Side Effects Of Running: ಫಿಟ್ನೆಸ್ ಕಾಯ್ದುಕೊಳ್ಳುವ ಭರದಲ್ಲಿ ನೀವೂ ಕೂಡ ಈ ತಪ್ಪು ಮಾಡುತ್ತಿಲ್ಲವಲ್ಲ!

Side Effects Of Running: ಸಾಮಾನ್ಯವಾಗಿ ಆರೋಗ್ಯವಂತರಾಗಿ ಇರಲು ಜನರು ರನ್ನಿಂಗ್ ಮಾಡುತ್ತಾರೆ. ಆದರೆ, ಹಲವು ಬಾರಿ ಜನರು ಅತಿ ಉತ್ಸಾಹದಿಂದ ಹೆಚ್ಚು ಓಟ ಕೈಗೊಳ್ಳುತ್ತಾರೆ ಮತ್ತು ಇದರಿಂದ ಅವರ ಆರೋಗ್ಯಕ್ಕೆ ಲಾಭವಾಗುವ ಬದಲು ಹಾನಿ ಉಂಟಾಗುತ್ತದೆ.  

Written by - Nitin Tabib | Last Updated : Jun 1, 2022, 03:35 PM IST
  • ಫಿಟ್ ಆಗಿರಲು ಜನರು ನಿತ್ಯ ವಿವಿಧ ಕಸರತ್ತುಗಳನ್ನು ನಡೆಸುತ್ತಾರೆ.
  • ಕೆಲವರು ಜಿಮ್ ಗಳಲ್ಲಿ ಬೆವರು ಸುರಿಸಿದರೆ, ಇನ್ನೂ ಕೆಲವರು ರನ್ನಿಂಗ್ ಕೈಗೊಳ್ಳುತ್ತಾರೆ.
  • ಆದರೆ, ಹಲವು ಬಾರಿ ಫಿಟ್ನೆಸ್ ಕಾಪಾಡುವ ಭರದಲ್ಲಿ ಜನರು ಮಿಸ್ಟೇಕ್ ಮಾಡಿ ಬಿಡುತ್ತಾರೆ
Side Effects Of Running: ಫಿಟ್ನೆಸ್ ಕಾಯ್ದುಕೊಳ್ಳುವ ಭರದಲ್ಲಿ ನೀವೂ ಕೂಡ ಈ ತಪ್ಪು ಮಾಡುತ್ತಿಲ್ಲವಲ್ಲ! title=
Running Mistakes

Running Mistakes - ಫಿಟ್ ಆಗಿರಲು ಜನರು ನಿತ್ಯ ವಿವಿಧ ಕಸರತ್ತುಗಳನ್ನು ನಡೆಸುತ್ತಾರೆ. ಕೆಲವರು ಜಿಮ್ ಗಳಲ್ಲಿ ಬೆವರು ಸುರಿಸಿದರೆ, ಇನ್ನೂ ಕೆಲವರು ರನ್ನಿಂಗ್ ಕೈಗೊಳ್ಳುತ್ತಾರೆ. ಇದನ್ನು ಹೊರತುಪಡಿಸಿದರೆ, ಕೆಲವರು ಉಪಾವಾಸ ನಡೆಸಿದರೆ, ಉಳಿದವರು ವಿಶೇಷ ಡೈಟಿಂಗ್ ಅನುಸರಿಸುತ್ತಾರೆ. ಆದರೆ, ಹಲವು ಬಾರಿ ಜನರು ಫಿಟ್ ಆಗಿರಲು ಅತಿ ಉತ್ಸಾಹಿಗಳಾಗುತ್ತಾರೆ. ಉದಾಹರಣೆಗೆ ಬಾರ್ ರನ್ನಿಂಗ್ ಅಥವಾ ಸ್ಪ್ರಿಂಟಿಂಗ್ ಮಾಡುವುದು ಇತ್ಯಾದಿ. ತೂಕ ಇಳಿಕೆಯಿಂದ ಹಿಡಿದು ಒಟ್ಟಾರೆ ಶರೀರದ ಫಿಟ್ ನೆಸ್ ಗಾಗಿ ರನ್ನಿಂಗ್ ಒಂದು ಉತ್ತಮ ಮಾರ್ಗವಾಗಿದೆ. ಆದರೆ, ಈ ರೀತಿ ಜನರು ನಿಯಮಿತವಾಗಿ ಮಾಡಿದರೆ, ರನ್ನಿಂಗ್ ನಿಂದ ನಿಮಗೆ ಲಾಭವಾಗುವ ಬದಲು ಹಾನಿಯೇ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಅತಿ ಹೆಚ್ಚು ಓಡುವುದರಿಂದ ಆಗುವ ಹಾನಿಗಳು
1. ಸ್ನಾಯುಗಳು ದುರ್ಬಲಗೊಳ್ಳುತ್ತವೆ -
ಹೆಚ್ಚು ಓಡುವುದು ನಿಮ್ಮ ಸ್ನಾಯುಗಳ ಮೇಲೆ ಪರಿಣಾಮ ಬೀರಬಹುದು. ಅವು ದುರ್ಬಲಗೊಂಡು ಗಾಯಗೊಳ್ಳುತ್ತವೆ. ಇದಲ್ಲದೇ ದಿನನಿತ್ಯ ಹೆಚ್ಚು ಓಡುವವರಲ್ಲಿ ದೈಹಿಕ ಬಳಲಿಕೆಯೂ ಹೆಚ್ಚಾಗಿರುತ್ತದೆ ಮತ್ತು ಇಂತಹ ಪರಿಸ್ಥಿತಿಯಲ್ಲಿ ಅವರು ಪ್ಲಾಂಟರ್ ಫ್ಯಾಸಿಟಿಸ್, ಸ್ನಾಯುಗಳ ಉರಿಯೂತಕ್ಕೆ ಗುರಿಯಾಗಬಹುದು. ಜೊತೆಗೆ, ಇದು ಹಿಮ್ಮಡಿಯಲ್ಲಿ ತೀವ್ರವಾದ ನೋವನ್ನು ಉಂಟುಮಾಡಬಹುದು.

2. ಹಸಿವು ಕ್ಷೀಣಿಸುತ್ತದೆ - ನಿಮ್ಮ ಚಟುವಟಿಕೆಯ ಮಟ್ಟದಲ್ಲಿನ ಯಾವುದೇ ಹೆಚ್ಚಳವು ನಿಮ್ಮ ಚಯಾಪಚಯವ ಕ್ರಿಯೆಗೆ ಪ್ರಚೋದನೆ ನೀಡುತ್ತದೆ ಮತ್ತು ನಿಮ್ಮ ಹಸಿವನ್ನು ಹೆಚ್ಚಿಸುತ್ತದೆ. ಆದರೆ ನೀವು ಹೆಚ್ಚು ಓಡುವ ಮೂಲಕ ಆಗುವ ಕಸರತ್ತು, ನಿಮ್ಮ ದೇಹವನ್ನು  ಆಯಾಸದ ಸ್ಥಿತಿಗೆ ತರುತ್ತದೆ, ಅದು ನಿಮ್ಮ ಹಸಿವನ್ನು ಕ್ಷೀಣಿಸುತ್ತದೆ, ಇದರಿಂದ ನೀವು ಹಸಿವನ್ನು ಕಳೆದುಕೊಂಡು ನಿಮ್ಮ ದೇಹವು ಜೀವನಸತ್ವ ಮತ್ತು ಖನಿಜಗಳಿಂದ ವಂಚಿತವಾಗಬಹುದು. 

3. ರೋಗನಿರೋಧಕ ಶಕ್ತಿ ಕಮ್ಮಿಯಾಗುತ್ತದೆ - ಓಟವು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ನೀವು ಪ್ರತಿದಿನ ಅತಿಯಾಗಿ ಓಡಲು ಪ್ರಾರಂಭಿಸಿದರೆ, ಅದರಿಂದ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ಆಯಾಸಕ್ಕೆ ಒಳಗಾಗಿ, ದುರ್ಬಲಗೊಳ್ಳಲು ಕಾರಣವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ, ನೀವು ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗಬಹುದು. ಇದರ ಜೊತೆಗೆ, ಜ್ವರ, ಸ್ನಾಯು ನೋವು, ಮೂಳೆ ನೋವು ಮತ್ತು ಖಿನ್ನತೆಯಂತಹ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಳ್ಳಲು ಆರಂಭವಾಗುತ್ತವೆ.

4. ಮೂಡ್ ಸ್ವಿಂಗ್ ಹೆಚ್ಚಾಗುತ್ತದೆ -  ವ್ಯಾಯಾಮವು ನಿಮ್ಮ ಮೆದುಳಿನಲ್ಲಿ ಧನಾತ್ಮಕ ಪ್ರತಿಕ್ರಿಯೆಯನ್ನು ಪ್ರಚೋದಿಸುವ ಎಂಡಾರ್ಫಿನ್‌ ಹಾರ್ಮೊನಿನ ಉತ್ಪತ್ತಿಗೆ ಕಾರಣವಾಗುತ್ತದೆ. ಆದರೆ ನೀವು ಹೆಚ್ಚು ಓಡಿದಾಗ ಎಂಡಾರ್ಫಿನ್‌ ಪ್ರಭಾವಕ್ಕೆ ಒಳಗಾಗಿ ಆಯಾಸ ಮತ್ತು ನಿದ್ರೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಈ ಹಾರ್ಮೋನುಗಳ ಅಸಮತೋಲನ ಉಂಟಾಗಿ ಅದು ಮೂಡ್ ಸ್ವಿಂಗ್ಗೆ ಕಾರಣವಾಗುತ್ತದೆ.

ಇದನ್ನೂ ಓದಿ-Water: ಈ ರೋಗಗಳಿಂದ ದೂರವಿರಲು ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ನೀರು ಕುಡಿದರೆ ಸಾಕು!

5. ರಾತ್ರಿ ನಿದ್ರೆಯ ವೇಳೆ ಅಡಚಣೆ ಎದುರಾಗಬಹುದು - ಅತಿಯಾದ ಓಟವು ರಾತ್ರಿಯಲ್ಲಿ ದೇಹದ ನೋವನ್ನು ಉಂಟುಮಾಡುತ್ತದೆ ಮತ್ತು ನಿಮ್ಮ ನಿದ್ರೆಯ ಮೇಲೆ ಅದು ಪರಿಣಾಮ ಬೀರುತ್ತದೆ. ಇದು ಆಯಾಸವನ್ನು ಉಂಟುಮಾಡುತ್ತದೆ ಮತ್ತು ಸಿರ್ಕಾಡಿಯನ್ ಲಯಗಳಲ್ಲಿ ಬದಲಾವಣೆಗಳನ್ನು ಉಂಟು ಮಾಡುತ್ತದೆ. ಇದಲ್ಲದೇ ದೀರ್ಘಕಾಲ ಈ ರೀತಿ ಇರುವುದು ಒತ್ತಡ, ಖಿನ್ನತೆ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ-Health Benefits Of Jaggery: ಹಾಲು ಮತ್ತು ಬೆಲ್ಲವನ್ನು ಬೆರಸಿ ಕುಡಿಯುವುದರಿಂದ ಆಗುವ ಈ ಲಾಭಗಳು ನಿಮಗೂ ತಿಳಿದಿರಲಿ

ಹೀಗಿರುವಾಗ ಒಂದು ವೇಳೆ ನೀವೂ ಕೂಡ ಪ್ರತಿನಿತ್ಯ ರನ್ನಿಂಗ್ ಕೈಗೊಳ್ಳುತ್ತಿದ್ದು, ಮೊಣಕಾಲು ನೋವು ಮತ್ತು ಕಾಲು ಉಳುಕುವಿಕೆಯಂತಹ ಸಾಮಾನ್ಯ ಗಾಯಗಳನ್ನು ಅನುಭವಿಸುತ್ತಿದ್ದರೆ ಅವುಗಳನ್ನು ನಿರ್ಲಕ್ಷಿಸಬೇಡಿ. ಇಂತಹ ಪರಿಸ್ಥಿತಿಯಲ್ಲಿ, ನೀವು ಎಷ್ಟು ಓಡುತ್ತಿದ್ದೀರಿ, ಎಷ್ಟು ಕ್ಯಾಲೋರಿ ಬರ್ನ್ ಮಾಡುತ್ತಿರುವಿರಿ ಮತ್ತು ತರಬೇತಿಗಾಗಿ ನೀವು ಯಾವ ಬೂಟುಗಳನ್ನು ಧರಿಸುತ್ತಿದ್ದೀರಿ ಎಂಬುದನ್ನು ಒಮ್ಮೆ ಪರಿಶೀಲಿಸಿ ಮತ್ತು ನಿಮ್ಮ ಓಟವನ್ನು ಕಡಿಮೆ ಮಾಡಿ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News