ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸುತ್ತದೆ ಈ ನೀರು ! ಬಳಸುವ ವಿಧಾನ ಮಾತ್ರ ಹೀಗಿರಬೇಕು

Tea Leaves for Premature White Hair:ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸಲು ಈ ನೀರನ್ನು ಬಳಸಿದರೆ ಸಾಕು. ತಲೆಯಲ್ಲಿ ಕಾಣುವುದೇ ಇಲ್ಲ ಒಂದೂ ಬಿಳಿ ಕೂದಲು. 

Written by - Ranjitha R K | Last Updated : Aug 14, 2023, 11:46 AM IST
  • ಸುಂದರವಾಗಿ ಕಾಣಬೇಕು ಎನ್ನುವುದು ಪ್ರತಿಯೊಬ್ಬರ ಆಸೆ.
  • ಮುಖದ ಸೌಂದರ್ಯದಲ್ಲಿ ಕೂದಲು ಬಹಳ ಮುಖ್ಯ ಪಾತ್ರ ವಹಿಸುತ್ತದೆ.
  • ಚಹಾ ಎಲೆಗಳ ಸಹಾಯದಿಂದ ಬಿಳಿ ಕೂದಲನ್ನು ಕಪ್ಪಾಗಿಸಿ
ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸುತ್ತದೆ ಈ ನೀರು !  ಬಳಸುವ ವಿಧಾನ ಮಾತ್ರ ಹೀಗಿರಬೇಕು  title=

Tea Leaves for Premature White Hair : ಸುಂದರವಾಗಿ ಕಾಣಬೇಕು ಎನ್ನುವುದು ಪ್ರತಿಯೊಬ್ಬರ ಆಸೆ. ಅದಕ್ಕಾಗಿಯೇ ಸಾಕಷ್ಟು ಹಣ ಮೀಸಲಿಡುವವರು ಕೂಡಾ ಇದ್ದಾರೆ. ಸುಂದರವಾಗಿ ಕಾಣಬೇಕು ಎನ್ನುವಾಗ ಕೂದಲಿನ ಸೌಂದರ್ಯ ಕೂಡಾ ಬಹಳ ಮುಖ್ಯವಾಗುತ್ತದೆ. ಮುಖದ ಸೌಂದರ್ಯದಲ್ಲಿ ಕೂದಲು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ 20 ರಿಂದ 25 ವರ್ಷ ವಯಸ್ಸಿನಲ್ಲೇ ಬಿಳಿ ಕೂದಲು ಮೂಡುವುದು ಸಾಮಾನ್ಯ ಸಮಸ್ಯೆಯಾಗಿ ಬಿಟ್ಟಿದೆ. ಇದಕ್ಕೆ ನಮ್ಮ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಕಾರಣವಾಗಿರುತ್ತದೆ. ಬಿಳಿ ಕೂದಲಿನಿಂದ ಅನೇಕ ಯುವಕರು ಮುಜುಗರ ಮತ್ತು ಕಡಿಮೆ ಆತ್ಮವಿಶ್ವಾಸವನ್ನು ಎದುರಿಸಬೇಕಾಗುತ್ತದೆ.  

ಚಹಾ ಎಲೆಗಳ ಸಹಾಯದಿಂದ ಬಿಳಿ ಕೂದಲನ್ನು ಕಪ್ಪಾಗಿಸಿ : 
ಬಿಳಿ ಕೂದಲನ್ನು ಕಪ್ಪಾಗಿಸಲು ಚಹಾ ಎಲೆಗಳು ತುಂಬಾ ಉಪಯುಕ್ತವಾಗಿದೆ. ಭಾರತದಲ್ಲಿ ನೀರಿನ ನಂತರ ಚಹಾವು ಎರಡನೇ ಅತಿ ಹೆಚ್ಚು ಸೇವಿಸುವ ಪಾನೀಯವಾಗಿದೆ. ಇದೀಗ ಈ ಚಹಾವನ್ನು ಬಳಸಿಯೇ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಕೂದಲಿಗೆ ಚಹಾವನ್ನು ಬಳಸುವುದು ಬಹಳ ಸುಲಭ. 

ಇದನ್ನೂ ಓದಿ : ಸ್ತನ್ಯಪಾನ ಆಹಾರ: ಹಾಲುಣಿಸುವ ತಾಯಂದಿರಿಗೆ 5 ಆಹಾರಗಳು

ಚಹಾ ಎಲೆಯು ಹೇಗೆ ಪ್ರಯೋಜನಕಾರಿಯಾಗಿದೆ? :
ಎಲ್ಲಾ ಪೋಷಕಾಂಶಗಳು ಚಹಾ ಎಲೆಗಳಲ್ಲಿ ಕಂಡುಬರುತ್ತವೆ. ಅದರ ಸಹಾಯದಿಂದ ನಿಮ್ಮ ಕೂದಲಿನ ಆರೋಗ್ಯವನ್ನು ಸುಧಾರಿಸಬಹುದು. ಇವುಗಳಲ್ಲಿ ಸಾರಜನಕ ಶೇ.4, ಪೊಟ್ಯಾಷಿಯಂ ಶೇ.0.25 ಮತ್ತು ರಂಜಕ ಶೇ.0.24 ಕಂಡುಬರುತ್ತದೆ.  ಚಹಾ ಎಲೆಗಳು ನೈಸರ್ಗಿಕ ಕಪ್ಪು ಬಣ್ಣವನ್ನು ಹೊಂದಿರುತ್ತವೆ. ಅದರ ಸಹಾಯದಿಂದ ಬಿಳಿ ಕೂದಲನ್ನು ತೊಡೆದುಹಾಕಲು ಸುಲಭವಾಗುತ್ತದೆ.  ಆದರೆ ಇದನ್ನೂ ಬಳಸುವ ವಿಧಾನ ತಿಳಿದಿರಬೇಕು. 

ಕೂದಲಿಗೆ ಚಹಾ ಎಲೆಗಳನ್ನು ಬಳಸುವುದು ಹೇಗೆ? : 
ಚಹಾ  ಪುಡಿಯನ್ನು ನೇರವಾಗಿ ಕೂದಲಿಗೆ  ಹಚ್ಚುವುದಲ್ಲ. ಅದನ್ನು ಕುಡಿಸಿದ ನೀರನ್ನು ಕೂದಲಿಗೆ ಬಳಸಬೇಕು. 

1. ಇದಕ್ಕಾಗಿ ಗ್ಯಾಸ್ ಸ್ಟೌವ್ ಮೇಲೆ  ಒಂದು ಪಾತ್ರೆಯಲ್ಲಿ ನೀರನ್ನು  ತೆಗೆದುಕೊಂಡು ಅದನ್ನು ಕುದಿಸಿ. 
2. ಈಗ ಅದರಲ್ಲಿ 4 ರಿಂದ 5 ಟೀ ಚಮಚ ಚಹಾ ಪುಡಿ ಹಾಕಿ, 5 ನಿಮಿಷಗಳವರೆಗೆ ಕುದಿಸಿ.
3. ಇದರ ಪರಿಣಾಮ ಇನ್ನೂ ಹೆಚ್ಚಾಗಬೇಕಾದರೆ 1 ಕಪ್ ಕಾಫಿಯನ್ನು ಮಿಶ್ರಣ ಮಾಡಿ.
4. ಈ ಎರಡೂ ಮಿಶ್ರಣವನ್ನು ಚೆನ್ನಾಗಿ ಕುದಿಸಿ. ನೀರು ಮೊದಲಿಗಿಂತ ಅರ್ಧದಷ್ಟು ಆಗುವವರೆಗೆ ಕುದಿಸಿ.
5. ಈಗ ಗ್ಯಾಸ್ ಆಫ್ ಮಾಡಿ ಮತ್ತು ತಣ್ಣಗಾಗಲು ಬಿಡಿ.
6. ಈಗ ಈ ಟೀ ನೀರಿನಿಂದ ಕೂದಲನ್ನು ತೊಳೆಯಿರಿ. ಆದರೆ ನೆನೆಪಿರಲಿ ಈ ಸಂದರ್ಭದಲ್ಲಿ ಶಾಂಪೂ ಅಥವಾ ಸೋಪು ಹಚ್ಚಬಾರದು. 
7. ಈ ಪ್ರಕ್ರಿಯೆಯನ್ನು ವಾರಕ್ಕೆ ಎರಡು ಬಾರಿ ಪ್ರಯತ್ನಿಸಬಹುದು.

ಇದನ್ನೂ ಓದಿ : ನೀವು ಹೆಚ್ಚು ಜೇನುತುಪ್ಪವನ್ನು ಸೇವಿಸುತ್ತಿದ್ದೀರಾ? ಬಿಪಿ ಬರುವುದು ಖಚಿತ.. ಯಾಕೆ ಗೊತ್ತಾ?

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News