ನವದೆಹಲಿ: Health Benefits Of Clove - ನಮ್ಮ ಅಡುಗೆ ಮನೆಯಲ್ಲಿ ಸಾಂಬಾರ ಪದಾರ್ಥದ ರೂಪದಲ್ಲಿ ಬಳಕೆಯಾಗುವ ಹಾಗೂ ತುಂಬಾ ಸಾಮಾನ್ಯವಾಗಿ ಸಿಗುವ ಪದಾರ್ಥ ಎಂದರೆ ಅದು ಲವಂಗ. ಆಹಾರ ಪದಾರ್ಥಗಳಲ್ಲಿ ಸುವಾಸನೆ ಹಾಗೂ ರುಚಿ ಹೆಚ್ಚಿಸಲುಬಳಕೆಯಾಗುವ ಲವಂಗ ಸಾಕಷ್ಟು ಆಂಟಿ ಆಕ್ಸಿಡೆಂಟ್ ಹಾಗೂ ಆಂಟಿ ಬ್ಯಾಕ್ಟೀರಿಯಾ ಗುಣಗಳನ್ನು ಹೊಂದಿದೆ. ಇದು ಮೂಳೆಗಳನ್ನು ಗಟ್ಟಿಗೊಳಿಸುವುದರ ಜೊತೆಗೆ ಬ್ಲಡ್ ಶುಗರ್ ಲೆವಲ್ ಅನ್ನು ಕೂಡ ನಿಯಂತ್ರಿಸುತ್ತದೆ. ಲೀವರ್ ಅನ್ನು ಆರೋಗ್ಯವಂತವಾಗಿರಿಸಲು ಇದು ತುಂಬಾ ಸಹಕಾರಿಯಾಗಿದೆ. ಹೊಟ್ಟೆ ಅಲ್ಸರ್ ಗೂ ಕೂಡ ಇದು ರಾಮಬಾಣ.
ಫೈಬರ್ ಹಾಗೂ ಮ್ಯಾಂಗನೀಸ್ ನ ಆಗರವಾಗಿದೆ ಲವಂಗ
ನೋಡಲು ಗಾತ್ರದಲ್ಲಿ ತುಂಬಾ ಚಿಕ್ಕದಾದರೂ ಕೂಡ ಸ್ವಾಭಾವಿಕವಾಗಿ ಒಂದು ಬಿಸಿ ಪದಾರ್ಥವಾಗಿದೆ. ಹೀಗಾಗಿ ಲವಂಗ್ ಸೇವಿಸುವುದರಿಂದ ಮೈಯಲ್ಲಿ ಬಿಸಿ ಸಂಚಾರವಾಗುತ್ತದೆ. ಅದರಲ್ಲೂ ವಿಶೇಷವಾಗಿ ಹಲ್ಲು ನೋವು ನಿವಾರಣೆಗೆ ಒಂದು ರಾಮಬಾಣ ಚಿಕಿತ್ಸೆಯಾಗಿದೆ. ಒಂದು ಚಮಚೆ ಲವಂಗ್ ನಲ್ಲಿ ಸುಮಾರು ಎರಡು ಗ್ರಾಂ ಫೈಬರ್, 1 ಗ್ರಾಂ ಕಾರ್ಬ್ಸ್, 6 ಕ್ಯಾಲೋರಿ ಹಾಗೂ ನಿತ್ಯ ಬೇಕಾಗಿರುವ ಶೇ.55 ರಷ್ಟು ಮ್ಯಾಂಗನೀಸ್ ಹಾಗೂ ಶೇ.2 ರಷ್ಟು ವಿಟಮಿನ್ K ಇರುತ್ತದೆ. ಮೂಳೆಗಳನ್ನು ಗಟ್ಟಿಗೊಳಿಸುವುದರ ಜೊತೆಗೆ ಬ್ರೇನ್ ಫಂಕ್ಷನ್ ಉತ್ತಮಗೊಳಿಸಲು ಮ್ಯಾಂಗನೀಸ್ ಒಂದು ಅತ್ಯಾವಶ್ಯಕ ಖನಿಜ ಪದಾರ್ಥವಾಗಿದೆ.
ಒಂದು ಕುಡಿ ಲವಂಗ ಲಾಭ ಅನೇಕ
ಕ್ಯಾನ್ಸರ್ ನಿಂದ ರಕ್ಷಣೆ - ಲವಂಗ್ ನಲ್ಲಿ ಕಂಡುಬರುವ ಹಲವು ಕಂಪೌಂಡ್ ಗಳು ಕ್ಯಾನ್ಸರ್ ನಂತಹ ಮಾರಕ ಕಾಯಿಲೆಯಿಂದ ರಕ್ಷಣೆ ಒದಗಿಸುತ್ತದೆ ಎಂಬುದು ಹಲವಾರು ರಿಸರ್ಚ್ ನಿಂದ ಸಾಬೀತಾಗಿದೆ. ಈ ಕುರಿತು ನಡೆಸಲಾಗಿರುವ ಒಂದು ಟೆಸ್ಟ್ ಟ್ಯೂಬ್ ಸ್ಟಡಿ ಪ್ರಕಾರ, ಲವಂಗ ಟ್ಯೂಮರ್ ಬೆಳವಣಿಕೆಯನ್ನು ಕುಂಠಿತಗೊಳಿಸಿ ಕ್ಯಾನ್ಸರ್ ಕೋಶಗಳನ್ನು ನಷ್ಟಗೊಳಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಲವಂಗ್ ನಲ್ಲಿ ಕಂಡು ಬರುವ ಯುಜೆನಾಲ್ ಒಂದು ಆಂಟಿ ಕ್ಯಾನ್ಸರ್ ಪ್ರಾಪರ್ಟಿಯಾಗಿದೆ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಲವಂಗ್ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಕೂಡ ಹೌದು.
ಹೊಟ್ಟೆ ಅಲ್ಸರ್ ಗೆ ರಾಮಬಾಣ ಚಿಕಿತ್ಸೆ
ಲವಂಗ್ ನಲ್ಲಿ ಕಂಡು ಬರುವ ಹಲವು ಅಂಶಗಳು ಹೊಟ್ಟೆ ಅಲ್ಸರ್ ನಿವಾರಣೆಗೆ ತುಂಬಾ ಸಹಕಾರಿಯಾಗಿವೆ. ಹೊಟ್ಟೆ ಅಲ್ಸರ್ ಅನ್ನು ಪೇಸ್ಟಿಕ್ ಅಲ್ಸರ್ ಎಂದೂ ಕೂಡ ಕರೆಯಲಾಗುತ್ತದೆ ಹಾಗೂ ಲವಂಗ್ ನಲ್ಲಿ ಕಂಡು ಬರುವ ಎಣ್ಣೆ ಗ್ಯಾಸ್ಟ್ರಿಕ್ ಮ್ಯೂಕಸ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದ ಅಲ್ಸರ್ ನಿವಾರಣೆಗೆ ಸಹಕಾರಿಯಾಗುತ್ತದೆ.
ಬ್ಲಡ್ ಶುಗರ್ ನಿಯಂತ್ರಣದಲ್ಲಿರುತ್ತದೆ
ಲವಂಗ್ ನಲ್ಲಿ ಕಂಡುಬರುವ ಅಂಶಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸಲು ಸಹಕರಿಸುತ್ತವೆ. ಸಂತುಲಿತ ಭೋಜನದ ಜೊತೆಗೆ ಲವಂಗ್ ಸೇವನೆ ಬ್ಲಡ್ ಶುಗರ್ ಲೆವಲ್ ಅನ್ನು ನಿಯಂತ್ರಿಸಲು ಲಾಭಕಾರಿಯಾಗಿದೆ .
ಇದನ್ನು ಓದಿ-
ಲೀವರ್ ಗಾಗಿ ಉತ್ತಮ
ಲವಂಗ್ ನಲ್ಲಿ ಕಂಡು ಬರುವ ಯುಜೆನಾಲ್ ಲಿವರ್ ಗಾಗಿ ತುಂಬಾ ಲಾಭಕಾರಿಯಾಗಿದೆ ಹಾಗೂ ಫ್ಯಾಟಿ ಲಿವರ್ ಕಾಯಿಲೆಯನ್ನು ತಡೆಯುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಲೀವರ್ ಗೆ ತುಂಬಾ ಲಾಭಕಾರಿಯಾಗಿವೆ.
ಇದನ್ನು ಓದಿ-
ಪುರುಷರಿಗೆ ತುಂಬಾ ಲಾಭಕಾರಿ
ತಜ್ಞರು ಹೇಳುವ ಹಾಗೆ ಲವಂಗ್ ಸೇವನೆ ಪುರುಷರಲ್ಲಿ ಹಲವು ಲೈಂಗಿಕ ಸಮಸ್ಯೆಗಳನ್ನು ದೂರಗೊಳಿಸುತ್ತದೆ ಹಾಗೂ ಸ್ಪರ್ಮ್ ಕೌಂಟ್ ಹೆಚ್ಚಿಸಲು ಸಹಕರಿಸುತ್ತದೆ.
ಇದನ್ನು ಓದಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.