ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ ಜಿರಳೆ ಸಮಸ್ಯೆಯಿಂದ ಶಾಶ್ವತ ಮುಕ್ತಿ ಪಡೆಯಬಹುದು

ಜಿರಳೆಗಳ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅವುಗಳನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಿಸುವುದು ಅವಶ್ಯಕ. ಇಲ್ಲದಿದ್ದರೆ ಫುಡ್ ಪಾಯಿಸನ್ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. 

Written by - Ranjitha R K | Last Updated : Feb 23, 2022, 10:25 AM IST
  • ಜಿರಳೆ ಸಮಸ್ಯೆಯಿಂದ ಶಾಶ್ವತ ಪರಿಹಾರ ಹೇಗೆ ?
  • ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಸಿ ಜಿರಳೆ ಓಡಿಸಬಹುದು
  • ಜಿರಳೆಗಳನ್ನು ತೊಡೆದುಹಾಕಲು 5 ಸುಲಭ ಮಾರ್ಗಗಳು
ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ ಜಿರಳೆ ಸಮಸ್ಯೆಯಿಂದ ಶಾಶ್ವತ ಮುಕ್ತಿ ಪಡೆಯಬಹುದು  title=
ಜಿರಳೆಗಳನ್ನು ತೊಡೆದುಹಾಕಲು 5 ಸುಲಭ ಮಾರ್ಗಗಳು (file photo)

ಬೆಂಗಳೂರು : ಜಿರಳೆ ಭಾರತದ ಪ್ರತಿಯೊಂದು ಮನೆಯಲ್ಲೂ ಕಂಡುಬರುವ ಅನಗತ್ಯ ಜೀವಿ. ಇದು ಕೊಳಚೆಯಲ್ಲಿ ವಾಸಿಸುತ್ತದೆ. ಈ ಜಿರಳೆಗಳು (Cockroach)ಅನೇಕ ರೋಗಗಳ ಅಪಾಯವನ್ನು ತಂದೊಡ್ಡುತ್ತದೆ. ಮನೆಯ ಅಡಿಗೆ ಮನೆ ಮತ್ತು ಸಿಂಕ್ ಜಿರಳೆಗಳ ನೆಚ್ಚಿನ ಸ್ಥಳಗಳಾಗಿರುತ್ತವೆ. ಅವು ಆಹಾರ ಪದಾರ್ಥಗಳನ್ನು ಕಲುಷಿತಗೊಳಿಸುತ್ತವೆ. 

ಜಿರಳೆಗಳನ್ನು ತೊಡೆದುಹಾಕಲು 5 ಸುಲಭ ಮಾರ್ಗಗಳು :
ಜಿರಳೆಗಳ (Cockroach)ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅವುಗಳನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಿಸುವುದು ಅವಶ್ಯಕ. ಇಲ್ಲದಿದ್ದರೆ ಫುಡ್ ಪಾಯಿಸನ್ (Food Poisoning)ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. 

1. ಲವಂಗ
ಲವಂಗವು (Clove) ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದು ಬಾಯಿಯ ದುರ್ವಾಸನೆ, ಶೀತಗಳನ್ನು ಗುಣಪಡಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜಿರಳೆಯನ್ನು (Cockroach) ಸಹ ಅದರಿಂದ ಓಡಿಸಬಹುದು ಎನ್ನುವುದು ಬಹುಶಃ ಬಹಳಷ್ಟು ಮಂದಿಗೆ ತಿಳಿದಿರಲಿಕ್ಕಿಲ್ಲ. ಲವಂಗದ ಕೆಲವು ತುಂಡುಗಳನ್ನು ಮನೆಯ ಮೂಲೆಗಳಲ್ಲಿ ಇರಿಸಿದರೆ ಜಿರಳೆಗಳು ಓಡಿಹೋಗುತ್ತವೆ.

ಇದನ್ನೂ ಓದಿ  : ಹಸಿರು ತರಕಾರಿಗಳ ಸೇವನೆಯಿಂದ ಕಡಿಮೆಯಾಗುತ್ತದೆಯೇ ಹೃದಯಾಘಾತದ ಅಪಾಯ ?

2. ಸೀಮೆ ಎಣ್ಣೆ
ಜಿರಳೆಗಳೂ ಸೀಮೆ ಎಣ್ಣೆಯ (Kerosene Oil) ವಾಸನೆಯನ್ನು ಇಷ್ಟಪಡುವುದಿಲ್ಲ ಮತ್ತು ಅವು ಅದರಿಂದ ಓಡಿಹೋಗುತ್ತವೆ. ಮನೆಯಲ್ಲಿ ಜಿರಳೆಗಳು ಕಾಣಿಸಿಕೊಳ್ಳದಂತೆ, ನೆಲ ಒರೆಸುವಾಗ ಸ್ವಲ್ಪ ಸೀಮೆ ಎಣ್ಣೆಯನ್ನು ಸೇರಿಸಿಕೊಳ್ಳಿ. ಮನೆಯ ಮೂಲೆ ಮೂಲೆಗೂ ಇದನ್ನೂ ಸಿಂಪಡಿಸಿ. ಇಲ್ಲಿ ಜಿರಳೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತವೆ. 

3. ಪಲಾವ್ ಎಲೆ 
ಆಹಾರದ ರುಚಿಯನ್ನು ಹೆಚ್ಚಿಸಲು ಪಲಾವ್ ಎಲೆಯನ್ನು (Bay leaf)  ಬಳಸಲಾಗುತ್ತದೆ, ಆದರೆ ಜಿರಳೆಗಳನ್ನು ತೊಡೆದುಹಾಕಲು ಇದು ರಾಮಬಾಣ.  ಜಿರಳೆಗಳು ಈ  ಎಲೆಗಳ ವಾಸನೆಯನ್ನು ಸಹಿಸುವುದಿಲ್ಲ.  ಈ  ಎಲೆಗಳನ್ನು ಪುಡಿಮಾಡಿ ಮತ್ತು ಅವುಗಳನ್ನು ಮನೆಯಲ್ಲಿ ಅಲ್ಲಲ್ಲಿ ಇರಿಸಿದರೆ ಮನೆಯೊಳಗೆ  ಜಿರಳೆಗಳು ಬರುವುದಿಲ್ಲ.  

ಇದನ್ನೂ ಓದಿ  : ರಾತ್ರಿ ಹೊತ್ತು ನೀರು ಕುಡಿಯುವ ಅಭ್ಯಾಸ ನಿಮಗೂ ಇದ್ದರೆ, ಈ ವಿಚಾರ ತಿಳಿದಿರಲಿ

5. ಹೌಸ್ ಕ್ಲೀನಿಂಗ್
ಜಿರಳೆಗಳು ಕೊಳಕು ಸ್ಥಳಗಳಲ್ಲಿ ವಾಸಿಸುತ್ತವೆ ಮತ್ತು ಅವುಗಳು ತಮ್ಮ ಮೊಟ್ಟೆಗಳನ್ನು ಇಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಅಡುಗೆ ಮನೆಯ ಸಿಂಕ್, ಬಾತ್ ರೂಂ,  ಮನೆಯ ಮೂಲೆಗಳನ್ನು ಸ್ವಚ್ಛಗೊಳಿಸಿದರೆ ಅಲ್ಲಿ ಜಿರಳೆ ಕಾಣಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News