Health News: ನೀವೂ ಕೂಡ ಮೊಳಕೆಯೊಡೆದ ಮೆಂತ್ಯ ಹಾಗೂ ಹೆಸರುಬೇಳೆ ಸೇವಿಸುತ್ತೀರಾ? ಹಾಗಾದ್ರೆ ಈ ವರದಿ ಓದಿ

Health Care Tips: ಮೊಳಕೆಯೊಡೆದ ಮೆಂತ್ಯ ಮತ್ತು ಹೆಸರು ಕಾಳುಗಳನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿದ್ದರೂ, ಚಳಿಗಾಲದಲ್ಲಿ ಮೂರು ಬಗೆಯ ಜನರು ಇದನ್ನು ಸೇವಿಸುವುದರಿಂದ ದೂರವಿರಬೇಕು, ಇಲ್ಲದಿದ್ದರೆ ಅವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.  

Written by - Nitin Tabib | Last Updated : Dec 23, 2022, 10:38 PM IST
  • ಇದನ್ನು ಆಹಾರದಲ್ಲಿ ಸೇರಿಸುವುದರಿಂದ ಮಲಬದ್ಧತೆ, ಹೊಟ್ಟೆ ನೋವು ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.
  • ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿದ್ದರೂ, ಈ ಮೂರು ವಿಧದ ಜನರು ಚಳಿಗಾಲದಲ್ಲಿ ಇದರ ಸೇವನೆಯಿಂದ ದೂರವಿರಬೇಕು,
Health News: ನೀವೂ ಕೂಡ ಮೊಳಕೆಯೊಡೆದ ಮೆಂತ್ಯ ಹಾಗೂ ಹೆಸರುಬೇಳೆ ಸೇವಿಸುತ್ತೀರಾ? ಹಾಗಾದ್ರೆ ಈ ವರದಿ ಓದಿ  title=
Fenugreek Sprouts Side Effiects

Fenugreek Sprouts Side Effects: ಮೊಳಕೆಯೊಡೆದ ಮೆಂತ್ಯ ಮತ್ತು ಬೇಳೆ ಸೇವಿಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇವುಗಳಿಂದ ನಮ್ಮ ದೇಹವು ಅಗತ್ಯವಾದ ಪ್ರೋಟೀನ್ ಅನ್ನು ಪಡೆಯುತ್ತದೆ ಮತ್ತು ನಮ್ಮ ರೋಗನಿರೋಧಕ ಶಕ್ತಿಯು ಹೆಚ್ಚಾಗುತ್ತದೆ. ಮೊಳಕೆಯೊಡೆದ ಮೆಂತ್ಯ ಮತ್ತು ಹೆಸರು ಬೆಳೆಯ ಸಂಯೋಜನೆಯು ಮಧುಮೇಹ ಮತ್ತು ಬೊಜ್ಜಿನ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಮೆಂತ್ಯವು ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಇದನ್ನು ಆಹಾರದಲ್ಲಿ ಸೇರಿಸುವುದರಿಂದ ಮಲಬದ್ಧತೆ, ಹೊಟ್ಟೆ ನೋವು ಮತ್ತು ಅಜೀರ್ಣದಂತಹ  ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿದ್ದರೂ, ಈ ಮೂರು ವಿಧದ ಜನರು ಚಳಿಗಾಲದಲ್ಲಿ ಇದರ ಸೇವನೆಯಿಂದ ದೂರವಿರಬೇಕು, ಇಲ್ಲದಿದ್ದರೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಈ ಜನರು ಅಂತರ ಕಾಯ್ದುಕೊಳ್ಳಬೇಕು
1. ದೇಹವನ್ನು ಕಫ, ಪಿತ್ತ ಮತ್ತು ವಾತ ಎಂದು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ನೀವು ತುಂಬಾ ತಣ್ಣನೆಯ ಆಹಾರವನ್ನು ಸೇವಿಸಿದಾಗ ಅದು ದೇಹದಲ್ಲಿ ಕಫ ದೋಷವನ್ನು ಉಂಟುಮಾಡುತ್ತದೆ. ಈ ಕಾರಣದಿಂದಾಗಿ, ಮೂಗು ಸೋರುವಿಕೆ, ನೆಗಡಿ ಮತ್ತು ಶೀತದ ಸಮಸ್ಯೆಗಳು ಎದುರಾಗುತ್ತವೆ. ಮೊಳಕೆಯೊಡೆದ ಮೆಂತ್ಯ ಮತ್ತು ಮೂಂಗ್ ದಾಲ್ ಶೀತ ಪದಾರ್ಥಗಳಲ್ಲಿ ಶಾಮೀಲಾಗಿವೆ ಮತ್ತು ಇವುಗಳ ಸೇವನೆಯು ದೇಹದಲ್ಲಿ ತಂಪನ್ನು ಹೆಚ್ಚಿಸುತ್ತದೆ, ಆದ್ದರಿಂದ ಅವುಗಳನ್ನು ಶೀತ ಮತ್ತು ಜ್ವರ ಇರುವಾಗ ಸೇವಿಸಬಾರದು.

2. ದೇಹದಲ್ಲಿ ಬಿಳಿ ರಕ್ತ ಕಣಗಳು ಹೆಚ್ಚಾದಾಗ, ದೇಹದ ರೋಗನಿರೋಧಕ ಶಕ್ತಿ ಕುಸಿಯಲು ಪ್ರಾರಂಭಿಸುತ್ತದೆ. ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ, ನಾವು ಸುಲಭವಾಗಿ ಅನಾರೋಗ್ಯಕ್ಕೆ ಒಳಗಾಗುತ್ತೇವೆ. ಈ ಸಮಸ್ಯೆಯಲ್ಲೂ, ನಾವು ಮೊಳಕೆಯೊಡೆದ ಮೆಂತ್ಯ ಮತ್ತು ಹೆಸರುಬೇಳೆಯಿಂದ ದೂರವಿರಬೇಕು ಏಕೆಂದರೆ ಇವು ಬಿಳಿ ರಕ್ತ ಕಣಗಳನ್ನು ಮತ್ತಷ್ಟು ಹೆಚ್ಚಿಸುತ್ತವೆ ಮತ್ತು ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುತ್ತದೆ.

ಇದನ್ನೂ ಓದಿ-Corona ಹೊಸ ಅಪಾಯದ ನಡುವೆಯೇ ಬೂಸ್ಟರ್ ಡೋಸ್ ಪಡೆಯಲು ಸಿಕ್ತು ಮತ್ತೊಂದು ಆಯ್ಕೆ

3. ಸೌಮ್ಯವಾದ ಶೀತ ಇದ್ದಲ್ಲಿ  ಶ್ವಾಸಕೋಶಗಳು ಹೆಚ್ಚು ಸೋಂಕಿಗೆ ಒಳಗಾಗುತ್ತವೆ. ಈ ಸಮಯದಲ್ಲಿ ನಾವು ಮೊಳಕೆಗಳನ್ನು ತಿನ್ನುವುದರಿಂದ ದೂರವಿರಬೇಕು, ಏಕೆಂದರೆ ಅವು ಕಫವನ್ನು ಹೆಚ್ಚಿಸುತ್ತವೆ, ಆದರೆ ಶೀತ ವಾತಾವರಣದಲ್ಲಿ ನೀವು ಮೆಂತ್ಯ ಸೊಪ್ಪಿನಿಂದ ಮಾಡಿದ ಆಹಾರವನ್ನು ಸೇವಿಸಬಹುದು ಏಕೆಂದರೆ ಅದರ ಗುಣಧರ್ಮ ಬಿಸಿಯಾಗಿರುತ್ತದೆ.

ಇದನ್ನೂ ಓದಿ-Trending News: ಅದ್ವಿತೀಯ ಶಕ್ತಿಯುಳ್ಳ ಈ ಜೀವ ದಿಢೀರ್ ಮಾಯವಾಗುತ್ತದೆ, ಹುಡುಕಾಡಿದ್ರು ಸಿಗಲ್ಲ !

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News