ಬೆಂಗಳೂರು : Flowers that improve men health : ಹೂವುಗಳನ್ನು ಅನೇಕ ರೀತಿಯ ತ್ವಚೆ ಮತ್ತು ಸೌಂದರ್ಯ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದಲ್ಲದೆ, ಮನೆಗಳನ್ನು ಅಲಂಕರಿಸಲು ಕೂಡಾ ಹೂವುಗಳನ್ನು ಬಳಸಲಾಗುತ್ತದೆ. ಮನೆಯ ಸೌಂದರ್ಯ ಹೆಚ್ಚಿಸುವ ಸಲುವಾಗಿಯೇ ಮನೆಯ ಮುಂದೆ, ತಾರಸಿಯ ಮೇಲೆ ಬಗೆ ಬಗೆಯ ಹೂವಿನ ಗಿಡಗಳನ್ನು ನೆಡಲಾಗುತ್ತದೆ. ಮನೆ ಮುಂದೆ ಬಣ್ಣ ಬಣ್ಣದ ಹೂವುಗಳಿದ್ದರೆ ಮನಸ್ಸಿಗೂ ಮುದ ನೀಡುತ್ತದೆ. ಆದರೆ ಇದೇ ಹೂವುಗಳ ಬಳಕೆಯಿಂದ ಆರೋಗ್ಯ ಸಂಬಂಧಿತ ರೋಗಗಳನ್ನು ಗುಣಪಡಿಸಬಹುದು. ಪುರುಷರ ಸಮಸ್ಯೆಗಳನ್ನು ಪರಿಹರಿಸಲು ಯಾವ ಹೂವುಗಳನ್ನು ಬಳಸಬಹುದು ಎನ್ನುವ ಮಾಹಿತಿ ಇಲ್ಲಿದೆ.
ಈ ಹೂವುಗಳನ್ನು ಬಳಸಿ ಪುರುಷರ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು :
ಚೆಂಡು ಹೂವು ಅಥವಾ ಗೊಂಡೆ ಹೂವು :
ಚೆಂಡು ಹೂವು ಅಥವಾ ಗೊಂಡೆ ಹೂವು ತಮ್ಮ ಸುಗಂಧದ ಮೂಲಕವೇ ಎಲ್ಲರನ್ನೂ ಆಕರ್ಷಿಸುತ್ತದೆ. ಇದು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಈ ಹೂವಿನ ದಳಗಳನ್ನು ಬಳಸುವುದರಿಂದ ಊತದ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಹೂವಿನ ದಳಗಳನ್ನು ಚೆನ್ನಾಗಿ ಪುಡಿಮಾಡಿ. ಈ ಪೇಸ್ಟ್ ಅನ್ನು ಊತದ ಮೇಲೆ ಹಚ್ಚಿ ಬ್ಯಾಂಡೇಜ್ ಅನ್ನು ಕಟ್ಟಿಕೊಳ್ಳಿ. ಇದರಿಂದ ಊತದ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಈ ಹೂವನ್ನು ಒಣಗಿಸಿ ಸೇವಿಸುವುದರಿಂದ ಪುರುಷರ ದೈಹಿಕ ದೌರ್ಬಲ್ಯವು ದೂರವಾಗುತ್ತದೆ. ಪುರುಷರಲ್ಲಿ ಸ್ಪೆರ್ಮಟೋರಿಯಾ ಎಂಬ ರೋಗವನ್ನು ತೆಗೆದುಹಾಕುವಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿದೆ.
ಇದನ್ನೂ ಓದಿ : ಬಿಳಿ ಉಪ್ಪಿನ ಸೇವನೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಈ ಪದಾರ್ಥ ಬಳಸಿ ಆಹಾರದಲ್ಲಿ ಉಪ್ಪಿನ ರುಚಿಯನ್ನು ಹೆಚ್ಚಿಸಿ!
ಬಾಳೆ ಹೂವು :
ಬಾಳೆಹೂವನ್ನು ಬಳಸುವುದರಿಂದ ಬಾಯಿ ಹುಣ್ಣು ಸಮಸ್ಯೆ ನಿವಾರಣೆಯಾಗುತ್ತದೆ. ಇದಕ್ಕಾಗಿ, ಹಸಿ ಬಾಳೆ ಹೂವುಗಳನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ. ಆ ಪುಡಿಯನ್ನು ಹುಣ್ಣುಗಳ ಮೇಲೆ ಹಚ್ಚಿದರೆ ಕೆಲವೇ ದಿನಗಳಲ್ಲಿ ಬಾಯಿ ಹುಣ್ಣಿನ ಸಮಸ್ಯೆ ನಿವಾರಣೆಯಾಗುತ್ತದೆ.
ದಾಳಿಂಬೆ ಹೂವು :
ದಾಳಿಂಬೆ ಹೂವುಗಳನ್ನು ಹಲ್ಲುಗಳನ್ನು ಸ್ವಚ್ಛಗೊಳಿಸಲು ಬಳಸಬಹುದು. ಒಸಡುಗಳನ್ನು ಬಲಪಡಿಸುವಲ್ಲಿ ಇದು ಪರಿಣಾಮಕಾರಿಯಾಗಿದೆ. ಇದಕ್ಕಾಗಿ ದಾಳಿಂಬೆ ಹೂಗಳನ್ನು ಕಿತ್ತು ಚೆನ್ನಾಗಿ ಒಣಗಿಸಿ. ಇದರ ನಂತರ, ಅದನ್ನು ಚೆನ್ನಾಗಿ ಪುಡಿಮಾಡಿ ಹಲ್ಲುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಇದು ಹಲ್ಲುಗಳನ್ನು ಹೆಚ್ಚು ಹೊಳೆಯುವಂತೆ ಮಾಡುತ್ತದೆ. ಒಸಡುಗಳನ್ನು ಬಲಪಡಿಸುತ್ತದೆ.
ದಾಸವಾಳದ ಹೂವು :
ಬೋಳು ತಲೆ ಸಮಸ್ಯೆಯಿಂದ ಬಳಲುತ್ತಿರುವ ಪುರುಷರಿಗೆ ದಾಸವಾಳದ ಹೂವು ತುಂಬಾ ಪರಿಣಾಮಕಾರಿ. ದಾಸವಾಳದ ಹೂವುಗಳನ್ನು ಚೆನ್ನಾಗಿ ಪುಡಿಮಾಡಿ ಪೇಸ್ಟ್ ಮಾಡಿಕೊಳ್ಳಿ. ಈಗ ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಸ್ವಲ್ಪ ಸಮಯದ ನಂತರ, ಸಾಮಾನ್ಯ ನೀರಿನಿಂದ ಸ್ವಚ್ಛಗೊಳಿಸಿ. ಇದನ್ನು ಕೆಲವು ದಿನಗಳ ಕಾಲ ಬಳಸುವುದರಿಂದ ಬೋಳು ಸಮಸ್ಯೆ ನಿವಾರಣೆಯಾಗುತ್ತದೆ. ಇದಲ್ಲದೆ, ಇದು ತಲೆಹೊಟ್ಟು ಸಮಸ್ಯೆಗಳನ್ನು ಸಹ ತೆಗೆದುಹಾಕುತ್ತದೆ.
ಇದನ್ನೂ ಓದಿ : ರಕ್ತದಲ್ಲಿನ ಹೆಚ್ಚುವರಿ ಸಕ್ಕರೆ ನಿವಾರಣೆಗೆ ಈ ಉಪ್ಪು ರಾಮಬಾಣ ಉಪಾಯ!
ಸದಾ ಪುಷ್ಪ :
ಸದಾ ಪುಷ್ಪ ಹೂವುಗಳನ್ನು ಬಳಸುವುದರಿಂದ ನಿಮ್ಮ ದುರ್ಬಲ ರೋಗನಿರೋಧಕ ಶಕ್ತಿಯನ್ನು ತೆಗೆದುಹಾಕಬಹುದು. ಅಲ್ಲದೆ, ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ಹೋಗಲಾಡಿಸಲು ಇದು ತುಂಬಾ ಪರಿಣಾಮಕಾರಿಯಾಗಿದೆ.
( ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ