Weight Gain Diet : ನೀವು ತೆಳ್ಳಗಿದ್ದೀರಾ? ಹಾಗಿದ್ರೆ ಇಂದೇ ಈ ಆಹಾರ ಸೇವಿಸಲು ಆರಂಭಿಸಿ ; ಸದೃಢ ದೇಹ ನಿಮ್ಮದಾಗಿಸಿಕೊಳ್ಳಿ 

ಪ್ರತಿದಿನ ಒಂದೇ ಪ್ರಮಾಣದಲ್ಲಿ ಬೆರಳೆಣಿಕೆಯಷ್ಟು ಒಣದ್ರಾಕ್ಷಿ ಮತ್ತು ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ದೇಹ ತೂಕ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಈ ಎರಡು ಹಣ್ಣುಗಳನ್ನ ರಾತ್ರಿ ಮಲಗುವ ಮುನ್ನ ನೀರಿನಲ್ಲಿ ನೆನೆಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

Written by - Channabasava A Kashinakunti | Last Updated : Aug 15, 2021, 08:32 PM IST
  • ನೀವು ತೆಳ್ಳಗಿನ ದೇಹದ ಸಮಸ್ಯೆಗೆ ಒಳಗಾಗಿದ್ದೀರಾ?
  • ದೇಹ ತೂಕ ಹೆಚ್ಚಿಸಿಕೊಳ್ಳಲು ಆರೋಗ್ಯಕರ ಆಹಾರಸೇವಿಸುವುದು ಬಹಳ ಮುಖ್ಯ
  • ತೂಕ ಹೆಚ್ಚಿಸಿಕೊಳ್ಳಲು ಸರಿಯಾದ ಪ್ರಮಾಣದಲ್ಲಿ ಪ್ರೋಟೀನ್
Weight Gain Diet : ನೀವು ತೆಳ್ಳಗಿದ್ದೀರಾ? ಹಾಗಿದ್ರೆ ಇಂದೇ ಈ ಆಹಾರ ಸೇವಿಸಲು ಆರಂಭಿಸಿ ; ಸದೃಢ ದೇಹ ನಿಮ್ಮದಾಗಿಸಿಕೊಳ್ಳಿ  title=

ನೀವು ತೆಳ್ಳಗಿನ ದೇಹದ ಸಮಸ್ಯೆಗೆ ಒಳಗಾಗಿದ್ದೀರಾ? ಹಾಗಿದ್ರೆ ಈ ಸುದ್ದಿ ನಿಮ್ಮಗೆ ತುಂಬಾ ಉಪಯುಕ್ತವಾಗಿದೆ. ಅಂತಹ ಕೆಲವು ಸಲಹೆಗಳನ್ನು ನಾವು ನಿಮಗಾಗಿ ತಂದಿದ್ದೇವೆ, ಇದರ ಸಹಾಯದಿಂದ ನೀವು ತೂಕವನ್ನು ಹೆಚ್ಚಿಸಿಕೊಳ್ಳಬಹುದು. ವಾಸ್ತವವಾಗಿ, ಅನೇಕ ಜನರು ವೇಗವಾಗಿ ಹೆಚ್ಚುತ್ತಿರುವ ದೇಹ ತೂಕದ ಬಗ್ಗೆ ಚಿಂತಿತರಾಗಿದ್ದು ಮತ್ತು ತೂಕ ಇಳಿಸಿಕೊಳ್ಳಲು ಜಿಮ್‌ಗೆ ಹೋಗುತ್ತಾರೆ. ಅದೇ ರೀತಿ, ಕೆಲವು ಜನರು ದೌರ್ಬಲ್ಯದ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ ಮತ್ತು ತೂಕ ಹೆಚ್ಚಿಸಲು ಹಗಲು ರಾತ್ರಿ ವರ್ಕ್ ಔಟ್ ಮಾಡುತ್ತಾರೆ. ಅಂತವರಿಗಾಗಿ ಕೆಲವಿಷ್ಟು ಸಲಹೆಗಳು ಇಲ್ಲಿವೆ ನೋಡಿ.

ಕೆಲವೊಮ್ಮೆ ತೂಕ ಹೆಚ್ಚಿಸಿಕೊಳ್ಳಲು(Weight Gain) ಬಯಸುವ ಜನರು ದುಬಾರಿ ವೈದ್ಯಕೀಯ ಉತ್ಪನ್ನಗಳನ್ನು ಖರೀದಿಸುವ ಮಟ್ಟಕ್ಕೆ ಹೋಗುವುದನ್ನು ನಾವು ಕಾಣಬಹುದು, ಅದು ಕೆಲವೊಮ್ಮೆ ದೇಹಕ್ಕೆ ಅಡ್ಡ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ನೀವು ಆರೋಗ್ಯಕರ ಆಹಾರಸೇವಿಸುವುದು ಬಹಳ ಮುಖ್ಯವಾಗಿದೆ. ಡಯಟ್ ತಜ್ಞರಾದ ಡಾ.ರಂಜನಾ ಸಿಂಗ್ ಅವರು ಕೇವಲ ಜಿಮ್‌ಗೆ ಹೋಗುವುದು ತೂಕ ಮತ್ತು ದೇಹವನ್ನು ದಣಿಸುವುದು ಸಾಕಾಗುವುದಿಲ್ಲ, ಇದಕ್ಕಾಗಿ ನೀವು ನಿಮ್ಮ ಆಹಾರದ ಮೇಲೆ ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಕೂದಲಿನ ಸಮಸ್ಯೆಗೆ ಮೊಟ್ಟೆಯನ್ನು ಹೀಗೆ ಬಳಸಿ, ಪಡೆಯಬಹುದು ಕೇಶ ಕಾಂತಿ

ತೂಕ ಹೆಚ್ಚಿಸಲು ಈ ಆಹಾರಗಳನ್ನ ಸೇವಿಸಿ

1. ಒಣದ್ರಾಕ್ಷಿ ಮತ್ತು ಅಂಜೂರ ಸೇವಿಸಿ 

ಅಂಜೂರದ ಹಣ್ಣು ಮತ್ತು ಒಣದ್ರಾಕ್ಷಿಗಳ(Dry Fruits) ಸಹಾಯದಿಂದ ನೀವು ದೇಹ ತೂಕ ಹೆಚ್ಚಿಸಿಕೊಳ್ಳಬಹುದು. ಡಾ.ರಂಜನಾ ಸಿಂಗ್ ಅವರು ಪ್ರತಿದಿನ ಒಂದೇ ಪ್ರಮಾಣದಲ್ಲಿ ಬೆರಳೆಣಿಕೆಯಷ್ಟು ಒಣದ್ರಾಕ್ಷಿ ಮತ್ತು ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ದೇಹ ತೂಕ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಈ ಎರಡು ಹಣ್ಣುಗಳನ್ನ ರಾತ್ರಿ ಮಲಗುವ ಮುನ್ನ ನೀರಿನಲ್ಲಿ ನೆನೆಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

2. ಮೊಟ್ಟೆ ಸೇವನೆ ತುಂಬಾ ಅಗತ್ಯ

ಡಾ.ರಂಜನಾ ಸಿಂಗ್ ಅವರ ಪ್ರಕಾರ, ತೂಕ ಹೆಚ್ಚಿಸಿಕೊಳ್ಳಲು(Gain weight) ಸರಿಯಾದ ಪ್ರಮಾಣದಲ್ಲಿ ಪ್ರೋಟೀನ್ ತೆಗೆದುಕೊಳ್ಳುವುದು ಬಹಳ ಮುಖ್ಯ. ಮೊಟ್ಟೆಯಲ್ಲಿ ಕೊಬ್ಬು ಮತ್ತು ಕ್ಯಾಲೋರಿಗಳು ಅಧಿಕವಾಗಿದ್ದು, ಇದು ತೂಕವನ್ನು ವೇಗವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಆಹಾರದಲ್ಲಿ ಪ್ರತಿದಿನ ಒಂದು ಮೊಟ್ಟೆಯನ್ನು ಸೇವಿಸಿ. ಇದರ ಹೊರತಾಗಿ, ಮೀನು, ಚಿಕನ್ ಮತ್ತು ಮಟನ್ ಅನ್ನು ಪ್ರೋಟೀನ್‌ನ ಉತ್ತಮ ಆಹಾರವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ : Benefits of Milk Dates : ಹಾಲು, 2 ಖರ್ಜೂರದಲ್ಲಿದೆ ಪುರುಷರ ಆರೋಗ್ಯ : ಪ್ರತಿದಿನ ಈ ಸಮಯದಲ್ಲಿ ಸೇವಿಸಿ ಪಡೆಯಿರಿ ಪ್ರಯೋಜನ!

3. ಆಲೂಗಡ್ಡೆ ಸೇವಿಸಿ 

ಡಾ.ರಂಜನಾ ಸಿಂಗ್ ಹೇಳುವಂತೆ ತರಕಾರಿಗಳ ರಾಜ ಆಲೂಗಡ್ಡೆ(Potato)ಯಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‌ ಕಂಡುಬರುತ್ತವೆ. ಸಿಪ್ಪೆ ಸುಲಿದ ಆಲೂಗಡ್ಡೆ ಪ್ರೋಟೀನ್, ಫೈಬರ್, ಖನಿಜಗಳು ಮತ್ತು ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಇದನ್ನು ನಿಯಮಿತವಾಗಿ ಆಹಾರದಲ್ಲಿ ಸೇವಿಸುವುದರಿಂದ ತೂಕವು ವೇಗವಾಗಿ ಹೆಚ್ಚಾಗುತ್ತದೆ. ವಿಶೇಷವಾಗಿ ಬೇಯಿಸಿದ ಆಲೂಗಡ್ಡೆಯನ್ನು ತೂಕ ಹೆಚ್ಚಿಸುವಲ್ಲಿ ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ.

4. ಬಾಳೆಹಣ್ಣಿನಿಂದ ತೂಕ ಹೆಚ್ಚಿಸಿ

ಬಾಳೆಹಣ್ಣು(Banana) ತಿನ್ನುವುದು ತೂಕ ಹೆಚ್ಚಿಸಲು ಆರೋಗ್ಯಕರ ವಿಧಾನಗಳಲ್ಲಿ ಒಂದು ಎನ್ನುತ್ತಾರೆ ಆಹಾರ ತಜ್ಞರಾದ ಡಾ.ರಂಜನಾ ಸಿಂಗ್. ಇದು ಹೇರಳವಾದ ಕ್ಯಾಲೊರಿ ಮತ್ತು ಉತ್ತಮ ಕೊಬ್ಬನ್ನು ಹೊಂದಿರುತ್ತದೆ, ಇದು ದೇಹಕ್ಕೆ ಶಕ್ತಿಯನ್ನು ನೀಡುವುದಲ್ಲದೆ, ತೂಕವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ತೂಕ ಹೆಚ್ಚಿಸಲು ಜನರು ಬಾಳೆಹಣ್ಣು ಮತ್ತು ಹಾಲನ್ನು ಒಟ್ಟಿಗೆ ತೆಗೆದುಕೊಳ್ಳಬಹುದು. ಇದಲ್ಲದೇ ಬಾಳೆಹಣ್ಣಿನ ಶೇಕ್ ಕೂಡ ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News