮ್ಮ ಹೊಟ್ಟೆಗೆ ತುಂಬಾ ಪ್ರಯೋಜನಕಾರಿ. ಈ ಆಹಾರಗಳು ನಿಮ್ಮ ಹೊಟ್ಟೆಯನ್ನು ಆರೋಗ್ಯಕರವಾಗಿಡಲು ಕೆಲಸ ಮಾಡುತ್ತದೆ. ಪ್ರತಿದಿನ ರಾತ್ರಿ ಊಟದ ಸಮಯದಲ್ಲಿ ಇವುಗಳನ್ನು ಸೇವಿಸುವ ಮೂಲಕ ನೀವು ಸುಲಭವಾಗಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ನಾನ್ ವೆಜ್ ಯಾಕೆ ತಿನ್ನಬಾರದು? ಇದರ ಹಿಂದಿದೆ ವೈಜ್ಞಾನಿಕ ಕಾರಣ!

ಸೂರ್ಯಾಸ್ತದ ಮೊದಲು ಭೋಜನ ಮಾಡಿ

ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸೂರ್ಯಾಸ್ತದ ಮೊದಲು ನೀವು ಭೋಜನ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ತೂಕವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News