ದೇಹ ನೀಡುವ ಈ ಸಂಕೇತ ಮಾಮೂಲಿಯಂತೆಯೇ ಕಾಣುತ್ತದೆ !ಆದರೆ ಇದು ಲಿವರ್ ಡ್ಯಾಮೇಜ್ ಲಕ್ಷಣ

Liver damage Symptoms : ಯಕೃತ್ತಿನ ಹಾನಿಯ ಆರಂಭಿಕ ರೋಗಲಕ್ಷಣಗಳನ್ನು ಗುರುತಿಸಲು ಕಷ್ಟವಾಗುತ್ತದೆ.ಆದರೆ ಲಿವರ್ ನ ಆರೋಗ್ಯ ಕೆಡುತ್ತಿದೆ ಎನ್ನುವಾಗ ದೇಹದಲ್ಲಿ ಕೆಲವು ಬದಲಾವಣೆಗಳು ಕಾಣಿಸಲು ಆರಂಭಿಸುತ್ತದೆ.

Written by - Ranjitha R K | Last Updated : May 27, 2024, 03:25 PM IST
  • ಯಕೃತ್ತು ದೇಹದ ಪ್ರಮುಖ ಭಾಗವಾಗಿದೆ.
  • ಯಕೃತ್ತು ದೇಹದಲ್ಲಿ 500 ಕ್ಕೂ ಹೆಚ್ಚು ಕಾರ್ಯಗಳನ್ನು ನಿರ್ವಹಿಸುತ್ತದೆ
  • ಕಲ್ಮಶವನ್ನು ಫಿಲ್ಟರ್ ಮಾಡುವ,ದೇಹವನ್ನು ನಿರ್ವಿಷಗೊಳಿಸುತ್ತದೆ.
ದೇಹ ನೀಡುವ ಈ ಸಂಕೇತ ಮಾಮೂಲಿಯಂತೆಯೇ ಕಾಣುತ್ತದೆ !ಆದರೆ ಇದು ಲಿವರ್ ಡ್ಯಾಮೇಜ್ ಲಕ್ಷಣ title=

ಬೆಂಗಳೂರು : Liver damage Symptoms : ಯಕೃತ್ತು ದೇಹದ ಪ್ರಮುಖ ಭಾಗವಾಗಿದೆ.ಯಕೃತ್ತು ದೇಹದಲ್ಲಿ 500 ಕ್ಕೂ ಹೆಚ್ಚು ಕಾರ್ಯಗಳನ್ನು ನಿರ್ವಹಿಸುತ್ತದೆ.ಇದು ದೇಹದ ಕಲ್ಮಶವನ್ನು ಫಿಲ್ಟರ್ ಮಾಡುವ,ದೇಹವನ್ನು ನಿರ್ವಿಷಗೊಳಿಸುತ್ತದೆ.ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಮತ್ತು ಪ್ರೋಟೀನ್‌ಗಳನ್ನು ತಯಾರಿಸುವ ಕೆಲಸ ಕೂಡಾ ಲಿವರ್ ನದ್ದೇ. 

ಆದರೆ, ನಿರಂತರ ಕಳಪೆ ಆಹಾರ ಮತ್ತು ಅನಾರೋಗ್ಯದ ಕಾರಣದಿಂದಾಗಿ, ಹೆಚ್ಚಿನ ಪ್ರಮಾಣದ ಔಷಧಿಗಳು ಯಕೃತ್ತಿನ ಹಾನಿಯನ್ನು ಉಂಟುಮಾಡುತ್ತವೆ.ಯಕೃತ್ತಿನ ಹಾನಿಯ ಆರಂಭಿಕ ರೋಗಲಕ್ಷಣಗಳನ್ನು ಗುರುತಿಸಲು ಕಷ್ಟವಾಗುತ್ತದೆ.ಆದರೆ, ಲಿವರ್ ನ ಆರೋಗ್ಯ ಕೆಡುತ್ತಿದೆ ಎನ್ನುವಾಗ ದೇಹದಲ್ಲಿ ಕೆಲವು ಬದಲಾವಣೆಗಳು ಕಾಣಿಸಲು ಆರಂಭಿಸುತ್ತದೆ.ಇದನ್ನು ಸರಿಯಾಗಿ ಗಮನಿಸಿದರೆ ಲಿವರ್ ಡ್ಯಾಮೇಜ್ ಆಗುತ್ತಿದೆ ಎನ್ನುವುದನ್ನು ಆರಂಭಿಕ ಹಂತದಲ್ಲಿಯೇ ಕಂಡು ಹಿಡಿಯಬಹುದು. 

ಇದನ್ನೂ ಓದಿ : ಮಜ್ಜಿಗೆ ಜೊತೆ ಈ ಎಲೆಯ ರಸ ಕುಡಿದರೆ ಸಾಕು, ಯುರಿಕ್ ಆಸಿಡ್ ಹರಳುಗಳ ಜೊತೆಗೆ ಕಿಡ್ನಿ ಸ್ಟೋನ್ ಕೂಡಾ ಕರಗುವುದು!

ಯಕೃತ್ತಿನ ಹಾನಿಯ 5 ಆರಂಭಿಕ ಚಿಹ್ನೆಗಳು:
ಸಾಮಾನ್ಯ ವಿಶ್ರಾಂತಿಯ ನಂತರವೂ ಹೋಗದಿರುವ ಅತಿಯಾದ ಆಯಾಸವು ಯಕೃತ್ತಿನ ಹಾನಿಯ ಸಂಕೇತವಾಗಿರಬಹುದು.ಹಾನಿಗೊಳಗಾದ ಯಕೃತ್ತು ದೇಹಕ್ಕೆ ಶಕ್ತಿಯನ್ನು ಒದಗಿಸಲು ಸಾಕಷ್ಟು ಪ್ರೋಟೀನ್ ಮತ್ತು ಇತರ ಪೋಷಕಾಂಶಗಳನ್ನು ಉತ್ಪಾದಿಸಲು ಸಾಧ್ಯವಾಗದ ಕಾರಣ ಇದು ಸಂಭವಿಸುತ್ತದೆ.

ಹಸಿವಾಗದಿರುವುದು :
ನೀವು ಆರೋಗ್ಯಕರ ಆಹಾರವನ್ನೇ ತಿನ್ನುತ್ತಿದ್ದರೂ ಸಹ, ಹಸಿವಿನ ಕೊರತೆ ಅಥವಾ ತೂಕ ನಷ್ಟ ಆಗುವುದು ಯಕೃತ್ತಿನ ಸಮಸ್ಯೆಗಳ ಸಂಕೇತವಾಗಿರಬಹುದು. ಹಾನಿಗೊಳಗಾದ ಯಕೃತ್ತು ಆಹಾರದಿಂದ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ಸಾಧ್ಯವಾಗದ ಕಾರಣ ಹೀಗಾಗುತ್ತದೆ. 

ಹೊಟ್ಟೆ ನೋವು :
ಹೊಟ್ಟೆಯ ಮೇಲಿನ ಬಲ ಭಾಗದಲ್ಲಿ ನೋವು ಅಥವಾ ಅಸ್ವಸ್ಥತೆಯನ್ನು ಅನುಭವಿಸುವುದು ಯಕೃತ್ತಿನ ಹಾನಿಯ ಸಂಕೇತವಾಗಿದೆ.ಈ ನೋವು ಜೋರಾಗಿರಬಹುದು ಅಥವಾ ಮಂದವಾಗಬಹುದು.ಕೆಲವೊಮ್ಮೆ ಈ ನೋವು ಭುಜದ ಬ್ಲೇಡ್ ವರೆಗೆ ಹರಡುತ್ತದೆ.

ಇದನ್ನೂ ಓದಿ : ಮೊಸರಿಗೆ ಒಂದು ಚಮಚ ಈ ಬೀಜದ ಪುಡಿಯನ್ನು ಬೆರೆಸಿ ಸೇವಿಸಿದರೆ ಜೋತು ಬಿದ್ದಿರುವ ಹೊಟ್ಟೆ ಚಪ್ಪಟೆಯಾಗುವುದು ಗ್ಯಾರಂಟಿ !

ಚರ್ಮ ಮತ್ತು ಕಣ್ಣುಗಳ ಹಳದಿ :
ಚರ್ಮ ಮತ್ತು ನಿಮ್ಮ ಕಣ್ಣುಗಳ ಬಿಳಿಭಾಗವು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದರೆ,ಇದು ಯಕೃತ್ತಿನ ಹಾನಿಯ ಪ್ರಮುಖ ಲಕ್ಷಣವಾಗಿದೆ. ಬಿಲಿರುಬಿನ್ ಎಂಬ ವಸ್ತುವಿನ ಮಟ್ಟವು ರಕ್ತದಲ್ಲಿ ಹೆಚ್ಚಾದಾಗ ಹೀಗಾಗುತ್ತದೆ. 

ಗಾಢ ಬಣ್ಣದ ಮೂತ್ರ :
ನಿಮ್ಮ ಮೂತ್ರವು ಗಾಢ ಬಣ್ಣಕ್ಕೆ ತಿರುಗಿದರೆ ಅದು ಯಕೃತ್ತಿನ ಹಾನಿಯ ಸಂಕೇತವಾಗಿರಬಹುದು.ಆದರೆ ನಿರ್ಜಲೀಕರಣದಿಂದಾಗಿಯೂ ಮೂತ್ರದ ಬಣ್ಣವೂ ಬದಲಾಗಬಹುದು ಎಂಬುದನ್ನು ನೆನಪಿನಲ್ಲಿಡಿ. ಸಾಕಷ್ಟು ಪ್ರಮಾಣದ ನೀರು ಕುಡಿದರೂ ಮೂತ್ರವು ನೀರಿನಂತೆ ಸ್ಪಷ್ಟವಾಗದಿದ್ದರೆ ಅದು ಯಕೃತ್ತಿನ ಸಮಸ್ಯೆಯ ಸಂಕೇತವಾಗಿರುತ್ತದೆ. 

ಸೂಚನೆ:ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.  ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ವೈದ್ಯರನ್ನು ಸಂಪರ್ಕಿಸಿ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News