ಈ ಲಕ್ಷಣಗಳು ಲಿವರ್ ಸಮಸ್ಯೆಯ ಸಂಕೇತವಾಗಿರುತ್ತದೆ ..! ಮಧುಮೇಹಿಗಳು ಹುಷಾರಾಗಿರಬೇಕು

ಮಧುಮೇಹ ರೋಗಿಗಳಲ್ಲಿ ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಯಿದ್ದರೆ, ಆರಂಭಿಕ ಸಮಯದಲ್ಲಿ ಕೆಲವು ಲಕ್ಷಣಗಳು ಗೋಚರಿಸುತ್ತವೆ. ಮತ್ತೊಂದೆಡೆ, ಯಕೃತ್ತಿನ ವೈಫಲ್ಯದ ಲಕ್ಷಣಗಳನ್ನು ಸರಿಯಾದ ಸಮಯದಲ್ಲಿ ಗುರುತಿಸಿದರೆ, ಸಮಸ್ಯೆ ಗಂಭೀರವಾಗುವುದನ್ನು ತಪ್ಪಿಸಬಹುದು. 

Written by - Ranjitha R K | Last Updated : May 27, 2022, 01:38 PM IST
  • ಮಧುಮೇಹದಿಂದಾಗಿ, ಗಂಭೀರ ಕಾಯಿಲೆಗಳಿಗೆ ತುತ್ತಾಗಬಹುದು.
  • ಗಂಭೀರ ಯಕೃತ್ತಿನ ಸಮಸ್ಯೆಗಳ ಅಪಾಯವನ್ನು ಕೂಡಾ ಎದುರಿಸಬೇಕಾಗುತ್ತದೆ.
  • ಮಧುಮೇಹ ರೋಗಿಗಳಲ್ಲಿ ಯಕೃತ್ತಿನ ಸಮಸ್ಯೆಯ ಲಕ್ಷಣಗಳು
ಈ  ಲಕ್ಷಣಗಳು  ಲಿವರ್ ಸಮಸ್ಯೆಯ ಸಂಕೇತವಾಗಿರುತ್ತದೆ ..! ಮಧುಮೇಹಿಗಳು ಹುಷಾರಾಗಿರಬೇಕು   title=
liver problem symptoms (file photo)

ಬೆಂಗಳೂರು : ಅಸಮತೋಲಿತ ಆಹಾರ ಮತ್ತು ಕಳಪೆ ಜೀವನಶೈಲಿಯಿಂದಾಗಿ ಜನರಲ್ಲಿ ಮಧುಮೇಹದ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಮಧುಮೇಹದಿಂದಾಗಿ, ಗಂಭೀರ ಕಾಯಿಲೆಗಳಿಗೆ ತುತ್ತಾಗಬಹುದು. ಮಧುಮೇಹ ರೋಗಿಗಳು ಹೃದಯ ಸಂಬಂಧಿ ಕಾಯಿಲೆಗಳ ಜೊತೆಗೆ ಗಂಭೀರ ಯಕೃತ್ತಿನ ಸಮಸ್ಯೆಗಳ ಅಪಾಯವನ್ನು ಕೂಡಾ ಎದುರಿಸಬೇಕಾಗುತ್ತದೆ. ಆದ್ದರಿಂದ ಮಧುಮೇಹ ರೋಗಿಗಳು ಯಕೃತ್ತು ಆರೋಗ್ಯಕರವಾಗಿರಿಸಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. 

ಮಧುಮೇಹ ರೋಗಿಗಳಲ್ಲಿ ಯಕೃತ್ತಿನ ಹಾನಿಯ ಲಕ್ಷಣಗಳು :
ಮಧುಮೇಹ ರೋಗಿಗಳಲ್ಲಿ ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಯಿದ್ದರೆ, ಆರಂಭಿಕ ಸಮಯದಲ್ಲಿ ಕೆಲವು ಲಕ್ಷಣಗಳು ಗೋಚರಿಸುತ್ತವೆ. ಮತ್ತೊಂದೆಡೆ, ಯಕೃತ್ತಿನ ವೈಫಲ್ಯದ ಲಕ್ಷಣಗಳನ್ನು ಸರಿಯಾದ ಸಮಯದಲ್ಲಿ ಗುರುತಿಸಿದರೆ, ಸಮಸ್ಯೆ ಗಂಭೀರವಾಗುವುದನ್ನು ತಪ್ಪಿಸಬಹುದು. ಮಧುಮೇಹ ರೋಗಿಗಳಲ್ಲಿ ಯಕೃತ್ತಿನ ವೈಫಲ್ಯದ ಲಕ್ಷಣಗಳೇನು ?  
1- ಜೀರ್ಣಕಾರಿ ತೊಂದರೆಗಳು
2- ಹೊಟ್ಟೆ ಮತ್ತು ಯಕೃತ್ತಿನಲ್ಲಿ ತೀವ್ರವಾದ ನೋವು
3- ಯಕೃತ್ತಿನ ಉರಿಯೂತ ಸಮಸ್ಯೆ
4- ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು 
5- ಹಠಾತ್ ತೂಕ ನಷ್ಟ
6- ಎಲ್ಲಾ ಸಮಯದಲ್ಲೂ ದಣಿವಾಗುವುದು 

ಇದನ್ನೂ ಓದಿ:  High Cholesterol Food: ಈ ವಸ್ತುಗಳು ಇದ್ದಕ್ಕಿದ್ದಂತೆ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು

ಮಧುಮೇಹಿಗಳು ಯಕೃತ್ತಿನ ಬಗ್ಗೆ ಈ ರೀತಿ ಕಾಳಜಿ ವಹಿಸಬೇಕು:
ಮಧುಮೇಹದ ಕಾಯಿಲೆಯಲ್ಲಿ ಆಹಾರ ಮತ್ತು ಜೀವನಶೈಲಿಯ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಮಧುಮೇಹದ ಸಮಯದಲ್ಲಿ ಆಹಾರಕ್ಕೆ ಸಂಬಂಧಿಸಿದಂತೆ ಅಜಾಗರೂಕತೆ ವಹಿಸಿದರೆ, ಹಲವಾರು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ, ಈ ರೋಗದಲ್ಲಿ, ಆಹಾರ ಕ್ರಮದ ಬಗ್ಗೆ ಕಾಳಜಿ ವಹಿಸಬೇಕು. ಈಕೆಳಗಿನ  ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಯಕೃತ್ತಿನ ಹಾನಿಯನ್ನು ತಪ್ಪಿಸಬಹುದು.
1-ಮಧುಮೇಹ ರೋಗಿಗಳು ಯಕೃತ್ತಿನ ಸಮಸ್ಯೆಗಳನ್ನು ತಪ್ಪಿಸಲು ತಮ್ಮ ರಕ್ತದಲ್ಲಿನ ಸಕ್ಕರೆಯನ್ನು ಕಾಲಕಾಲಕ್ಕೆ ಪರೀಕ್ಷಿಸಬೇಕು.
2- ಮದ್ಯಪಾನದಿನದ ದೂರವಿರಬೇಕು 
3-ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬೇಕು .
4- ತೂಕ ಹೆಚ್ಚಾಗಲು ಬಿಡಬೇಡಿ.
5. ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬೇಕು .
6-ಧೂಮಪಾನ ಮಾಡಬಾರದು 

ಇದನ್ನೂ ಓದಿ: Weight Loss Drink: ತೂಕ ಇಳಿಸಿಕೊಳ್ಳಲು ಈ ವಿಶೇಷ ಕಾಫಿ ಕುಡಿಯಿರಿ

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News