Beurer India ಬ್ರಾಂಡ್ ಅಂಬಾಸಿಡರ್ ಆಗಿ ಸೌರವ್ ಗಂಗೂಲಿ ನೇಮಕ : ಮೇಡ್ ಇನ್ ಇಂಡಿಯಾ ಬ್ಲಡ್ ಗ್ಲೂಕೋಸ್ ಮಾನಿಟರ್ ಬಿಡುಗಡೆ

ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಂಪನಿ ಈ ಕುರಿತು ಮಾಹಿತಿ ನೀಡಿದೆ.ಮಾರುಕಟ್ಟೆ ವಿಸ್ತರಿಸುವ ಉದ್ದೇಶದೊಂದಿಗೆ Beurer India ಭಾರತೀಯ ಮಾರುಕಟ್ಟೆಗೆಂದೇ ರೂಪಿತವಾಗಿರುವ ಹೆಲ್ತ್ ಡಿವೈಸ್ ಅನ್ನು ಪರಿಚಯಿಸಿದೆ.

Written by - Ranjitha R K | Last Updated : May 22, 2024, 10:02 AM IST
  • ಸೌರವ್ ಗಂಗೂಲಿ Beurer India PVT Ltd ಬ್ರಾಂಡ್ ಅಂಬಾಸಿಡರ್
  • ಹೋಂ ಹೆಲ್ತ್ ಮತ್ತು ವೆಲ್ ನೆಸ್ ವಲಯದಲ್ಲಿ ವಿಸ್ತರಣೆ
  • ಮೇಡ್ ಇನ್ ಇಂಡಿಯಾ ಬ್ಲಡ್ ಗ್ಲೂಕೋಸ್ ಮಾನಿಟರ್ ಬಿಡುಗಡೆ
Beurer India ಬ್ರಾಂಡ್ ಅಂಬಾಸಿಡರ್ ಆಗಿ ಸೌರವ್ ಗಂಗೂಲಿ ನೇಮಕ : ಮೇಡ್ ಇನ್ ಇಂಡಿಯಾ ಬ್ಲಡ್ ಗ್ಲೂಕೋಸ್ ಮಾನಿಟರ್ ಬಿಡುಗಡೆ title=

ಬೆಂಗಳೂರು : ಕ್ರಿಕೆಟಿಗ ಸೌರವ್ ಗಂಗೂಲಿಯನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ Beurer India PVT Ltd ನೇಮಕ ಮಾಡಿದೆ. ಈ ಮೂಲಕ ಭಾರತದ ಹೋಂ ಹೆಲ್ತ್ ಮತ್ತು ವೆಲ್ ನೆಸ್ ವಲಯದಲ್ಲಿ ವಿಸ್ತರಣೆಯ ಯೋಜನೆಯನ್ನು ಪ್ರಕಟಿಸಿದೆ. ಮಧುಮೇಹ ನಿರ್ವಹಣೆಯಲ್ಲಿ ಕಂಪನಿ ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದು, ಮೇಡ್ ಇನ್ ಇಂಡಿಯಾ ಬ್ಲಡ್ ಗ್ಲೂಕೋಸ್ ಮಾನಿಟರ್ ಅನ್ನು ಹೊರ ತಂದಿರುವುದಾಗಿ ಘೋಷಿಸಿದೆ. 

ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಂಪನಿ ಈ ಕುರಿತು ಮಾಹಿತಿ ನೀಡಿದೆ.ಮಾರುಕಟ್ಟೆ ವಿಸ್ತರಿಸುವ ಉದ್ದೇಶದೊಂದಿಗೆ Beurer India ಭಾರತೀಯ ಮಾರುಕಟ್ಟೆಗೆಂದೇ ರೂಪಿತವಾಗಿರುವ ಹೆಲ್ತ್ ಡಿವೈಸ್ ಅನ್ನು ಪರಿಚಯಿಸಿದೆ.

ಇದನ್ನೂ ಓದಿ :  Health Tips: ಈ ಕಷಾಯ ಸೇವಿಸಿದ್ರೆ ಅಜೀರ್ಣ & ಹೊಟ್ಟೆನೋವು ಮಂಗಮಾಯವಾಗುತ್ತದೆ! 

ಈ ಬಗ್ಗೆ ಮಾತನಾಡಿದ Beurer Indiaದ ನಿರ್ದೇಶಕ ಸ್ಟಾನ್ಲಿ ಜೋಸೆಫ್, ಕೇವಲ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಮಾತ್ರವಲ್ಲ, ಅಗತ್ಯವನ್ನು ಮೀರಿದ ನಿಟ್ಟಿನಲ್ಲಿ ಹೊಸ ಮತ್ತು ಗುಣಮಟ್ಟದ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಹೊಸ ಬ್ಲಡ್ ಗ್ಲೂಕೋಸ್ ಮಾನಿಟರ್ ಅನ್ನು ಪರಿಚಯಿಸುವ ಮೂಲಕ ಕಂಪನಿಯು ಹೊಸತನಕ್ಕಾಗಿ ತುಡಿಯುವ ತನ್ನ ಬದ್ದತೆಯನ್ನು ಪ್ರದರ್ಶಿಸಿದೆ.ಇದು ಗ್ರಾಹಕ ಸ್ನೇಹಿ, ಕಡಿಮೆ ವೆಚ್ಚದೊಂದಿಗೆ ನಿಖರತೆ ಹೊಂದಿರುವ ಉಪಕರಣವಾಗಿದ್ದು, ಭಾರತೀಯ ಮಧುಮೇಹ ರೋಗಿಗಳಿಗೆ ಹೆಚ್ಚು ಉಪಯೋಗವಾಗಲಿದೆ ಎಂದು ಹೇಳಿದರು. 

ಸೌರವ್ ಗಂಗೂಲಿಯಂತಹ ಹೈ ಪ್ರೊಫೈಲ್ ವ್ಯಕ್ತಿಯನ್ನು ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿದ ವಿಷಯ ಬಗ್ಗೆ ಬೆಳಕು ಚೆಲ್ಲಿದ ಕಂಪನಿಯ  ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಲಿಲ್ ವಿ.ಎಸ್. ಗಂಗೂಲಿಯೊಂದಿಗಿನ   ಒಡನಾಟ ಕೇವಲ ಸಾಂಕೇತಿಕ ಅಲ್ಲ. ಭಾರತೀಯ ಗ್ರಾಹಕರನ್ನು ಆಳ ಮಟ್ಟದಲ್ಲಿ ತಲುಪುವ ಉದ್ದೇಶದ ಒಂದು ಭಾಗ ಇದಾಗಿದೆ ಎಂದು ಹೇಳಿದರು.ಎಲ್ಲಾ ಕಡೆ  ಗಂಗೂಲಿಗೆ ಇರುವ ಗೌರವ, ವಿಶ್ವಾಸ, ಕ್ರೀಡಾಳುವಾಗಿ ಅವರು ಮಾಡಿರುವ ಸಾಧನೆ ಮತ್ತು ಅವರಲ್ಲಿರುವ ನಾಯಕತ್ವ ಗುಣದ ಕಾರಣದಿಂದ ನಮ್ಮ ಹೊಸ ಹೆಲ್ತ್ ಸೊಲ್ಯುಶನ್ ಗಳಿಗೆ ಅವರೊಬ್ಬ ಪರಿಪಕ್ವ ರಾಯಭಾರಿ ಎನ್ನುವುದನ್ನು ಕಂಪನಿ ಮನಗಂಡಿದೆ ಎಂದು ಹೇಳಿದರು.  

ಇದನ್ನೂ ಓದಿ :ಆರೋಗ್ಯ ಸಮೃದ್ಧ ಗೋಡಂಬಿ: ನಿತ್ಯ ತಿಂದರೆ ಈ ಆರೋಗ್ಯ ಸಮಸ್ಯೆಗಳೂ ಶಾಶ್ವತ ದೂರ     

ಇನ್ನು ತನ್ನ ಹೊಸ ಜವಾಬ್ದಾರಿಯ ಬಗ್ಗೆ ಪ್ರತಿಕ್ರಿಸಿದ ಸೌರವ್ ಗಂಗೂಲಿ, ಕಂಪನಿಯ ರಾಯಭಾರಿಯಾಗುವ ಮೂಲಕ ತನ್ನ ಅಭಿಮಾನಿಗಳು ಮತ್ತು ಸಾರ್ವಜನಿಕರು ಆರೋಗ್ಯಕರ ಜೀವನ ಶೈಲಿ ಅನುಭವಿಸಲು ನೆರವಾಗುವ ಮತ್ತು ನಿಖರ ಮೆಡಿಕಲ್ ಉಪಕರಣಗಳಿಗೆ ಉತ್ತೇಜನ ನೀಡಲು ಅತ್ಯಂತ ಉತ್ಸಾಹಿಯಾಗಿದ್ದೇನೆ ಎಂದು ಹೇಳಿದರು. 

"ಆರೋಗ್ಯ ಮತ್ತು ಯೋಗಕ್ಷೇಮ" ನನಗೆ ಅತ್ಯಂತ ಇಷ್ಟವಾದ ವಿಚಾರ. ಆರೋಗ್ಯ ಕ್ಷೇತ್ರದಲ್ಲಿ ಜನರ ಸೇವೆಗೆ ಇಳಿದಿರುವ ಬೇರರ್ ಕಂಪನಿಯ ಉದ್ದೇಶಕ್ಕೆ ತನ್ನಿಂದ ಸಾಧ್ಯವಾಗುವ ಕೊಡುಗೆ ನೀಡಲು ಕಾತರನಾಗಿದ್ದೇನೆ ಎಂದಿದ್ದಾರೆ. 
ಈ ಹೊಸ  ಬ್ಲಡ್ ಗ್ಲೂಕೋಸ್ ಮಾನಿಟರ್ ನಾವು ಯಾವುದರತ್ತ ಗುರಿ ಇಟ್ಟು  ನಡೆಯುತ್ತಿದ್ದೇವೆ ಎನ್ನುವುದಕ್ಕೆ ಒಂದು ಉದಾಹರಣೆಯಾಗಿದೆ ಎಂದಿದ್ದಾರೆ. ಇದರಿಂದ ಗುಣಮಟ್ಟದ ಆರೋಗ್ಯದ ಉಪಕರಣ ಎಲ್ಲರಿಗೂ ಸುಲಭವಾಗಿ ಸಿಗಲಿದೆ ಎಂದು ಗಂಗೂಲಿ ಹೇಳಿದ್ದಾರೆ. 

ಇದನ್ನೂ ಓದಿ : ನಿತ್ಯ ಒಂದೇ ಒಂದು ಕರಿಮೆಣಸು ಸೇವಿಸಿ: ಮತ್ತೆಂದೂ ಬಾಧಿಸುವುದಿಲ್ಲ ಈ ಆರೋಗ್ಯ ಸಮಸ್ಯೆ

ಭಾರತೀಯ ಗ್ರಾಹಕರಿಗೆ ಆರೋಗ್ಯ ಉಪಕರಣಗಳು ಸುಲಭವಾಗಿ ಸಿಗುವಂತೆ ಮಾಡಲು ವಿತರಣಾ ಜಾಲಗಳನ್ನು ಬಲಪಡಿಸುವ ಕಂಪನಿಯ  ಮಾರುಕಟ್ಟೆಯ ರಣತಂತ್ರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿಸ್ತಾರವಾಗಿ ಹೇಳಲಾಯಿತು. ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮಾರುಕಟ್ಟೆ ವಿಸ್ತರಿಸುವ ಬಗ್ಗೆಯೂ ಮಾಹಿತಿ ನೀಡಲಾಯಿತು. 

“ಬೇರರ್ ಕಂಪನಿಯ (Beurer India) ಜಾಗತಿಕ ಕಾರ್ಯತಂತ್ರದಲ್ಲಿ ಭಾರತೀಯ ಮಾರುಕಟ್ಟೆಗೆ ವಿಶೇಷ ಸ್ಥಾನವಿದೆ. ಕೇವಲ ಉತ್ಪನ್ನಗಳಿಂದ ಅಷ್ಟೇ ಅಲ್ಲ, ಆರೋಗ್ಯ ಶಿಕ್ಷಣದಲ್ಲಿ ಮತ್ತು ಜಾಗೃತಿಯಲ್ಲಿ ಅರಿವು ಉಂಟು ಮಾಡುವ ವಲಯದಲ್ಲಿ  ಹೂಡಿಕೆ ಹೆಚ್ಚು ಮಾಡಲು ಕಂಪನಿ ಬದ್ದವಾಗಿದೆ ಎಂದು ಜೋಸೆಫ್ ಹೇಳಿದ್ದಾರೆ. 

ಮುಂಬರುವ ದಿನಗಳಲ್ಲಿ ಬೇರರ್ ಕಂಪನಿ ಆರೋಗ್ಯ ಶಿಕ್ಷಣ ಮತ್ತು ಆರೋಗ್ಯದ ಪ್ರಾಮುಖ್ಯತೆ ಬಗ್ಗೆ ಕೆಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಿದೆ. ಕಂಪನಿಯ ಉತ್ಪನ್ನಗಳನ್ನು ಬಳಸುವ ಮೂಲಕ ಸಮುದಾಯಗಳ ಜೊತೆ ಬೆರೆಯುವಿಕೆ, ಹೆಲ್ತ್ ಕ್ಯಾಂಪ್, ಆರೋಗ್ಯ ಕ್ಷೇತ್ರದ ವೃತ್ತಿಪರರೊಂದಿಗೆ ಸಹಯೋಗದ ಮೂಲಕ  ತರಬೇತಿ ಮತ್ತು ಬೆಂಬಲ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದ್ದಾರೆ.   

ಇದನ್ನೂ ಓದಿ :  Health benefits of banana: ಪ್ರತಿದಿನ ಒಂದೇ ಒಂದು ಬಾಳೆಹಣ್ಣು ತಿಂದ್ರೆ ಏನಾಗುತ್ತೆ ಗೊತ್ತಾ..?

ಬೇರರ್ ಕಂಪನಿಯು ಮೆಡಿಕಲ್ ಉಪಕರಣಗಳಾದ ಬ್ಲಡ್ ಪ್ರೆಶರ್ ಮಾನಿಟರ್,  ನೆಬ್ಯುಲೈಜರ್‌, ಇನ್‌ಫ್ರಾರೆಡ್ ಲೈಟ್‌ಗಳಂತಹ ಥೆರಪಿ ಉಪಕರಣ, ಸ್ಮಾರ್ಟ್ ಸ್ಕೇಲ್ ಮತ್ತು  ಹೀಟಿಂಗ್ ಆಯ್ಕೆಗಳಂತಹ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಶತಮಾನದ ಅನುಭವ ಹೊಂದಿರುವ ಬೇರರ್ ಕಂಪನಿ  ಆರೋಗ್ಯ ಮತ್ತು ಯೋಗ ಕ್ಷೇಮದ ಕ್ಷೇತ್ರದಲ್ಲಿ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಹೊಸತನಕ್ಕೆ ಹೆಸರುವಾಸಿಯಾದ ಬ್ರ್ಯಾಂಡ್ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News