Side Effects Of Salt: ನೀವು ಅವಶ್ಯಕತೆಗಿಂತ ಹೆಚ್ಚು ಉಪ್ಪು ಸೇವಿಸುತ್ತಿರುವಿರಿ ಎನ್ನುತ್ತವೆ ಈ 6 ಸಂಕೇತಗಳು

Side Effects Of Salt - ಹಲವು ಬಾರಿ ನಮಗೆ ನಾವು ಅಗತ್ಯಕ್ಕಿಂತ ಹೆಚ್ಚು ಉಪ್ಪನ್ನು (Salt) ಸೇವಿಸುತ್ತಿದ್ದೇವೆ ಎಂಬುದು ತಿಳಿದಿರುವುದಿಲ್ಲ ಮತ್ತು ಅದರ ಸೇವನೆಯ ಬಗ್ಗೆ ನಾವು ಗಮನ ಹರಿಸುವುದಿಲ್ಲ. ನೀವು ಹೆಚ್ಚು ಉಪ್ಪು ತಿನ್ನುತ್ತಿದ್ದೀರೋ ಇಲ್ಲವೋ ಎಂಬುದನ್ನು ಅರ್ಥಮಾಡಿಕೊಳ್ಳಲು, ನಿಮ್ಮ ದೇಹದೊಳಗಿನ ಕೆಲವು ಲಕ್ಷಣಗಳನ್ನು (Six Signs) ನೀವು ಗಮನಿಸಬೇಕು.

Written by - Nitin Tabib | Last Updated : Aug 20, 2021, 11:31 AM IST
  • ಹೆಚ್ಚಿನ ಪ್ರಮಾಣದಲ್ಲಿ ಉಪ್ಪಿನ ಸೇವನೆ ನಿದ್ರಾಹೀನತೆಗೆ ಕಾರಣ.
  • ಸುಸ್ತಿನ ಅನುಭವ ಕೂಡ ಅತಿಯಾದ ಉಪ್ಪು ಸೇವನೆಯ ಲಕ್ಷಣ.
  • ಪದೇ ಪದೇ ಬಾಯಾರಿಕೆಯಾಗುವುದು ಕೂಡ ಅಧಿಕ ಉಪ್ಪು ಸೇವನೆಯ ಲಕ್ಷಣ.
Side Effects Of Salt: ನೀವು ಅವಶ್ಯಕತೆಗಿಂತ ಹೆಚ್ಚು ಉಪ್ಪು ಸೇವಿಸುತ್ತಿರುವಿರಿ ಎನ್ನುತ್ತವೆ ಈ 6 ಸಂಕೇತಗಳು title=
Side Effects Of Salt (File Photo)

ನವದೆಹಲಿ: Side Effects Of Salt- ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂಬ ನಾಣ್ನುಡಿ ಎಲ್ಲರಿಗೂ ಗೊತ್ತೇ ಇದೆ, ಕಾರಣ ಉಪ್ಪಿಲ್ಲದೇ ಊಟ ರುಚಿಸುವುದೇ ಇಲ್ಲ. ಆದರೆ ಹಲವು ಬಾರಿ ಅವಶ್ಯಕತೆಗಿಂತ ಹೆಚ್ಚು ಉಪ್ಪು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ. ಇದರಿಂದ ನಿಮಗೆ ಅಧಿಕ ರಕ್ತದೊತ್ತಡ ಸೇರಿದಂತೆ, ಬಾವು ಹಾಗೂ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

ಹಲವು ಬಾರಿ ನಮಗೆ ನಾವು ಅಗತ್ಯಕ್ಕಿಂತ ಹೆಚ್ಚು ಉಪ್ಪನ್ನು ಸೇವಿಸುತ್ತಿದ್ದೇವೆ ಎಂಬುದು ತಿಳಿದಿರುವುದಿಲ್ಲ ಮತ್ತು ಅದರ ಸೇವನೆಯ ಬಗ್ಗೆ ನಾವು ಗಮನ ಹರಿಸುವುದಿಲ್ಲ. ನೀವು ಹೆಚ್ಚು ಉಪ್ಪು ತಿನ್ನುತ್ತಿದ್ದೀರೋ ಇಲ್ಲವೋ ಎಂಬುದನ್ನು ಅರ್ಥಮಾಡಿಕೊಳ್ಳಲು, ನಿಮ್ಮ ದೇಹದೊಳಗಿನ ಕೆಲವು ಲಕ್ಷಣಗಳನ್ನು ನೀವು ಗಮನಿಸಬೇಕು.

ಅನ್ಪ್ರೋಸೆಸ್ಸ್ದ್ ಪದಾರ್ಥಗಳಲ್ಲಿ ಸೋಡಿಯಂ 
ಆಹಾರಕ್ಕೆ ರುಚಿ ನೀಡುವುದರ ಜೊತೆಗೆ, ಉಪ್ಪನ್ನು ಆಹಾರ ಸಂಸ್ಕರಣೆಗಾಗಿ ಕೂಡ ಬಳಸಲಾಗುತ್ತದೆ. ಇದು ಶೇ. 60 ರಷ್ಟು ಕ್ಲೋರೈಡ್ ಮತ್ತು ಶೇ.40 ರಷ್ಟು ಸೋಡಿಯಂ ಅನ್ನು ಹೊಂದಿರುತ್ತದೆ. ತರಕಾರಿಗಳು, ಹಣ್ಣುಗಳು, ಮಾಂಸಗಳು, ಧಾನ್ಯಗಳು ಮತ್ತು ಡೈರಿ ಉತ್ಪನ್ನಗಳಂತಹ ಬಹುತೇಕ ಎಲ್ಲಾ ಸಂಸ್ಕರಿಸದ ವಸ್ತುಗಳು ಸಣ್ಣ ಪ್ರಮಾಣದ ಸೋಡಿಯಂ ಅನ್ನು ಹೊಂದಿರುತ್ತವೆ. ಉಪ್ಪನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ, ಆದರೆ ಅದನ್ನು ಅತಿಯಾಗಿ ತಿನ್ನುವುದು ಹಾನಿಕಾರಕವಾಗಿದೆ.

ಎಷ್ಟು ಉಪ್ಪು ನಮಗೆ ಅವಶ್ಯಕ
ನಮ್ಮ ದೇಹಕ್ಕೆ ಸೋಡಿಯಂ ಅತ್ಯಲ್ಪ ಪ್ರಮಾಣದಲ್ಲಿ ಬೇಕಾಗುತ್ತದೆ. ಪ್ರತಿದಿನ ಸುಮಾರು 1,500 ಮಿಗ್ರಾಂ. ಅತಿಯಾದ ಉಪ್ಪಿನ ಸೇವನೆಯು ಹೃದ್ರೋಗ, ಪಾರ್ಶ್ವವಾಯು ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ.

ಹೆಚ್ಚು ಉಪ್ಪು ಸೇವಿಸುವುದರಿಂದ ಈ ಸಮಸ್ಯೆಗಳು ಎದುರಾಗುತ್ತವೆ.
1. ಬ್ಲೋಟಿಂಗ್ (Bloating) -
ಹೆಚ್ಚು ಉಪ್ಪನ್ನು (Extra Salt) ತಿನ್ನುವುದರಿಂದ, ನೀವು ಯಾವಾಗಲೂ ಹೊಟ್ಟೆ ಉಬ್ಬರದ ಸಮಸ್ಯೆ ಅನುಭವಿಸುವಿರಿ. ಹೊಟ್ಟೆ ಉಬ್ಬುವುದು ಅಥವಾ  ಬಿರಿದಂತೆ (Stomach Upset) ಅನುಭವವಾಗುತ್ತದೆ. ರುಚಿಯಲ್ಲಿ ಹೆಚ್ಚು  ಉಪ್ಪು ಇರುವ ಅನುಭವವಾಗದ ಆಹಾರ ಪದಾರ್ಥಗಳು, ಕೆಲವೊಮ್ಮೆ ಹೆಚ್ಚಿನ ಸೋಡಿಯಂ ಅನ್ನು ಸಹ ಹೊಂದಿರುತ್ತವೆ. ಸ್ಯಾಂಡ್‌ವಿಚ್‌ಗಳು ಮತ್ತು ಪಿಜ್ಜಾಗಳಂತಹ ಆಹಾರ ಪದಾರ್ಥಗಳನ್ನು ಆದಷ್ಟು ಕಡಿಮೆ ಸೇವಿಸಿ.

ಇದನ್ನೂ ಓದಿ-Used Cooking Oil Side Effects: ಬಳಸಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸುವ ಮುನ್ನ ಅದರ ಅಪಾಯ ತಿಳಿಯಿರಿ

2. ಅಧಿಕ ರಕ್ತದೊತ್ತಡ (High BP) - ಅಧಿಕ ರಕ್ತದೊತ್ತಡಕ್ಕೆ ಹಲವು ಕಾರಣಗಳಿವೆ, ಆದರೆ ಹೆಚ್ಚು ಉಪ್ಪನ್ನು ತಿನ್ನುವುದರಿಂದ, ನಿಮ್ಮ ರಕ್ತದೊತ್ತಡ ಯಾವಾಗಲೂ ಅಧಿಕವಾಗಿರುತ್ತದೆ.

3. ಉರಿಯೂತ - ನಿಮ್ಮ ಮುಖ, ಕೈ, ಕಾಲು ಮತ್ತು ಪಾದಗಳಲ್ಲಿ ಊತವಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಏಕೆಂದರೆ ನೀವು ಹೆಚ್ಚು ಉಪ್ಪನ್ನು ಸೇವಿಸುತ್ತಿರುವಿರಿ ಎಂಬುದರ ಸಂಕೇತ ಅದು.

4. ಪದೇ ಪದೇ ಬಾಯಾರಿಕೆಯಾಗುವುದು - ನೀವು ಹೆಚ್ಚು ಉಪ್ಪು ಸೇವಿಸುತ್ತಿದ್ದರೆ ನಿಮಗೆ ಪದೇ ಪದೇ  ಬಾಯಾರಿಕೆಯಾಗುತ್ತದೆ. ಹೆಚ್ಚು ಉಪ್ಪನ್ನು ತಿನ್ನುವುದರಿಂದ ನಿಮಗೆ ನಿರ್ಜಲೀಕರಣದ ಅನುಭವವಾಗುತ್ತದೆ.

ಇದನ್ನೂ ಓದಿ-Upset Stomach : ಹೊಟ್ಟೆಯ ಪ್ರತಿಯೊಂದು ಸಮಸ್ಯೆಗೆ ತಪ್ಪದೆ ಸೇವಿಸಿ ಈ 5 ಆಹಾರಗಳನ್ನ..!

5. ಸರಿಯಾಗಿ ನಿದ್ರೆ ಬರುವುದಿಲ್ಲ - ಹೆಚ್ಚಿನ ಪ್ರಮಾಣದಲ್ಲೂ ಉಪ್ಪು ಸೇವನೆ ನಿದ್ರಾಹೀನತೆಗೆ ಕಾರಣ. ನೀವು ಚೆನ್ನಾಗಿ ನಿದ್ದೆ ಮಾಡುವುದಿಲ್ಲ ಮತ್ತು ಕೆಲವೊಮ್ಮೆ ನೀವು ಮಧ್ಯರಾತ್ರಿಯಲ್ಲಿ ಏಳುತ್ತೀರಿ.

6. ದೌರ್ಬಲ್ಯ ಹಾಗೂ ಆಯಾಸ - ಸುಸ್ತಿನ ಅನುಭವವಾಗುತ್ತದೆ. ಇದೂ ಕೂಡ ಹೆಚ್ಚು ಉಪ್ಪು ಸೇವಿಸುತ್ತಿರುವುದರ ಸಂಕೇತ. ಈ ರೀತಿ ಅನುಭವವಾಗುತ್ತಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ದೇಹದಲ್ಲಿನ ಸೋಡಿಯಂ ಮಟ್ಟವನ್ನು ಪರೀಕ್ಷಿಸಿ.

ಇದನ್ನೂ ಓದಿ-Bitter Gourd Juice: ರೋಗಗಳಿಂದ ದೂರವಿರಲು ನಿತ್ಯ ಸೇವಿಸಿ ಈ ಜ್ಯೂಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News