Type 2 Diabetes: ಮಧುಮೇಹಿಗಳು ತಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ, ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಕೆಲವು ನೈಸರ್ಗಿಕ ವಿಧಾನಗಳಿವೆ. ತಜ್ಞರ ಪ್ರಕಾರ, ತುಳಸಿ, ಆಲಿವ್ ಮತ್ತು ಮಧುನಾಶಿನಿ ಮುಂತಾದ ಸಸ್ಯಗಳ ಹಸಿರು ಎಲೆಗಳು ಮಧುಮೇಹದ ಸಮಸ್ಯೆಯಲ್ಲಿ ನಿಮಗೆ ಪ್ರಯೋಜನವನ್ನು ನೀಡುತ್ತವೆ.
ಮಧುಮೇಹ ನಿಯಂತ್ರಿಸಲು ಸಹಾಯಕ ಈ ಹಸಿರು ಎಲೆಗಳು:
1. ಆಲಿವ್ ಎಲೆಗಳು:
ಆಲಿವ್ ಎಲೆಗಳನ್ನು ಜಗಿಯುವುದು ಸಹ ಮಧುಮೇಹಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಟೈಪ್ 2 ಡಯಾಬಿಟಿಸ್ ರೋಗಿಗಳು (Type 2 Diabetes Patients) ಆಲಿವ್ ಎಲೆಗಳನ್ನು ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, 2013 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಆಲಿವ್ ಎಲೆಗಳ ಸೇವನೆಯು ಇನ್ಸುಲಿನ್ ಪ್ರತಿರೋಧವನ್ನು ಸುಧಾರಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಅಧ್ಯಯನದಲ್ಲಿ, 46 ಜನರಿಗೆ ತಿನ್ನಲು ಆಲಿವ್ ಎಲೆಗಳನ್ನು ನೀಡಲಾಯಿತು. ಇದರಲ್ಲಿ ಆಲಿವ್ ಎಲೆಗಳು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ ಎಂದು ಕಂಡುಬಂದಿದೆ.
ಇದನ್ನೂ ಓದಿ- Diabetes ರೋಗಿಗಳಿಗೆ ಭಾರೀ ಪ್ರಯೋಜನಕಾರಿ ಮನೆಯಲ್ಲಿಯೇ ಮಾಡಬಹುದಾದ ಈ ಖಾದ್ಯ !
2. ಸಿಹಿ ತುಳಸಿ :
ಸ್ಟೀವಿಯಾ ಎಂದರೆ ಸಿಹಿ ತುಳಸಿ ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. 2018 ರ ಅಧ್ಯಯನದಲ್ಲಿ, ಸಿಹಿ ತುಳಸಿ ಸೇವಿಸುವ ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ (Blood Sugar Level) ಕಡಿಮೆ ಇರುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ (AHA) ಮತ್ತು ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ (ADA) ಪ್ರಕಾರ, ಸಿಹಿ ತುಳಸಿ ಎಲೆಗಳ ಸೇವನೆಯು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.
3. ಟರ್ನಿಪ್ ಎಲೆಗಳು:
ಟರ್ನಿಪ್ ಸೊಪ್ಪಿನಲ್ಲಿ ಅಂದರೆ ಅದರ ಎಲೆಗಳಲ್ಲಿ ನಾರಿನ ಪ್ರಮಾಣ ಹೆಚ್ಚು. ಅಧ್ಯಯನದ ಪ್ರಕಾರ, ಟೈಪ್ 1 ಮಧುಮೇಹ ಹೊಂದಿರುವ ಜನರು ಫೈಬರ್ ಅನ್ನು ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಟೈಪ್ 2 ಡಯಾಬಿಟಿಸ್ ರೋಗಿಗಳಲ್ಲಿ ಟರ್ನಿಪ್ ಎಲೆಗಳನ್ನು ಅಗಿಯುವುದು ರಕ್ತದಲ್ಲಿನ ಸಕ್ಕರೆ, ಲಿಪಿಡ್ ಮತ್ತು ಇನ್ಸುಲಿನ್ ಮಟ್ಟವನ್ನು ಸುಧಾರಿಸುತ್ತದೆ.
ಇದನ್ನೂ ಓದಿ- Diabetes Patients : ಡಯಾಬಿಟಿಸ್ ಇರುವವರೆ ಉಪಾಹಾರದಲ್ಲಿ ತಪ್ಪದೆ ಸೇವಿಸಿ ಈ ಆಹಾರಗಳನ್ನ!
4. ಮಧುನಾಶಿನಿ ಎಲೆಗಳು:
ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಮಧುನಾಶಿನಿ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. 2013 ರ ಅಧ್ಯಯನದ ಪ್ರಕಾರ, ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ 18 ತಿಂಗಳ ಕಾಲ ಮಧುನಾಶಿನಿ ಎಲೆಗಳನ್ನು ನೀಡಿದಾಗ, ಇನ್ಸುಲಿನ್ ತೆಗೆದುಕೊಂಡವರಿಗಿಂತ ಅವರಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ತಿಳಿದುಬಂದಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.