ಪೋಷಕಾಂಶಗಳ ಆಗರವಾಗಿರುವ ಈ ಆಹಾರ ಸೇವನೆಯಿಂದಲೂ ಕೂಡ ತೂಕ ಇಳಿಯುತ್ತದೆ

ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳ ಒಂದು ಸಾಮಾನ್ಯ ಸಮಸ್ಯೆಯಾಗಿದೆ.  ಪ್ರತಿಯೊಬ್ಬರೂ ದೇಹದ ತೂಕ ಕಡಿಮೆ ಮಾಡಲು ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಆದರೂ ಸೂಕ್ತ ಪರಿಹಾರ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸುವುದೂ ಉಂಟೂ.

Written by - Zee Kannada News Desk | Last Updated : Mar 21, 2021, 09:24 PM IST
  • ಶಾರೀರಿಕ ಸಮಸ್ಯೆಯ ಕೊರತೆಯ ಕಾರಣ ತೂಕ ಹೆಚ್ಚಾಗುತ್ತದೆ.
  • ಜಂಕ್ ಫುಡ್ ಸೇವನೆಯಿಂದಲೂ ಕೂಡ ಬೊಜ್ಜು ಬೆಳೆಯುತ್ತದೆ.
  • ಆದರೆ, ಕೆಲ ಆರೋಗ್ಯಕರ ಆಹಾರ ಸೇವನೆಯಿಂದಲೂ ಕೂಡ ಬೊಜ್ಜು ಕಡಿಮೆಯಾಗುತ್ತದೆ.
ಪೋಷಕಾಂಶಗಳ ಆಗರವಾಗಿರುವ ಈ ಆಹಾರ ಸೇವನೆಯಿಂದಲೂ ಕೂಡ ತೂಕ ಇಳಿಯುತ್ತದೆ title=
Health Tips (File Photo)

Health Tips - ಶಾರೀರಿಕ ಶ್ರಮದ ಕೊರತೆ ಮತ್ತು ಜಂಕ್ ಫುಡ್ ಸೇವನೆಯಿಂದಾಗಿ ತೂಕ ಹೆಚ್ಚಾಗುತ್ತದೆ. ಆದರೆ ಕೆಲವು ಸರಳ ವಿಷಯಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ(Health) ನಮ್ಮದಾಗಿಸಿಕೊಳ್ಳಬಹುದು ಎಂದು ವೈದ್ಯರು ಹೇಳುತ್ತಾರೆ. 

ಜನರು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವ ಮುಖ್ಯವಾಗಿದೆ. ಇದು ತೂಕ ನಷ್ಟವನ್ನು ಸಾಕಷ್ಟು ಸುಲಭಗೊಳಿಸುತ್ತದೆ. ಆದ್ದರಿಂದ ಪ್ರತೀ ಋತುವಿನಲ್ಲಿ ನಿಮ್ಮ ತೂಕವನ್ನು ನಿಯಂತ್ರಿಸುವಲ್ಲಿ ಸಹಾಯವಾಗುವಂತಹ ಕೆಲವು ವಿಷಯಗಳ ಕುರಿತು ನಿಮಗೆ ತಿಳಿಸುತ್ತಿದ್ದೇವೆ.

ಮೆಂತ್ಯೆ
ಮೆಂತ್ಯೆ ಕೇವಲ ಪ್ರೋಟೀನ್ ಭರಿತ ಮಾತ್ರವಲ್ಲ, ಇದು ತೂಕ ನಷ್ಟದಲ್ಲೂ ಸಹಕಾರಿಯಾಗುತ್ತದೆ. ಇದರ ಉತ್ತಮ ಫಲಿತಾಂಶಕ್ಕಾಗಿ ಮಧ್ಯಾಹ್ನ ಒಂದರಿಂದ ಎರಡು ಚಮಚ ಮೆಂತ್ಯೆಯನ್ನು ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಮೆಂತ್ಯೆಯನ್ನು ತೆಗೆದು ನೀರನ್ನು ಮಾತ್ರ ಸೇವಿಸಿ. ಮೆಂತ್ಯೆ ಸಾಕಷ್ಟು ಆಂಟಿ ಆಕ್ಸಿಡೆಂಟ್ ಇದ್ದು, ಇದು ಚಯಾಪಚಯವನ್ನು ಸರಿಪಡಿಸಲು ಮತ್ತು ತೂಕ ನಷ್ಟದಲ್ಲಿ ಸಹಾಯ ಮಾಡುತ್ತವೆ.

ಕಿವೀ ಹಣ್ಣು (Kiwi)
ತೂಕ ನಷ್ಟಕ್ಕೆ ಕಿವಿ (Kiwi) ಹಣ್ಣು ಅತ್ಯಂತ ಪರಿಣಾಮಕಾರಿಯಾಗಿದೆ. ಇದನ್ನು ಡಯಾಬಿಟಿಕ್ ರೋಗಿಗಳಿಗೆ ಉತ್ತಮ ಎಂದು ಹೇಳಲಾಗುತ್ತದೆ. ಕಿವಿ(Kiwi) ಹಣ್ಣು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಜೊತೆಗೆ ದೇಹದ ತೂಕವನ್ನೂ ಕಡಿಮೆ ಮಾಡುತ್ತದೆ.

ಇದನ್ನೂ ಓದಿ- Onion Peel: ಈರುಳ್ಳಿ ಸಿಪ್ಪೆಯ ಪ್ರಯೋಜನಗಳನ್ನು ತಿಳಿದರೆ ನೀವು ಖಂಡಿತಾ ಅದನ್ನು ಎಸೆಯುವುದಿಲ್ಲ

ಕಿತ್ತಳೆ (Orange)
ನಿಂಬೆಯಂತೆ ಕಿತ್ತಳೆ ಸಹ ಫೈಬರ್, ವಿಟಮಿನ್ 'ಸಿ', ಫೋಲೆಟ್ ಮತ್ತು ಪೊಟ್ಯಾಸಿಯಂಗಳನ್ನೂ ಒಳಗೊಂಡಿರುತ್ತದೆ ಮತ್ತು ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದರಲ್ಲಿ ಸಾಖಷ್ಟು ಪ್ರೋಟೀನ್ ಸಹ ಇದ್ದು, ಪ್ರತಿದಿನ ಕಿತ್ತಳೆ ರಸ ಸೇವಿಸುವುದರಿಂದ ಅತಿ ಕಡಿಮೆ ಸಮಯದಲ್ಲಿ ತೂಕ ಕಡಿಮೆ ಮಾಡಬಹುದು.

ಇದನ್ನೂ ಓದಿ-ಸೊಳ್ಳೆ ಕಾಟ ತಪ್ಪಿಸಲು ಮನೆ ಸುತ್ತ ಈ ಗಿಡಗಳಿರಲಿ

ಸೀಬೆಹಣ್ಣು (Guava)
ಸೀಬೆಹಣ್ಣು ಯಾರಿಗೆ ತಾನೇ ಇಷ್ಟ ಇಲ್ಲ? ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸೀಬೆಹಣ್ಣನ್ನು ಇಷ್ಟ ಪಟ್ಟು ತಿನ್ನುತ್ತಾರೆ. ಆದರೆ, ಸೀಬೆಹಣ್ಣಿನ ಸೇವನೆಯಿಂದ ತೂಕ ಕಳೆದುಕೊಳ್ಳಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ಸೀಬೆಹಣ್ಣು ಕೇವಲ ತೂಕ ಕಳೆದು ಕೊಳ್ಳುವುದು ಮಾತ್ರವಲ್ಲ ಆರೋಗ್ಯಕರ ಚರ್ಮಕ್ಕೂ ಒಳ್ಳೆಯದು. ನಿಮಗೂ ತೂಕ ಕಡಿಮೆ ಮಾಡುವ ಇಚ್ಛೆಯಿದ್ದರೆ ತಪ್ಪದೆ ಸೀಬೆಹಣ್ಣನ್ನು ಸೇವಿಸಿ.

ಇದನ್ನೂ ಓದಿ-Golgappa Dieting : ಒಂದು ಪ್ಲೇ ಟ್ ಪಾನಿಪೂರಿಯಿಂದಲೂ Weight Loss ಸಾಧ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News