Side Effects Of Tea: ನೀವು ಚಹಾ ಪ್ರಿಯರೆ! ಹಾಗಂತ ಅತಿಯಾಗಿ ಸೇವಿಸಿದರೆ ತಪ್ಪಿದ್ದಲ್ಲ ಅಪಾಯ!

Side Effects Of Drinking Tea: ಟೀ ಕುಡಿದ ನಂತರ ದೇಹದಲ್ಲಿ ಉತ್ಕೃಷ್ಟವಾದ ತಾಜಾತನ ಮತ್ತು ಉಪಶಮನದ ಭಾವನೆ ಇರುತ್ತದೆ. ಆದರೆ ಅತಿಯಾದ ಚಹಾ ಸೇವನೆಯಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ನಿಮಗೆ ತಿಳಿದಿದೆಯೇ.

Written by - Yashaswini V | Last Updated : May 30, 2022, 12:37 PM IST
  • ನಮ್ಮಲ್ಲಿ ಹೆಚ್ಚಿನವರು ಚಹಾದೊಂದಿಗೆ ತಮ್ಮ ದಿನವನ್ನು ಆರಂಭಿಸುತ್ತಾರೆ.
  • ಇದನ್ನು ಬೆಡ್ ಟೀ ಎಂದೂ ಕರೆಯುತ್ತಾರೆ.
  • ಆದರೆ, ಖಾಲಿ ಹೊಟ್ಟೆಯಲ್ಲಿ ಚಹಾವನ್ನು ಕುಡಿಯುವ ತಪ್ಪನ್ನೂ ಎಂದಿಗೂ ಮಾಡದಿರಿ.
Side Effects Of Tea: ನೀವು ಚಹಾ ಪ್ರಿಯರೆ! ಹಾಗಂತ ಅತಿಯಾಗಿ ಸೇವಿಸಿದರೆ ತಪ್ಪಿದ್ದಲ್ಲ ಅಪಾಯ! title=
Side Effects Of Tea

ಟೀ ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳಿವು : ನೀರಿನ ನಂತರ, ಭಾರತದಲ್ಲಿ ಒಂದು ಜನಪ್ರಿಯ ಪಾನೀಯ ಎಂದರೆ ಅದು ಟೀ. ಇದನ್ನು ಚಹಾ ಎಂತಲೂ ಕರೆಯುವುದುಂಟು. ಚಹಾ ಪ್ರಿಯರಿಗೆ ಯಾವುದೇ ಕೊರತೆ ಇಲ್ಲ. ನಮ್ಮಲ್ಲಿ ಹಲವರು ನಿತ್ಯ ತಮ್ಮ ದಿನವನ್ನು ಚಹಾದೊಂದಿಗೆ ಪ್ರಾರಂಭಿಸಲು ಇಚ್ಚಿಸುತ್ತಾರೆ. ಅಷ್ಟೇ ಅಲ್ಲ ದಿನವಿಡೀ ತಮಗೇ ಬೇಕೆಂದಾಗಲೆಲ್ಲಾ ಚಹಾ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಚಹಾ ಒಂದು ಅಡಿಕ್ಷನ್ ಎಂದರೂ ತಪ್ಪಾಗುವುದಿಲ್ಲ. ಆದರೆ, ತಿಳಿದೋ ಅಥವಾ ತಿಳಿಯದೆಯೋ ಅದು ನಿಮಗೆ ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ?

ಅತಿಯಾದ ಚಹಾ ಸೇವನೆ ಆರೋಗ್ಯಕ್ಕೆ ಹಾನಿಕಾರಕ:
ಟೀ ಕುಡಿದ ನಂತರ ದೇಹದಲ್ಲಿ ಉತ್ಕೃಷ್ಟವಾದ ತಾಜಾತನ ಮತ್ತು ಉಪಶಮನದ ಭಾವನೆ ಇರುತ್ತದೆ. ಟೀ ಕುಡಿಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಬಹುದು. ಆದರೆ ಫ್ರೆಶ್ ಆಗಿರಬೇಕೆಂಬ ಬಯಕೆ ದೇಹದ ಆರೋಗ್ಯವನ್ನು ಹಾಳು ಮಾಡುತ್ತದೆ. ಹೆಚ್ಚು ಟೀ ಕುಡಿಯುವುದರಿಂದ ಆಗುವ ಅನಾನುಕೂಲಗಳೇನು ಎಂಬುದನ್ನು ತಿಳಿಯೋಣ...

ಹೆಚ್ಚು ಚಹಾ ಕುಡಿಯುವುದರಿಂದ ಉಂಟಾಗುವ ನಾಲ್ಕು ಅನಾನುಕೂಲಗಳಿವು:
1. . ಹೊಟ್ಟೆನೋವು:

ನಮ್ಮಲ್ಲಿ ಹೆಚ್ಚಿನವರು ಚಹಾದೊಂದಿಗೆ ತಮ್ಮ ದಿನವನ್ನು ಆರಂಭಿಸುತ್ತಾರೆ. ಇದನ್ನು ಬೆಡ್ ಟೀ ಎಂದೂ ಕರೆಯುತ್ತಾರೆ. ಆದರೆ, ಖಾಲಿ ಹೊಟ್ಟೆಯಲ್ಲಿ ಚಹಾವನ್ನು ಕುಡಿಯುವ  ತಪ್ಪನ್ನೂ ಎಂದಿಗೂ ಮಾಡದಿರಿ. ಏಕೆಂದರೆ ಇದು ಜೀರ್ಣಕ್ರಿಯೆಯನ್ನು ಹಾಳುಮಾಡುತ್ತದೆ ಮತ್ತು ಹೊಟ್ಟೆಯಲ್ಲಿ ತೊಂದರೆಯನ್ನು ಉಂಟುಮಾಡುತ್ತದೆ.

ಇದನ್ನೂ ಓದಿ- Type 2 Diabetes: ಈ ಬೆಳಗಿನ ಪಾನೀಯ ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ರಾಮಬಾಣವಿದ್ದಂತೆ!

2. ಮಧುಮೇಹ:
ಡಯಾಬಿಟಿಸ್ ಒಂದು ಕಾಯಿಲೆಯಾಗಿದ್ದು, ಒಮ್ಮೆ, ಈ ಕಾಯಿಲೆಗೆ ತುತ್ತಾದರೆ ಕೊನೆಯವರೆಗೂ ಇದಕ್ಕೆ ಚಿಕಿತ್ಸೆ ಪಡೆಯಬೇಕು. ಆದರೂ ಕೆಲವು ಆಹಾರದಿಂದ ದೂರವಿರುವುದರಿಂದ ಇದನ್ನು ನಿಯಂತ್ರಿಸಬಹುದು. ಹೆಚ್ಚಿನ ವೈದ್ಯರು ಮಧುಮೇಹ ರೋಗಿಗಳಿಗೆ ಚಹಾ ಕುಡಿಯಬೇಡಿ ಎಂದು ಸಲಹೆ ನೀಡುತ್ತಾರೆ.

3. ಬೊಜ್ಜು :
ಕೆಲವರು ತೂಕವನ್ನು ವೇಗವಾಗಿ ಕಳೆದುಕೊಳ್ಳಲು ಬಯಸುತ್ತಾರೆ, ಆದರೆ ಚಹಾದ ಪ್ರಲೋಭನೆಯನ್ನು ಬಿಟ್ಟುಕೊಡಲು ಸಾಧ್ಯವಾಗುವುದಿಲ್ಲ. ಅತಿಯಾದ ಚಹಾ ಸೇವನೆಯು ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಆದ್ದರಿಂದ ನೀವೂ ತೂಕ ಕಡಿಮೆ ಮಾಡಲು ಬಯಸಿದರೆ ಇಂದೇ ಈ ಪಾನೀಯವನ್ನು ತ್ಯಜಿಸಿ.

4. ಹೃದಯದ ಆರೋಗ್ಯದ ಮೇಲೆ ಪರಿಣಾಮ:
ನೀವು ಉತ್ತಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸಿದರೆ, ದೈನಂದಿನ ಆಹಾರದಿಂದ ಕೆಲವು ವಿಷಯಗಳನ್ನು ಹೊರಗಿಡಬೇಕು, ಅವುಗಳಲ್ಲಿ ಚಹಾ ಕೂಡ ಒಂದು. ಆರೋಗ್ಯಕರ ಹೃದಯಕ್ಕೆ ಅಪಾಯಕಾರಿಯಾದ ಇಂತಹ ಕೆಲವು ಅಂಶಗಳು ಇದರಲ್ಲಿ ಕಂಡುಬರುತ್ತವೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- ಈ ಅನ್ನವನ್ನು ಸೇವಿಸುವುದರಿಂದ ಹೆಚ್ಚುವುದಿಲ್ಲ ದೇಹ ತೂಕ .! ಕರಗುತ್ತದೆ belly fat

ಚಹಾವನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುವುದು ಅಪಾಯಕಾರಿ:
ಕೆಲವರು ಸೋಮಾರಿತನದಿಂದ ಒಮ್ಮೆ ಟೀ ತಯಾರಿಸಿ ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುತ್ತಾರೆ. ಈ ಕಾರಣದಿಂದಾಗಿ, ಚಹಾದಿಂದ ಉಂಟಾಗಬಹುದಾದ ದುಷ್ಪರಿಣಾಮಗಳು ಹೆಚ್ಚು. ಏಕೆಂದರೆ ಚಹಾವನ್ನು ಮತ್ತೆ ಮತ್ತೆ ಬಿಸಿ ಮಾಡಿದಾಗ ಅದರಿಂದ ಹಾನಿಕಾರಕ ರಾಸಾಯನಿಕಗಳು ಬಿಡುಗಡೆಯಾಗಲು ಪ್ರಾರಂಭಿಸುತ್ತವೆ ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News