Breastfeeding ಮಾಡುವ ತಾಯಿಗೆ ಈ ಆಹಾರಗಳು ಅತ್ಯಗತ್ಯ, ಮಗುವಿಗೆ ಸಹ ಪ್ರಯೋಜನಕಾರಿ

ಮಗುವಿಗೆ ಹಾಲುಣಿಸುವ ತಾಯಿಗೆ ಪ್ರೋಟೀನ್, ವಿಟಮಿನ್ ಇ, ವಿಟಮಿನ್ ಸಿ, ವಿಟಮಿನ್ ಡಿ, ವಿಟಮಿನ್ ಎ, ಬಿ 12, ಸೆಲೆನಿಯಮ್ ಮತ್ತು ಸತು ಸೇರಿದಂತೆ ಅನೇಕ ಪೋಷಕಾಂಶಗಳು ಬೇಕಾಗುತ್ತವೆ.

Last Updated : Nov 27, 2020, 03:49 PM IST
  • ಹಾಲುಣಿಸುವ ತಾಯಿ ಈ ವಿಷಯಗಳನ್ನು ನೆನಪಿನಲ್ಲಿಡಿ
  • ನವಜಾತ ಮಕ್ಕಳ ಉತ್ತಮ ಬೆಳವಣಿಗೆಗಾಗಿ ತಾಯಿಗೆ ಈ ಆಹಾರಗಳು ಅತ್ಯಗತ್ಯ.
  • ನವಜಾತ ಶಿಶುವಿಗೆ ಪೋಷಕಾಂಶಗಳು ಏಕೆ ಅಗತ್ಯವೆಂದು ತಿಳಿಯಿರಿ
Breastfeeding ಮಾಡುವ ತಾಯಿಗೆ ಈ ಆಹಾರಗಳು ಅತ್ಯಗತ್ಯ, ಮಗುವಿಗೆ ಸಹ ಪ್ರಯೋಜನಕಾರಿ title=
File Image

ಬೆಂಗಳೂರು: ನವಜಾತ ಶಿಶುವಿಗೆ ತಾಯಿಯ ಹಾಲು ಅಗತ್ಯ. ಕನಿಷ್ಠ ಆರು ತಿಂಗಳವರೆಗೆ ಮಗುವಿಗೆ ಸ್ತನ್ಯಪಾನ ಅಥವಾ ಎದೆಹಾಲು ಕುಡಿಸುವುದು ಬಹಳ ಮುಖ್ಯ. ಏಕೆಂದರೆ ತಾಯಿಯ ಹಾಲು ಪೌಷ್ಠಿಕಾಂಶದ ಅಂಶಗಳಿಂದ ತುಂಬಿರುತ್ತದೆ. ಇದು ಮಕ್ಕಳ ದೈಹಿಕ ಆರೋಗ್ಯ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಕೊಬ್ಬು, ಸಕ್ಕರೆ, ನೀರು ಮತ್ತು ಪ್ರೋಟೀನ್ (Protien) ನ ಅತ್ಯುತ್ತಮ ಸಮತೋಲನವನ್ನು ಹೊಂದಿರುತ್ತದೆ. ಸ್ತನ್ಯಪಾನವು ಮಕ್ಕಳಲ್ಲಿ ಹೃದ್ರೋಗ ಮತ್ತು ಮಧುಮೇಹದಂತಹ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಲುಣಿಸುವ ತಾಯಂದಿರು ಅಂತಹ ಪೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ಸಹ ಸೇವಿಸಬೇಕು, ಇದು ಪೌಷ್ಠಿಕಾಂಶದ ಎದೆ ಹಾಲಿನ ಉತ್ಪಾದನೆಗೆ ಸಹಾಯ ಮಾಡುತ್ತದೆ.

ಪೋಷಕಾಂಶಗಳು ಏಕೆ ಮುಖ್ಯ ?
ಹಾಲುಣಿಸುವ ತಾಯಿಗೆ ಪ್ರೋಟೀನ್, ವಿಟಮಿನ್ ಇ, ವಿಟಮಿನ್ ಸಿ, ವಿಟಮಿನ್ ಡಿ, ವಿಟಮಿನ್ ಎ, ಬಿ 12, ಸೆಲೆನಿಯಮ್ ಮತ್ತು ಸತು ಸೇರಿದಂತೆ ಅನೇಕ ಪೋಷಕಾಂಶಗಳು ಬೇಕಾಗುತ್ತವೆ. ಹಾಲುಣಿಸುವ ಸಮಯದಲ್ಲಿ ಶಕ್ತಿಯ ಅವಶ್ಯಕತೆ ಸುಮಾರು 500 ಕ್ಯಾಲೊರಿಗಳಿಂದ ಹೆಚ್ಚಾಗುತ್ತದೆ. ಈ ಕಾರಣಕ್ಕಾಗಿ ತಾಯಂದಿರು ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರಗಳು ಅವಶ್ಯಕ.

ಕ್ಯಾರೆಟ್ ಮತ್ತು ಪಾಲಕ್:

ನವಜಾತ ಶಿಶುವಿನ ತಾಯಿ ಕ್ಯಾರೆಟ್ (Carrot) ಮತ್ತು ಪಾಲಕ್ ಸೊಪ್ಪು ಸೇವಿಸಬೇಕು. ಏಕೆಂದರೆ ಮಗುವಿನ ಆರೋಗ್ಯ ಬೆಳವಣಿಗೆಯಲ್ಲಿ ವಿಟಮಿನ್-ಎ ಅವಶ್ಯಕವಾಗಿದೆ, ಇದು ತಾಯಿ ಮತ್ತು ಮಕ್ಕಳಿಗೆ ಪ್ರಯೋಜನಕಾರಿಯಾಗಿದೆ. ಕ್ಯಾರೆಟ್ ಮತ್ತು ಪಾಲಕ್ ಸೊಪ್ಪಿನಲ್ಲಿ ವಿಟಮಿನ್-ಎ ಕಂಡುಬರುತ್ತದೆ. ಪಾಲಕ್ ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿದ್ದು ಅದು ಮಗುವಿನ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಕ್ಯಾರೆಟ್‌ನಲ್ಲಿ ಆಲ್ಫಾ ಮತ್ತು ಬೀಟಾ ಕ್ಯಾರೋಟಿನ್ ಇದ್ದು, ಇದು ತಾಯಿಗೆ ಪ್ರಯೋಜನಕಾರಿಯಾಗಿದೆ.

ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗಾಗಿ ಮನೆಯಿಂದ ಹೊರಗೆ ಆಟ ಆಡುವುದು ಅತ್ಯಗತ್ಯ!

ಮೀನು :

ಸ್ತನ್ಯಪಾನ ಮಾಡುವ ಮತ್ತು ಗರ್ಭಿಣಿ ಮಹಿಳೆಯರಿಗೆ ಮೀನು ಪ್ರಯೋಜನಕಾರಿಯಾಗಿದೆ. ಸಾಲ್ಮನ್ ಮೀನು (Fish)ಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳ ಜೊತೆಗೆ ಪ್ರೋಟೀನ್ ಮತ್ತು ವಿಟಮಿನ್-ಡಿ ಇರುತ್ತದೆ. ನರಮಂಡಲದ ಬೆಳವಣಿಗೆಗೆ ಇದು ಮುಖ್ಯವಾಗಿದೆ.

ಕಿತ್ತಳೆ :

ನವಜಾತ ಶಿಶುವಿನ ತಾಯಿ ಕಿತ್ತಳೆ (Orange) ರಸವನ್ನು ಕುಡಿಯಬೇಕು. ಇದರಲ್ಲಿ ವಿಟಮಿನ್-ಸಿ ಇರುತ್ತದೆ. ಇದು ದೇಹವನ್ನು ಹೈಡ್ರೀಕರಿಸುವುದಕ್ಕೆ ಸಹಾಯ ಮಾಡುತ್ತದೆ.

ತನ್ನ ಮಗುವಿನ ಪಕ್ಕದಲ್ಲಿ ಏನೋ ಕಂಡು ಭೂತ ಮಲಗಿದೆ ಎಂದು ಭಾವಿಸಿದ ಮಹಿಳೆ, ಮುಂದೆ...!

ಬಾದಾಮಿ :

ತಾಯಿಯ ಆರೋಗ್ಯ ಮತ್ತು ನವಜಾತ ಶಿಶುವಿಗೆ ಬಾದಾಮಿ (Almond) ಮುಖ್ಯವಾಗಿದೆ. ಬಾದಾಮಿ ಮತ್ತು ಗೋಡಂಬಿ ಎದೆ ಹಾಲು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಪ್ರೋಟೀನ್, ಆಂಟಿಆಕ್ಸಿಡೆಂಟ್‌ಗಳು, ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ.

ಮೊಟ್ಟೆ :

ಮೊಟ್ಟೆಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಮೊಟ್ಟೆಯ (Egg) ಹಳದಿ ಲೋಳೆಯಲ್ಲಿ ವಿಟಮಿನ್ ಡಿ ತುಂಬಿದೆ, ಇದು ನವಜಾತ ಶಿಶುಗಳಿಗೆ ಅವಶ್ಯಕವಾಗಿದೆ. ಮೊಟ್ಟೆಗಳಲ್ಲಿ ವಿಟಮಿನ್ ಎ, ವಿಟಮಿನ್ ಬಿ 12, ವಿಟಮಿನ್ ಡಿ, ವಿಟಮಿನ್ ಇ ಮತ್ತು ಫೋಲೇಟ್, ಸೆಲೆನಿಯಮ್, ಕೋಲೀನ್ ಮತ್ತು ಇತರ ಅನೇಕ ಖನಿಜಗಳಿವೆ.

Trending News